ತಿಪಟೂರು: ಬೀದಿಯಲ್ಲಿ ಆಟವಾಡುತ್ತಿದ್ದ 6ವರ್ಷದ ಮಗುವಿನ ಮೇಲೆ ದಾಳಿ ನಡೆಸಿದ ಬೀದಿನಾಯಿಗಳ ಹಿಂಡು ಮಗುವಿನ ತಲೆ ಹಾಗೂ ಹೊಟ್ಟೆಯನ್ನ ತಿಂದು ಹಾಕುರುವ ಹೃದಯ ವಿದ್ರಾವಕ ಘಟನೆ ತಿಪಟೂರು ತಾಲ್ಲೋಕಿನ ಕಸಬಾ ಹೋಬಳಿ ಅಯ್ಯನಬಾವಿ ಬೋವಿ ಕಾಲೋನಿಯಲ್ಲಿ ನಡೆದಿದೆ.

ಅಯ್ಯನಬಾವಿ ಗ್ರಾಮದ ನಿವಾಸಿ ಮಹಲಿಂಗಯ್ಯನವರ ಮಗಳು 6ವರ್ಷದ ನವ್ಯ ಬೀದಿನಾಯಿಗಳ ದಾಳಿಗೊಳಗಾದ ನತದೃಷ್ಟೆ
ಮಧ್ಯಾಹ್ನ 04ಗಂಟೆ ಸಮಯದಲ್ಲಿ ಅಯ್ಯನ ಬಾವಿ ಗ್ರಾಮದ ತಮ್ಮ ಮನೆ ಮುಂದೆ ಆಟವಾಡುತ್ತಿದ್ದ ನವ್ಯಾಳ ಮೇಲೆ ಬೀದಿ ನಾಯಿಗಳ ಹಿಂಡು ದಾಳಿನಡೆಸಿವೆ. ದಾಳಿನಡೆಸಿದ ನಾಯಿಗಳು ಮಗುವಿನ ತಲೆಯ ಚರ್ಮವನ್ನ ಸಂಪೂರ್ಣವಾಗಿ ಕಿತ್ತುಹಾಕಿದ್ದು .
ಹೊಟ್ಟೆಯಲ್ಲಿ ಕಿತ್ತು ಕರುಳು ಆಚೆಬರುವಂತೆ ಮಾಡಿವೆ. ಮಗುವಿನ ಮುಖ ಹಾಗೂ ಕೈ.ಕಾಲು ತೊಡೆಭಾಗವನ್ನ ಕಿತ್ತು ಹಾಕಿವೆ.ರಕ್ತದ ಮಡುವಿನಲ್ಲಿ ಕೀರಾಡುತ್ತಿದ್ದ ಮಗುವನ್ನ ಕಂಡ ಸಾರ್ವಜನಿಕರು.ನಾಯಿಯಿಂಡನ್ನ ಓಡಿಸಿ ಮಗುವನ್ನ ತಕ್ಷಣ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು.ಮಗು ತೀವ್ರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ




