Spread the love

ಪ್ರತಿವರ್ಷದಂತೆ ಈ ವರ್ಷವೂ ಕೂಡ ಕಾರ್ತಿಕ ಮಹೋತ್ಸವನ್ನು ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ, ಚಿಕ್ಕಮಗಳೂರು ಜಿಲ್ಲೆ ಕರಡಿ ಗವಿಮಠದ ಶ್ರೀ ಮದ್ ನಿ.ಪ್ರ.ಸ್ವ. ಶಿವಶಂಕರ ಶಿವಯೋಗಿ ಮಹಾಸ್ವಾಮಿಗಳು, ದೀಪ ಹಚ್ಚುವುದರ ಮೂಲಕ ಕಾರ್ತಿಕ ಮಹೋತ್ಸವವನ್ನು ಉದ್ಘಾಟಿಸಿದರು ನಂತರ ಭಕ್ತಾದಿಗಳೆಲ್ಲ ದೀಪ ಹಚ್ಚಿ ಕಾರ್ತಿಕ ಮಹೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾದರು.

ತಿಪಟೂರು ವೀರಶೈವ ಲಿಂಗಾಯತ ಸಂಘಟನೆ ರಿ ವತಿಯಿಂದ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಸಮಾರಂಭದಲ್ಲಿ ವೀರಶೈವ ಲಿಂಗಾಯತ ಸಂಘಟನೆ ಅಧ್ಯಕ್ಷರಾದ ಶ್ರೀ ರೇಣುಕಾರಾಧ್ಯ, ಕಾರ್ಯದರ್ಶಿ ಶ್ರೀ ಆರ್ ಎಂ ಕುಮಾರಸ್ವಾಮಿ, ಸಹ ಕಾರ್ಯದರ್ಶಿ ಬಳ್ಳೇಕೆರೆ ಹೊಸೂರು ರಾಜಣ್ಣ, ಉಪಾಧ್ಯಕ್ಷರಾದ ಶ್ರೀ ರಘುನಂದನ್, , ವೀ ಲಿಂ. ಸೌಹಾರ್ದ ಪತ್ತಿನ ಸಂಘದ ಅಧ್ಯಕ್ಷರಾದ ದಯಾನಂದ್ ನಿರ್ದೇಶಕರುಗಳಾದ ದಿಬ್ಬದಹಳ್ಳಿ ಶ್ಯಾಮ ಸುಂದರ್, ಈಡೇನಹಳ್ಳಿ ಗುರುಸ್ವಾಮಿ ,ಆಡಿಟರ್ ಲೋಕೇಶ್,ಮಾಜಿ ನಗರಸಭಾ ಸದಸ್ಯರಾದ ಶ್ರೀ ಯೋಗೀಶ್, ಅರ್ಚಕರಾದ ರಾಜಣ್ಣ ಉದಯರವಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ಶ್ರೀ ಸೋಮಶೇಖರ್, ಪ್ರಾಂಶುಪಾಲರಾದ ರೇಣುಕಯ್ಯ, ಜಕ್ಕನಹಳ್ಳಿ ನಿ .ಚನ್ನಬಸವಣ್ಣ, ಪತ್ರಕರ್ತರಾದ ಸುಪ್ರತೀಕ ಹಳೆಮನೆ ಹಾಗೂ ರವಿ ಮುಂತಾದವರು ಉಪಸ್ಥಿತರಿದ್ದರು

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!