ತಿಪಟೂರು:ಸರ್ಕಾರದ ಯೋಜನೆಗಳು ಜನರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು.ಪ್ರತಿಪ್ರಗತಿ ಪರಿಶೀಪನಾ ಸಭೆಯಲ್ಲಿ ಒಂದೇರೀತಿಯ ಸಿದ್ದ ಉತ್ತರ ನೀಡುತ್ತೀರ ಎಂದು ಆಕ್ರೋಶ ವ್ಯಕ್ತಪಡಿಸಿದ ಸಚಿವರು ಈ ಭಾಗದ ರೈತರ ಜೀವನಾಡಿಯಾದ ತೆಂಗಿನ ಬೆಳೆಗೆ ರೋಗಬಾದೆ ಉಂಟಾಗಿದೆ ರೋಗ ನಿವಾರಣೆಗೆ ಸೂಕ್ತ ಕ್ರಮಕೈಗೊಳ್ಳಬೇಕು,ತೆಂಗು ನಾಶವಾದರೆ ರೈತರ ಜೀವನ ನಾಶವಾಗುತ್ತದೆ,ಒಂದು ಎಕರೆ ಎರಡು ಎಕರೆ ಜಮೀನು ಹೊಂದಿರು ವ ರೈತರ ಬದುಕು ತೀವ್ರತೊಂದರೆಯಾಗುತ್ತದೆ.ಎಂದು ತಿಳಿಸಿದರು

ನಗರದ ತಾಲ್ಲೋಕು ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನ ಸಭೆ ನಡೆಸಿದ ಸಚಿವರು ತೆಂಗು ಈ ಭಾಗದ ಜೀವನಾಡಿ ತೆಂಗುಬೆಳೆ ಆಶ್ರಯಿಸಿ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ,ರೋಗಭಾದೆಯಿಂದ ಇಳುವರಿ ಕುಂಠಿತವಾಗಿದ್ದು ಬೆಳೆ ನಾಶವಾದರೆ ಅವರ ಜೀವನವೇವನಾಶವಾಗುತ್ತದೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿ,

ರೋಗ ಹತೋಟಿ ಹಾಗೂ ಇಳುವರಿ ಹೆಚ್ಚಳಕ್ಕೆ ಕ್ರಮವಹಿಸಬೇಕು ಎಂದು ತೋಟಗಾರಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜೆಜೆಎಂ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.ಸಮಾಜಕಲ್ಯಾಣ ಇಲಾಖೆಯಲ್ಲಿ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳ ಕೊರತೆ ಇದೆ,ಸರ್ಕಾರ ನಿಗಧಿ ಪಡಿಸಿರುವ ಸೀಟ್ ಗಳಿಂದ ಕಡಿಮೆ ವಿದ್ಯಾರ್ಥಿಗಳು ದಾಖಲಾಗುತ್ತಿದ್ದು. ಇಲಾಖೆಯ ಕಾರ್ಯವೈಖರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭೆ ವ್ಯಾಪ್ತಿಯಲ್ಲಿ ಸೌಂದರ್ಯಕರಣ ಕಾಮಗಾರಿಗಳು ನಡೆದಿಲ್ಲ,ಸ್ವಚ್ಚತೆಗೆ ಆಧ್ಯತೆ ನೀಡಬೇಕು ಎಂದು ಸೂಚಿಸಿದರು
ಸಭೆಯಲ್ಲಿ ಶಾಸಕರಾದ ಕೆ.ಷಡಕ್ಷರಿ.ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್.ಸಿಇಒ ಪ್ರಭು.ತುಮಕೂರು ಪೊಲೀಸ್ ವರೀಷ್ಠಾಧಿಕಾರಿ ಆಶೋಕ್. ಕೆ.ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ .ತಹಸೀಲ್ದಾರ್ ಮೋಹನ್ ಕುಮಾರ್.ಇಒ ಸುದರ್ಶನ್.ನಗರಸಭೆ ಅಧ್ಯತೆ ಶ್ರೀಮತಿ ಯಮುನಾ ಧರಣೇಶ್ ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ








