ತಿಪಟೂರು:ಆಪರೇಷನ್ ಸಿಂಧೂರ ಕಾರ್ಯಾಚರಣೆ ಹಾಗೂ ಪಾಕಿಸ್ತಾನದ ಮೇಲೆ ನಡೆಯುತ್ತಿರುವ ಸೈನಿಕ ಕಾರ್ಯಚರಣೆ,ಯುದ್ದದ ಕಾರ್ಮೋಡದಲ್ಲಿ ಭಾರತೀಯ ಹೆಮ್ಮೆಯ ಸೈನ್ಯ ಹಾಗೂ ದೇಶಕ್ಕೆ ಯಶಸ್ವಿಗಾಗಿ ,ದುಷ್ಟಶಕ್ತಿಗಳ ನಿಗ್ರಹಕ್ಕಾಗಿ ತಿಪಟೂರು ನಗರದ ಎಂ.ಆರ್ ಲೇಔಟ್ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಮಹಾಸುದರ್ಶನ ಹೋಮ ಹಾಗೂ ಶ್ರೀ ಆಂಜನೇಯಸ್ವಾಮಿಯವರಿಗೆ ವಿಶೇಷ ಅಲಂಕಾರ ನೆರವೇರಿಸಲಾಯಿತು

.
ಮಹಾಸುದರ್ಶನ ಹೋಮ ನೆರವೇರಿಸಿದ ವೇದಬ್ರಹ್ಮಶ್ರೀ ಕೃಷ್ಣಮೂರ್ತಿ ಮಾತನಾಡಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿಯ ನಂತರ ದೇಶದಲ್ಲಿ ಬಿಗುವಿನ ವಾತವಾರಣ ಉಂಟಾಗಿದ್ದು.ಉಗ್ರಕೃತ್ಯಗಳಿಗೆ ಪ್ರತೀಕಾರವಾಗಿ ನಮ್ಮ ವೀರಸೈನಿಕರು ಪಾಕಿಸ್ತಾನದ ಉಗ್ರನೆಲೆಗಳನ್ನ ಧ್ವಂಸಗೊಳಿಸಿದ್ದಾರೆ,ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ದದ ಕಾರ್ಮೋಡವಿದ್ದು,ನಮ್ಮ ಸೇನೆ ಶತೃಗಳ ಹುಟ್ಟಡಗಿಸಲು ಸಶಕ್ತವಾಗಿದೆ.ನಮ್ಮ ಸೈನಿಕರಿಗೆ ಶಕ್ತಿ ಸ್ಥೈರ್ಯ ತುಂಬು ಬೇಕಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದ್ದು,ನಮ್ಮ ಸೈನಿಕರಿಗೆ ಶತೃಸಂಹಾರದ ಧೈರ್ಯಸ್ಥೈರ್ಯ ಪ್ರಾಪ್ಥಿಯಾಗಲಿ,ವಿಜಯ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿ ಮಹಾಸುದರ್ಶನ ಹೋಮ ನಡೆಸಲಾಗಿದೆ,ನಮ್ಮ ಸೈನ್ಯಕ್ಕೆ ಶುಭವಾಗುವುದು ಎಂದು ತಿಳಿಸಿದರು.
ನೂರಾರು ಜನ ಮಹಾಸುದರ್ಶನ ಹೋಮದಲ್ಲಿ ಭಾಗವಹಿಸಿ ಪೂಜೆಸಲ್ಲಿಸಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ




