ತಿಪಟೂರು:ಸರ್ಕಾರ ಚುನಾವಣೆ ವೇಳೆಯಲ್ಲಿ ನೀಡಿದ ಭರವಸೆಯಂತೆ ಹತ್ತು ಕೆ.ಜಿ ಪಡಿತರ ಧಾನ್ಯ ವಿತರಣೆ ಮಾಡಲಾಗುತ್ತಿದೆ.ಆದರೆ ವಿರೋಧ ಪಕ್ಷಗಳು ಪಡಿತರ ಅಕ್ಕಿಯನ್ನ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ,ಅನ್ನುವ ಆರೋಪವಿದ್ದು,ಸರ್ಕಾರ ಪಡಿತರ ಧಾನ್ಯ ವಿತರಣೆ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ.ಹತ್ತು ಕೆ.ಜಿ ಅಕ್ಕಿ ಬದಲಾಗಿ ಬಡವರಿಗೆ ಅನುಕೂಲವಾಗುವಂತೆ ಒಂದು ಕೆ.ಜಿ ಬೇಳೆ,ಒಂದು ಕೆ.ಜಿ ಅಡುಗೆ ಎಣ್ಣೆ,ಉಪ್ಪು,ಸಕ್ಕರೆ ವಿತರಣೆ ಮಾಡಲಾಗುವುದು,ಸರ್ಕಾರದಿಂದ ಈ ಎಲ್ಲಾ ಯೋಜನೆಗೆ ಸುಮಾರು 60 ಸಾವಿರ ಕೋಟಿ ವೆಚ್ಚವಾಗಲಿದೆ,ಆದರೂ ಪರವಾಗಿಲ್ಲ,ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ,ಕೊಟ್ಟಮಾತಿನಂತೆ ಐದು ವರ್ಷ ಪಡಿತರಧಾನ್ಯ ವಿತರಣೆ ಮಾಡುತ್ತೇವೆ. ಮುಂದಿನ ಭಾರಿಯೂ ನಮ್ಮ ಸರ್ಕಾರ ಗೆಲ್ಲಿಸಿ ಯೋಜನೆ ಮುಂದುವರೆಸುತ್ತೇವೆ ಎಂದರು

ತಾಲ್ಲೋಕಿನ ಕಸಬಾ ಹೋಬಳಿ ಗೌಡನಕಟ್ಟೆ ಗ್ರಾಮದಲ್ಲಿ ಆಯೋಜಿಸಿದ ಸುಮಾರು 80ಲಕ್ಷ ವೆಚ್ಚದ ಗುರುಗದಹಳ್ಳಿ ಗೌಡನಕಟ್ಟೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲೀಪೂಜೆ ನೆರವೇರಿಸಿದ ಶಾಸಕ ಕೆ.ಷಡಕ್ಷರಿ ಯವರು ಕಾಂಗ್ರೇಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ದಿಯಲ್ಲಿಯೂ ಹಿಂದೆ ಬಿದ್ದಲ್ಲ,ಸುಮಾರು ನೂರುಕೋಟಿ ಯೋಜನೆಗಳು ಪ್ರಗತಿಯಲ್ಲಿವೆ,ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವರ ನಾಗರಾಜು.ಗುರುಗದಹಳ್ಳಿ ಗ್ರಾ.ಪಂ ಅಧ್ಯಕ್ಷ ಆರ್.ಸಿ ಚಂದ್ರಶೇಖರ್. ನಗರಸಭಾ ಸದಸ್ಯ ಲೋಕನಾಥ್ ಸಿಂಗ್, ತಿಮ್ಮೆಗೌಡ ಶಶಿ,ಪಿಡಿಓ ಶಂಕರ್ ಬಿಳೂರು.ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ







