ತಿಪಟೂರು:ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಜಿ.ನಾರಾಯಣ್ ವಿಜಯದಶಮಿ ಅಂಗವಾಗಿ ಹತ್ಯಾಳ್ ಶ್ರೀ ನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆಸಲ್ಲಿಸಿ,ನಂತರ ತಿಪಟೂರು ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಾಲಯ,ಹೊಸಪಟ್ಟಣ್ಣದಮ್ಮದೇವಾಲಯ, ದಸರೀಘಟ್ಟ ಶ್ರೀ ಚೌಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ಚೌಡೇಶ್ವರಿ ದೇವಿಗೆ ಪೂಜೆಸಲ್ಲಿಸಿ, ಆದಿಚುಂಚನಗಿರಿ ದಸರೀಘಟ್ಟ ಶಾಖಾ ಮಠದ ಶ್ರೀ ಶ್ರೀ ಚಂದ್ರಶೇಖರನಾಥ ಮಹಾಸ್ವಾಮೀಜಿಗಳ ಆಶೀರ್ವಾದ ಪಡೆದು ನಾಡಿನ ಶಾಂತಿ ಸುಭಿಕ್ಷೆಗಾಗಿ ವಿಶೇಷ ಪೂಜೆಸಲ್ಲಿಸಿದರು.

ನಂತರ ಗೌಡನಕಟ್ಟೆ .ಬಿದಿರೆಗುಡಿ,ಹೊನ್ನವಳ್ಳಿ.ಹೊಸಪಟ್ಟಣ್ಣ.ನೊಣವಿನಕೆರೆ ಹೊಸೂರು.ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮುಖಂಡರು ಹಾಗೂ ಅಭಿಮಾನಿಗಳೊಂದಿಗೆ ರಾಜಕೀಯ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಿದರು,

ಮುಂದಿನ ತಾಲ್ಲೋಕು ಪಂಚಾಯ್ತಿ ಹಾಗೂ ಜಿಲ್ಲಾಪಂಚಾಯ್ತಿ ಚುನಾವಣೆಯಲ್ಲಿ ಪಕ್ಷೇತರವಾಗಿ ದಕ್ಷ ಹಾಗೂ ಪ್ರಾಮಾಣಿಕ ಅಭ್ಯಾರ್ಥಿಗಳನ್ನ ಕಣಕ್ಕಿಳಿಸುತ್ತಿದ್ದು.ಎಲ್ಲಾ ಮುಖಂಡರು ಒಗ್ಗಟಿನಿಂದ ಕೆಲಸ ಮಾಡಿ, ನಮ್ಮ ಅಭ್ಯಾರ್ಥಿಗಳ ಗೆಲುವಿಗೆ ಸಹಕಾರನೀಡಬೇಕು.ತಾಲ್ಲೋಕಿನ ಋಣ ನನ್ನ ಮೇಲಿದೆ, ಋಣ ತೀರಿಸುವ ಕೆಲಸ ಮಾಡುತ್ತೇನೆ.ಎಲ್ಲರೂ ಒಗ್ಗೂಡಿ ತಾಲ್ಲೋಕಿನ ಅಭಿವೃದ್ದಿಗೆ ಕೆಲಸ ಮಾಡೋಣ ಎಂದು ತಿಳಿಸಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ











