ತಿಪಟೂರು : ಸಮಾಜದಲ್ಲಿನ ಸಾಮರಸ್ಯ ಹಾಗೂ ಸೌಹಾರ್ದತೆ ಕೊರತೆಯಿಂದ ರಾಜ್ಯದಲ್ಲಿ ವೀರಶೈವ ಸಮಾಜ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಅಖಂಡ ವೀರಶೈವ ಲಿಂಗಾಯಿತ ಸಮಾಜ ಒಗ್ಗಟ್ಟಿನಿಂದ ನಡೆದರೆ ನಮ್ಮ ಶಕ್ತಿಯನ್ನು ತಡೆಯುವ ಪರ್ಯಾಯ ಶಕ್ತಿ ಯಾರಿಗೂ ಇಲ್ಲ ಎಂದು ಬಾಳೆಹೊನ್ನೂರು ರಂಬಾಪುರಿ ಮಠದ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಕರು ತಿಳಿಸಿದರು.
ನಗರದ ಪಿ.ಜಿ.ಎಮ್ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನಿಸಿ ಮಾತನಾಡಿದರು.

ಧರ್ಮದ ಆದರ್ಶಗಳನ್ನು ತಿಳಿದು ಸಮಾಜವನ್ನು ಕಟ್ಟುವ ಕೆಲಸವಾಗಬೇಕು, ಸಮುದಾಯದ ಜನ ನಡೆದುಹೋದ ಘಟನೆಗಳನ್ನ ಮರೆತು ಒಗ್ಗೂಡಿ ಗಟ್ಟಿಯಾದ ಹೆಜ್ಜೆಯಿಂದ ನಡೆಯಬೇಕು, ಮನುಷ್ಯನಲ್ಲಿ ಸ್ವಾಭಿಮಾನ, ಸಂಘಟನೆಯ ವೈಪಲ್ಯದ ಕೊರತೆಯಿಂದಾಗಿ ಸಮಾಜ ಛಿಧ್ರವಾಗುತ್ತಿದೆ. ಸಂಘಟನೆಯಿಂದ ಅಸಾಧ್ಯವಾದದ್ದನ್ನು ಸಾಧ್ಯಮಾಡುವ ಶಕ್ತಿಯಿದೆ. ವೀರಶೈವ ಧರ್ಮತಮ್ಮವರಿಗೆಲ್ಲದೆ ಸಮಾಜದ ಎಲ್ಲಾ ವರ್ಗದವರಿಗೂ ಸಹಾಯ ಮಾಡುತ್ತಾ ಬಂದಿದೆ.

ಇಂದು ಬಸವಣ್ಣನವರ ಹೆಸರು ಹೇಳುವವರು ವೀರಶೈವ ಬೇರೆ, ಲಿಂಗಾಯಿತ ಬೇರೆ ಎಂದು ಹೇಳಿ ದ್ವಂದ್ವ ಹುಟ್ಟು ಹಾಕಿ ಕಲುಷಿತ ವಾತವರಣವನ್ನು ಉಂಟು ಮಾಡುತ್ತಿದ್ದಾರೆ. ಭೂಮಂಡಲಕ್ಕೆ ಶ್ರೇಷ್ಠವಾದ ವೀರಶೈವ ಧರ್ಮವನ್ನ ಪಂಚಾಚಾರ್ಯರು ಸ್ಥಾಪನೆ ಮಾಡಿದ್ದಾರೆ ಜಾತವೇದ ಮುನಿಗಳಿಂದ ಲಿಂಗದೀಕ್ಷೆ ಪಡೆದ ಬಸವೇಶ್ವರರು ಹಾಗೂ 12 ನೇ ಶತಮಾನದ ಬಸವಾದಿ ಶರಣರು ವೀರಶೈವ ತತ್ವಗಳನ್ನು ಪಾಲಿಸಿ ಮುಂದುವರೆಸಿಕೊಂಡು ಬಂದಿದ್ದು, ಧರ್ಮಪೀಠಗಳು ಜ್ಞಾನದ ಜೊತೆಗೆ ಧರ್ಮದ ಆಚರಣೆಗಳು ಎಷ್ಟು ಮುಖ್ಯವೆಂಬುದನ್ನು ತಿಳಿಸುತ್ತಾ ಬಂದಿರುತ್ತಾರೆ.

ಆಧುನಿಕತೆಯ ಹೆಸರಿನಲ್ಲಿ ಮಾನವೀಯತೆ ಸಂಬಂಧಗಳು ಶಿಥಿಲಗೊಳ್ಳುತ್ತಿದ್ದು, ಅವಿಭಕ್ತ ಕುಟಂಬಗಳ ಪರಿಕಲ್ಪನೆಯ ಭಾವನೆಗಳು ಜನಮನದಲ್ಲಿ ಕರಗಿಹೋಗುತ್ತಿವೆ, ಸಂಬಂಧಗಳು ಗಟ್ಟಿಯಾಗಿ ಉಳಿಯಬೇಕಾದರೆ ಧರ್ಮದ ಆಚರಣೆ, ಸಂಸ್ಕಾರಗಳನ್ನು ತಿಳಿಯಬೇಕಾಗಿದೆ. ಮಕ್ಕಳು ತಮ್ಮ ವೈಯಕ್ತಿಕ ಹಿತಾಸಕ್ತಿಯಾಗಿ ತಂದೆ ತಾಯಿಗಳಿಂದ ದೂರವಾಗುತ್ತಿದ್ದು ಆಯಾ ಆಯಾ ಕಾಲಘಟ್ಟಕ್ಕೆ ಚಿಕ್ಕಮಕ್ಕಳಲ್ಲಿ ಹೂವಿನಂತೆ, ಹತ್ತನೇ ವರ್ಷದಲ್ಲಿ ತಪ್ಪು ಮಾಡಿದಾಗ ಪೆಟ್ಟುಕೊಟ್ಟು, ಯೌವನದಲ್ಲಿ ಸ್ನೇಹಿತನಂತೆ ಕಾಣಬೇಕು ಎಂದರು.
ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ ಪೋಷಕರು ತಮ್ಮ ಮಕ್ಕಳಿಗೆ ಲಕ್ಷ ಲಕ್ಷಗಳನ್ನು ಖರ್ಚು ಮಾಡಿ ಶಿಕ್ಷಣ ನೀಡಿದರೂ ಇಂದು ವೃದ್ದಾಶ್ರಮಕ್ಕೆ ತಂದೆ ತಾಯಿಗಳನ್ನು ಸೇರಿಸುತ್ತಿದ್ದರೆ ಅಂತಹವರಿಗೆ ಧರ್ಮಾಚರಣೆ, ಸಂಸ್ಕಾರಗಳನ್ನು ಕಲಿಸಬೇಕಾಗಿದೆ. ವಿದ್ಯಾರ್ಥಿಗಳು ಪ್ರತಿ ನಿತ್ಯ ಕನಸು ಕಾಣುತ್ತಾ ಸ್ವಷ್ಟ ಗುರಿಯನ್ನುಟ್ಟಿಕೊಂಡು ಸಾಧನೆ ಮಾಡಬೇಕಾಗಿದೆ. ಹದಿಮೂರಿಂದ ಹದಿನೆಂಟರ ವಯಸ್ಸಿನಲ್ಲಿ ಹದಿಹರೆಯರ ಮಕ್ಕಳು ಯಾರ ಒಡನಾಟ, ವೀಕ್ಷಣೆ, ಸಹವಾಸ, ಮಾಡುತ್ತಿದ್ದಾರೆ ಎಂಬುದನ್ನು ಗಮನಿಸದಾಗ ಮಾತ್ರ ಮಕ್ಕಳು ಹಾದಿ ತಪ್ಪುವುದಿಲ್ಲವೆಂದರು.ಎಂದರು

ಶಾಸಕ ಕೆ.ಷಡಕ್ಷರಿ ಮಾತನಾಡಿ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಕಾರ್ಯಮುಕ್ತಾಯ ಹಂತಕ್ಕೆ ಬಂದಿದೆ.ಸಮಾಜದ ಎಲ್ಲಾ ಮಠಾಧೀಶರು ಸೇರಿ ಒಮ್ಮತದ ನಿರ್ಣಯಮಾಡಿ ಯಾವ ಜಾತಿ ಹೆಸರು ಬರೆದಬೇಕು ಎಂದು ನಿರ್ಣಯ ಮಾಡಬೇಕಿದೆ,ರಾಜಕೀಯ ಲಾಭಕ್ಕಾಗಿ ಹಲವಾರು ಪ್ರಯತ್ನಗಳು ನಡೆದರು ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಲಾಭಗಳನ್ನ ಸಮಾಜ ನಿರ್ಧಾರ ಮಾಡುತ್ತದೆ.ಸಮಾಜ ಒಗ್ಗೂಡಿ ನಡೆದ್ದಾಗ ಅಭಿವೃದ್ದಿ ಸಾಧ್ಯ ಎಂದು
ಕಾರ್ಯಕ್ರಮದಲ್ಲಿ ಡಿ.ಬಿ,ಎಸ್.ಗುರುಸಿದ್ದಪ್ಪ ಚಾರಿಟೀಸ್ ಟ್ರಸ್ಟ್ವತಿಯಂದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರನ್ನು ಸನ್ಮಾಸಲಾಯಿತು.
ಅಧ್ಯಕ್ಷತೆಯನ್ನು ತಾಲ್ಲೂಕು ಅಧ್ಯಕ್ಷ ಬೆಸ್ಕಾಂ ಇಂಜಿನಿಯರ್ ಕೆ.ಎಸ್.ಎಮ್.ಸ್ವಾಮಿ ವಹಿಸಿದ್ದು, ನಗರಸಭೆ ಪ್ರಭಾರ ಅಧ್ಯಕ್ಷ ಮೇಘಾಶ್ರೀ ಭೂಷಣ್, ನಿಕಟ ಪೂರ್ವ ಅಧ್ಯಕ್ಷೆ ಯಮುನಾ ಧರಣೀಶ್, ನಗರಸಭಾ ಸದಸ್ಯರಾದ ಸಂಗಮೇಶ್, ಶಶಿಕಿರಣ್, ಪದ್ಮ ತಿಮ್ಮೇಗೌಡ, ಅಶ್ವಿನಿ ದೇವರಾಜ, ಯೋಗೀಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ರಾಜಣ್ಣ, ಹಾಸನ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ನವಿಲೆ ಪರಮೇಶ್, ತುಮಕೂರು ಜಿಲ್ಲಾ ವೀರಶೈವ ಅಧ್ಯಕ್ಷ ಪರಮೇಶ್, ಜಿಲ್ಲಾ ನೌಕರ ಸಂಘದ ಅಧ್ಯಕ್ಷ ರಮೇಶ್, ಬಿಇಓ ತಾರಾಮಣಿ, ರಾಜ್ಯಾಧ್ಯಕ್ಷ ಸೋಮಶೇಖರ, ಕಾರ್ಯದರ್ಶಿ ಪ್ರಸನ್ನಕುಮಾರ್, ಮಾದಿಹಳ್ಳಿ ಪ್ರಕಾಶ್, ಜಲಾಕ್ಷಮ್ಮ, ಮಂಗಳ ಗೌರಮ್ಮ, ತಾ ಸಂಘದ ಕಾರ್ಯದರ್ಶಿ ಎಸ್.ಆರ್.ಸ್ವಾಮಿ, ಖಚಾಂಚಿ ಚಿದಾನಂದ್ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ







