ತಿಪಟೂರು: ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬಾಲಾಜಿ ಇವೇಂಟ್ಸ್ ಆಯೋಜಿಸಿದ ಕೃಷಿ ಉತ್ಸವ ಸಂಬಂದಿಸಿದ ಇಲಾಖೆಗೆಗಳ ಪೂರ್ವಾನುಮತಿ ಪಡೆಯದ ಕಾರಣ,ಆಯೋಜಕರ ಬೇಜವಾಬ್ದಾರಿಯಿಂದ ರದ್ದುಗೊಂಡಿದೆ,ಕೃಷಿ ಉತ್ಸವ ರದ್ದುಗೊಳ್ಳಲು ನಾನು ಕಾರಣನ್ನಲ್ಲ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು

ನಗರಸಭೆ ಶಾಸಕರ ಕಚೇರಿಯಲ್ಲಿ ಆಯೋಜಿಸಿದ ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ತಿಪಟೂರಿನಲ್ಲಿ ಬಾಲಾಜಿ ಇವೇಂಟ್ಸ್ ಮುಖ್ಯಸ್ಥರು ನನ್ನ ಸಂಪರ್ಕಮಾಡಿ ಕಾರ್ಯಕ್ರಮ ಆಯೋಜನೆ ಮಾಡುವುದ್ದಾಗಿ ಕೇಳಿದರು, ನಾನು ನಮ್ಮ ತಾಲ್ಲೋಕಿನ ರೈತರಿಗೆ ಅನುಕೂಲವಾಗಬಹುದು ಎನ್ನುವ ದೃಷ್ಟಿಯಿಂದ ಒಪ್ಪಿಗೆ ನೀಡಿ,ಸರ್ಕಾರದ ನಿಯಮಾನುಸಾರ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದ್ದೆ,ಆದರೆ ಆಯೋಜಕರು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕಾರ್ಯಕ್ರಮ ನಡೆಸಲು ನಿರ್ದಿಷ್ಟ ಶುಲ್ಕಪಾವತಿ ಮಾಡಿ ಅನುಮತಿ ಪಡೆದಿಲ್ಲ.ರಕ್ಷಣೆಗೆ ಸಂಬಂದಿಸಿದಂತೆ ಪೊಲೀಸ್ ಇಲಾಖೆ ಅನುಮತಿ ಪಡೆದಿಲ್ಲ.ಅಗ್ನಿಶಾಮಕ ಇಲಾಖೆ.ನಗರಸಭೆ.ಬೆಸ್ಕಾಂ.ಹಾಗೂ ಟೆಂಟ್ ಸುರಕ್ಷತೆ ಬಗ್ಗೆ ಎನ್.ಒ.ಸಿ ಪಡೆದಿಲ್ಲ.ಕೃಷಿ ಇಲಾಖೆ.ತೋಟಗಾರಿಕೆ ಇಲಾಖೆ ಸೇರಿ ಯಾವುದೇ ಇಲಾಖೆ ಅನುಮತಿ ಪಡೆಯದ ಕಾರ್ಯಕ್ರಮ ಆಯೋಜನೆ ಮಾಡಿದರೆ,ಅನುಮತಿ ನೀಡಲು ಹೇಗೆ ಸಾಧ್ಯ .ಸಾವಿರಾರು ಜನ ಸೇರುವ ಕಾರ್ಯಕ್ರಮದಲ್ಲಿ ಯಾವುದಾದರೂ ಅವಘಡ ಸಂಬವಿಸಿದರೆ ಯಾರು ಹೊಣೆ.ಖಾಸಗೀ ಇವೇಂಟ್ಸ್ ಸ್ಟಾಲ್ ಗಳಿಂದ ಹಣಪಡೆದಿದ್ದಾರೆ ಅನೋ ದೂರುಗಳಿವೆ.ಸರ್ಕಾರದ ನಿಯಮ ಮೀರಿ ಕಾರ್ಯಕ್ರಮ ನಡೆಯುತ್ತಿದ್ದ ಕಾರಣ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.ಆದರೆ ಆಯೋಜಕರು ಶಾಸಕರಿಂದ ಅನ್ಯಾಯವಾಗಿದೆ ಎಂದು ಹೇಳೋದು ಸರಿಯಲ್ಲ.ನಿಯಮಾನುಸಾರ ಕಾರ್ಯಕ್ರಮ ನಡೆಸಿದರೆ ಈಗಲು ಅನುಮತಿ ನೀಡುತ್ತೇವೆ.ನಮ್ಮ ರೈತರಿಗೆ ಅನುಕೂಲವಾಗಲೂ ಮುಂದಿನ ದಿನಗಳಲ್ಲಿ ಸರ್ಕಾರದಿಂದಲೆ,ಕೃಷಿ ಮೇಳ ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.

ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ನಗರಸಭೆ ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ ,ಕೃಷಿ ಉತ್ಸವ ಆಯೋಜಕರು ಕೇವಲ ಬ್ಯಾನರ್ ಅಳವಡಿಸಲು ಮಾತ್ರ ಅನುಮತಿ ಪಡೆದಿದರು.ಶಾಸಕರಿಗೆ ತಪ್ಪು ಮಾಹಿತಿ ನೀಡಿ ಕಾರ್ಯಕ್ರಮ ಆಯೋಜನೆ ಮಾಡಲು ಮುಂದಾಗಿದರು.ಕೃಷಿ ಇಲಾಖೆ ,ತೋಟಗಾರಿಕೆ ಇಲಾಖೆ,ಪಶುಸಂಗೋಪನಾ ಇಲಾಖೆ ಅನುಮತಿ ಪಡೆಯದೆ ಇಲಾಖೆಗಳ ಸಹಯೋಗ ಎಂದು ಕರಪತ್ರ ಮುದ್ರಿಸಿದ್ದಾರೆ.ರಕ್ಷಣೆ.ಸ್ವಚ್ಚತೆ.ಸುರಕ್ಷತೆಗೆ ಸಂಬಂದಿಸಿದ ಯಾವ ಇಲಾಖೆ ಅನುಮತಿ ಪಡೆಯದೆ ಕಾರ್ಯಕ್ರಮ ಆಯೋಜನೆ ಮಾಡಿರುವ ಕಾರಣ ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು
ಪತ್ರಿಕಾ ಘೊಷ್ಠಿಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪವನ್ .ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್.ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕರಾದ ನಂದೀಶ್ ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ










