ತಿಪಟೂರು: ತಾಲ್ಲೋಕಿನ ಹಾಲ್ಕುರಿಕೆ ಗ್ರಾಮದಲ್ಲಿ ಮನೆ ಬಳಿಇದ್ದ ಬಾಳೆ ಗಿಡ ಎತ್ತಲು ಹೋಗಿ ವಿದ್ಯುತ್ ತಂತಿ ಸ್ಪರ್ಶ ಶಾಕ್ ಗೆ ಒಳಗಾಗಿ ಮೃತಪಟ್ಟ ಪ್ರಕರಣದಲ್ಲಿ ಬೆಸ್ಕಾಂ ಸಿಬ್ಬಂದಿಯ ಕರ್ತವ್ಯ ಲೋಪವೇ ವಿದ್ಯುತ್ ಅಪಘಾತಕ್ಕೆ ಕಾರಣ ಎಂದು ಕರ್ತವ್ಯ ಲೋಪವೆಸಗಿರುವ ಸಿಬ್ಬಂದಿಗೆ ತಿಪಟೂರು ಜೆ.ಎಂ.ಎಫ್.ಸಿ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿದಿಸಿದೆ.
ಪ್ರಕರಣದ ಸಾರಾಂಶಃ ದಿನಾಂಕ 14/04/2014 ರಂದು ಮದ್ಯಾಹ್ನ ಸುಮಾರು 3-30 ಗಂಟೆ ಸಮಯದಲ್ಲಿ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ , ಹಾಲ್ಕುರಿಕೆ ಗ್ರಾಮದ , ಶ್ರೀ ಪರಮೇಶ್ವರಪ್ಪ
ಬಿನ್ ಶಂಕರೇಗೌಡ ಎಂಬುವರ ವಾಸದ ಮನೆಯ ಮುಂದೆ ಬೀಸಿದ ಮಳೆ ಗಾಳಿಯಿಂದ ಕೆಇಬಿ
ಕಂಬದ ಗೈ ವೈರಿಂದ ಕಬ್ಬಿಣದ ಮುಳ್ಳು ತಂತಿಗೆ ವಿದ್ಯುತ್ ಹರಿದಿದ್ದು ವಿದ್ಯುತ್ ಹರಿಯುತ್ತಿರುವ ಕಬ್ಬಿಣದ ಮುಳ್ಳು ತಂತಿಯ ಮೇಲೆ ಶ್ರೀ ಪರಮೇಶ್ವರಪ್ಪ ಬಿನ್ ಶಂಕರೇಗೌಡ ರವರ ವಾಸದ ಮನೆಯ ಮುಂದೆ ಅರ್ಧಕ್ಕೆ ಮುರಿದು ಬಿದ್ದಿದ್ದ ಬಾಳೆಗಿಡವನ್ನು ಮೇಲೆ ಎತ್ತಲು ಹೋಗಿ ಬಾಳೆಗಿಡವನ್ನು ಮುಟ್ಟಿದ್ದಕ್ಕೆ ಪಿರ್ಯಾದಿದಾರರ ಗಂಡ ವೀರಭದ್ರಪ್ಪ ಬಿನ್ ಪರಮೇಶ್ವರಪ್ಪ ಮತ್ತು ಅತ್ತೆ ಗಂಗಮ್ಮ ಕೋಂ ಪರಮೇಶ್ವರಪ್ಪ ರವರ ದೇಹಕ್ಕೆ ವಿದ್ಯುತ್ ಸ್ಪರ್ಶವಾದ ಬಾಳೆಗಿಡದಿಂದ ವಿದ್ಯುತ್ ದೇಹಕ್ಕೆ ಹರಿದು ಸ್ಥಳದಲ್ಲಿ ಮೃತಪಟ್ಟಿರುತ್ತಾರೆ ಸದರಿಯವರ ಸಾವಿಗೆ 1 ನೇ ಆರೋಪಿ ಹಾಲ್ಕುರಿಕೆ ಕೆಇಬಿ ಕಛೇರಿಯ ಶಾಖಾಧಿಕಾರಿ ಹಾಗೂ ಆರೋಪಿ 2 ಮತ್ತು 3 ರವರು ಕೆಇಬಿ ಕಛೇರಿಯ ಲೈನ್‌ಮ್ಯಾನ್‌ಗಳಾಗಿದ್ದು ಆರೋಪಿ 1 ರಿಂದ 3 ರವರು ಪ್ರಕರಣದ ಸಾಕ್ಷಿದಾರರಾದ ಶ್ರೀ ಪರಮೇಶ್ವರಪ್ಪ ರವರ ಮನೆಯ ಹಿಂದಿದ್ದ ಕೆಇಬಿ ಕಂಬದ ಗೈ ವೈರನ್ನು ಕಂಬದಿಂದ ಮುಳ್ಳು ತಂತಿಗೆ ಸುತ್ತಿದ್ದನ್ನು ಬಿಚ್ಚದೆ ಹಾಗೂ ಇನ್ಸಲೇಷನ್ ನಶಿಸಿರುವ ಸರ್ವೀಸ್ ವೈರನ್ನು ಗೈ ವೈರಿಗೆ ಸುತ್ತಿದ್ದನ್ನು ಬದಲಾಯಿಸದೆ ನಿರ್ಲಕ್ಷತೆ ವಹಿಸಿದ್ದ ಸದರಿಯವರ ಸಾವಿಗೆ ಕಾರಣ ಎಂದು ಮೃತನ ಹೆಂಡತಿ ಶ್ರೀಮತಿ ಕಾತ್ಯಾಯಿನಿ ದೂರನ್ನು ಸಲ್ಲಿಸಿದ ಮೇರೆಗೆ ತನಿಖಾಧಿಕಾರಿಯಾದ ಶ್ರೀ ನದಾಪ್ ಎಫ್.ಕೆ ಪಿ.ಎಸ್.ಐ ರವರು ಪ್ರಕರಣ ದಾಖಲಿಸಿಕೊಂಡು ಭಾಗಶಃ ತನಿಖೆಯನ್ನು ಕೈಗೊಂಡು ನಂತರ ತನಿಖಾಧಿಕಾರಿಯಾದ ಶ್ರೀ ರಾಘವೇಂದ್ರ ಪ್ರಕಾಶ್ ಎನ್.ಕೆ ಪಿ.ಎಸ್.ಐ ( ಪೊನ್ನವಳ್ಳಿ ಪೊಲೀಸ್ ಠಾಣೆ ) ರವರು ಆರೋಪಿತರ ವಿರುದ್ದ ಭಾರತೀಯ ದಂಡ ಸಂಹಿತೆ ( ಐ.ಪಿ.ಸಿ ) ಕಲಂ 304 ( ಎ ) ಅಡಿಯಲ್ಲಿ ಆರೋಪ ದೃಢಪಟ್ಟ ಮೇರೆಗೆ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು .
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ತಿಪಟೂರಿನ ಅಧಿಕ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮಾನ್ಯ ಶ್ರೀಮತಿ ಮಧುಶ್ರೀ ಜಿ.ಎಸ್ ರವರು ಸಾಕ್ಷಿ ಪುರಾವೆಗಳನ್ನು ಪರಿಶೀಲಿಸಿ ವಿಚಾರಣೆ ಮಾಡಿ ವಾದ ವಿವಾದಗಳನ್ನು ಆಲಿಸಿದ ನಂತರ ಪ್ರಕರಣದ ಆರೋಪಿತರಾದ 1 ) ಯೋಗೇಂದ ಎಸ್ 2 ) ನವೀನ್ ಎಚ್.ಎಸ್ 3 ) ಶಿವಲಿಂಗಮೂರ್ತಿ ಎ.ಎಸ್ ರವರಿಗೆ ಐ.ಪಿ.ಸಿ ಕಲಂ , 304 ( ಎ ) ಐ.ಪಿ.ಸಿ ಅಡಿಯಲ್ಲಿ 1 ವರ್ಷ ಕಾರಾಗ್ರಹ ವಾಸ ಶಿಕ್ಷೆ ಹಾಗೂ ಪ್ರತಿಯೊಬ್ಬ ಆರೋಪಿತರಿಗೆ ತಲಾ 10,000 / – ರೂ ದಂಡ ವನ್ನು ವಿಧಿಸಿರುತ್ತಾರೆ ಹಾಗೂ ಮೃತ ವೀರಭದ್ರಪ್ಪನ ಹೆಂಡತಿಗೆ 25,000 / – ರೂಪಾಯಿ ಪರಿಹಾರ ನೀಡಲು 04/10/2025 ರಂದು ನೀಡಿರುತ್ತಾರೆ .
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀ ಚೇತನ ಗಂ . ಮಲಗೌಡ್ರ ರವರು ವಾದ ಮಂಡಿಸಿದ್ದರು . ಸದರಿ ಪ್ರಕರಣದ ಸಾಕ್ಷಿಗಳ ವಿಚಾರಣಾ ಸಮಯದಲ್ಲಿ ನ್ಯಾಯಾಲಯಕ್ಕೆ ಹೊಂದಿಕೊಂಡು ಕರ್ತವ್ಯ ನಿರ್ವಹಿಸಿದ ಹೊನ್ನವಳ್ಳಿ ಪೊಲೀಸ್ ಠಾಣೆ , ಪೊಲೀಸ್ ಸಿಬ್ಬಂದಿಗಳಾದ ಹೇಮಂತ್ ಬಿ.ಎಸ್ ಸಿ.ಪಿ.ಸಿ -172 ಹಾಗೂ ಶ್ರೀಮತಿ ಜ್ಯೋತಿ ಡಬ್ಲೂ.ಪಿ.ಸಿ -105 ರವರು ಸಾಕ್ಷಿದಾರರನ್ನು ನಿಗದಿತ ದಿನಾಂಕಗಳಂದು ಹಾಜರುಪಸಿ ಅಭಿಯೋಜನೆಗೆ ಸಹಕರಿಸಿರುತ್ತಾರೆ .
ವರದಿ:ಮಂಜುನಾಥ್ ಹಾಲ್ಕುರಿಕೆ










