ತಿಪಟೂರು : ನೊಣವಿನಕೆರೆ ಹೋಬಳಿಯ ಕಾಡಶೆಟ್ಟಿಹಳ್ಳಿ ಗ್ರಾಮದ ಶಂಕರಮೂರ್ತಿ (50) ಕಾಣೆಯಾಗಿದ, ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ.
ಜೂನ್ 24 ಮಧ್ಯರಾತ್ರಿ 12ರ ಸಮಯದಲ್ಲಿ ನನ್ನ ಚಿಕ್ಕಪ್ಪ ಕಾಣೆಯಾಗಿದ್ದಾನೆ ಎಂದು ಶಂಕರಮೂರ್ತಿ ಸಂಬಂದಿ ಲೋಕೇಶ್ ನೊಣವಿನಕೆರೆ ಪೋಲೀಸ್ ಠಾಣೆ ದೂರು ನೀಡಿದರು. ತನಿಖೆ ಆರಂಭಿಸಿದ ಪೋಲೀಸರು ಶಂಕರಮೂರ್ತಿ ಮಲಗುವ ಕೋಣೆಯಲ್ಲಿ ಕಾರದ ಪುಡಿ ಚೆಲ್ಲಾಡಿರುವುದನ್ನು ಗಮನಿಸಿ,ಶಂಕರಮೂರ್ತಿ ಹೆಂಡತಿ ಸುಮಂಗಲ ರವರನ್ನ ತನಿಖೆ ಮಾಡಿದ್ದಾಗ.ಸುಮಂಗಳ ಹಾಗೂ ಆಕೆಯ ಗೆಳಯ ನಾಗರಾಜು ದೊಣ್ಣೆ ಹಾಗೂ ಸುತ್ತಿಗೆಯಿಂದ ಹೊಡೆದು ಕೊಲೆಗೈದು ಚೀಲದಲ್ಲಿ ತುಂಬಿ ದೊಡ್ಡಗುಣಿ ರಂಬಾಪುರಿ ಮಠದ ಹತ್ತಿರವಿರುವ ಪಂಪ್‌ಹೌಸ್ ಬಳಿ ಹಾಕಿದ್ದರು. ಎಂದು ತನಿಖೆಯಲ್ಲಿ ತಿಳಿದು ಬಂದಿದೆ.ಸುಮಂಗಳ ತಿಪಟೂರು ನಗರದ ಕಲ್ಪತರು ಕಾಲೇಜು ಬಾಲಕರ ಹಾಸ್ಟೆಲ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದು ಕಳೆದ 8ತಿಂಗಳಿನಿಂದ ತಿಪಟೂರಿನಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರೂ ಎನ್ನಲಾಗಿದೆ. ಸುಮಂಗಳ ನಡೆಯಬಗ್ಗೆ ಶಂಕರಮೂರ್ತಿ ಪ್ರಶ್ನೆ ಮಾಡಿದ್ದಾಗ.ಇಬ್ಬರ ನಡುವೆ ಗಲಾಟೆ ಆರಂಭವಾಗಿದ್ದು.ಶಂಕರಮೂರ್ತಿ ಮನೆಗೆ ಸುಮಂಗಳ ಹಾಗೂ ಆಕೆಯ ಗೆಳಯ ನಾಗರಾಜು ಹೊಗಿದ್ದು.ಸುಮಂಗಳ ಹಾಗೂ ನಾಗರಾಜು ಸೇರಿ ಶಂಕರಮೂರ್ತಿಯನ್ನ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ
ಘಟನಾ ಸ್ಥಳಕ್ಕೆ ಜಿಲ್ಲಾ ಪೋಲೀಸ್ ಹೆಚ್ಚುವರಿ ಉಪಾಧೀಕ್ಷಕ ಪುರುಷೋತ್ತಮ್, ಗೋಪಾಲ್, ಡಿವೈಎಸ್‌ಪಿ ವಿನಾಯಕ ಶೆಟಿಗೇರಿ, ತಿಪಟೂರು ಗ್ರಾಮಾಂತರ ವೃತ್ತ ನಿರೀಕ್ಷಕ ಚಂದ್ರಶೇಖರ್, ನೊಣವಿನಕೆರೆ ಪೋಲೀಸ್ ಠಾಣಾಧಿಕಾರಿ ಬಸವರಾಜು ಭೇಟಿ ನೀಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತುಮಕೂರಿನ ಸಾರ್ವಜನಿಕ ಆಸ್ವತ್ರೆಗೆ ರವಾನಿಸಿ, ನೋಣವಿನಕೆರೆ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ



