ತಿಪಟೂರು : ನಗರದ ಕಲ್ಪತರು ಮಹಿಳಾ ಸಂಸ್ಥೆ ಹಾಗೂ ಶ್ರೀ ವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ಕಿಡ್ಜೀ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಯೋಜನೆ ಮಾಡಲಾಗಿತ್ತು.

ಶಾಲೆಯ ಮುಖ್ಯಸ್ಥ ಡಾ.ಕೇಶವ್‌ಕುಮಾರ್ ಮಾತನಾಡಿ ಎಲ್ಲಾ ವ್ಯಕ್ತಿಗೂ ತಾಯಿಯೇ ಮೊದಲ ಗುರುವಾಗಿದ್ದು, ಶಾಲೆ ಎರಡನೇ ಗುರುಸ್ಥಾನವಾಗಿದೆ. ತಂದೆ ತಾಯಿ ತನ್ನ ರಕ್ತ ಸಂಬಂಧದಿಂದ ಮಕ್ಕಳಿಗೆ ಪೋಷಣೆ ಮಾಡಿದರೆ, ಯಾವುದೇ ರಕ್ತ ಸಂಬಂಧವಿಲ್ಲದ ಶಿಕ್ಷಕ ಮಕ್ಕಳಿಗೆ ಭವಿಷ್ಯದ ಮಾರ್ಗದರ್ಶಕವನ್ನು ನೀಡುವ ಜೊತೆಗೆ ವಿದ್ಯಾರ್ಥಿಗಳಿಗೆ ಜ್ಞಾನದ ದಾರಿಯನ್ನು ತೋರಿಸುತ್ತಾರೆ. ವಿದ್ಯಾರ್ಥಿಗಳು ತನ್ನ ಪೋಷಕರಿಗೆ ಹಾಗೂ ಬದುಕಿಗೆ ದಾರಿ ತೋರಿದ ಗುರುವಿಗೆ, ವಿದ್ಯೆ ಕಲಿಸಿದ ಸಂಸ್ಥೆಗೆ ಗೌರವ ನೀಡಿದಾಗ ವಿದ್ಯೆಗೆ ಹಾಗೂ ಜ್ಞಾನಕ್ಕೆ ಬೆಲೆ ಸಿಗುತ್ತದೆ ಎಂದು ತಿಳಿಸಿದರು.
ಮಹಿಳಾ ಸಂಸ್ಥೆಯ ಅಧ್ಯಕ್ಷೆ ರೇವತಿಉಮೇಶ್ ಮಾತನಾಡಿ ಶಿಕ್ಷಕರ ತ್ಯಾಗದ ಪರಿಶ್ರಮದ ಮುಂದೆ ವಿದ್ಯಾರ್ಥಿಗಳು ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳು ಬದುಕಿನ ಭವಿಷ್ಯದ ಕನಸುಗಳನ್ನು ಹೊತ್ತು ಗುರುಕುಲಗಳಿಗೆ ಆಗಮಿಸಿದಾಗ ಸುಂದರ ಮೂರ್ತಿಯನ್ನಾಗಿ ಮಾಡುವ ಕರ್ತವ್ಯ ಗುರುಪರಂಪರೆಯಾಗಿದ್ದು, ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅಗ್ರಸ್ಥಾನವನ್ನು ನೀಡಲಾಗಿದೆ. ಗುರುವಿನ ತ್ಯಾಗ ಸಮರ್ಪಣಾ ಭಾವ, ಅವರ ಪ್ರೇರಣೆಯೇ ವಿದ್ಯಾರ್ಥಿಯ ಯಶಸ್ಸಿಗೆ ಬಹುದೊಡ್ಡ ಶಕ್ತಿಯಾಗಿ ನಿಲ್ಲುತ್ತದೆ ಎಂದರು.

ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಂದ 20ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ ಡಾ.ಟಿ.ಆರ್.ಕೇಶವ್‌ಕುಮಾರ್, ಉಪ ಪ್ರಾಂಶುಪಾಲೆ ಅಜರಾನೂರ್‌ಫೌಸಿಯಾ, ಸಂಸ್ಥೆಯ ಶಿಕ್ಷಣ ಸಂಯೋಜಕಿ ಶೀಲಾರಮೇಶ್, ಕಲ್ಪತರು ಮಹಿಳಾ ಸಂಸ್ಥೆಯ ಅಧ್ಯಕ್ಷ ರೇವತಿ ಉಮೇಶ್, ಉಪಾಧ್ಯಕ್ಷೆ ಕೀರ್ತಿಕಿಶೋರ್, ಕಾರ್ಯದರ್ಶಿ ಸುಮನಕುಮಾರ್, ಮಂಜುಳಾತಿಮ್ಮೇಗೌಡ, ಪ್ರಭುವಿಶ್ವನಾಥ್, ಲತಾಮೂರ್ತಿ, ವೇದಸುರೇಶ್, ಜಯಶೀಲಾ, ಭಾಗ್ಯಮೂರ್ತಿ, ರಶ್ಮಿಸ್ವಾಮಿ, ಜಯಬಸವರಾಜು, ಶಿಕ್ಷಕ ವೃಂದ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ:ಮಂಜುನಾಥ್ ಹಾಲ್ಕುರಿಕೆ








