ತಿಪಟೂರು : ರಾಜ್ಯದಲ್ಲಿ ಜನಔಷಧಿ ಕೇಂದ್ರಗಳನ್ನು ಮುಚ್ಚಿರುವ ರಾಜ್ಯ ಸರ್ಕಾರದ ವಿರುದ್ದ ತಾಲ್ಲೂಕು ಬಿಜೆಪಿ ಘಟಕದಿಂದ ಮಾಜಿ ಸಚಿವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ಸಾರ್ವಜನಿಕ ಆಸ್ವತ್ರೆ ಎದುರು ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಲಾಯಿತು

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಬಿ.ಸಿ.ನಾಗೇಶ್ ಬಡವರು ಶ್ರೀ ಸಾಮಾನ್ಯರಿಗೆ ಅನುಕೂಲವಾಗಿದ್ದ ಜನರಿಕ್ ಜನೌಷಧಿ ಕೇಂದ್ರ ಮುಚ್ಚುವ ಮೂಲಕ ರಾಜ್ಯಸರ್ಕಾರ ಜನ ವಿರೋಧಿಯಾಗಿ ವರ್ತಿಸುತ್ತಿದೆ. ಸಾವಿರಾರು ಬಡವರಿಗೆ ಅಶಕ್ತರಿಗೆ ಕಡಿಮೆ ದರದಲ್ಲಿ ಔಷಧಿಗಳು ದೊರೆಯಲಿ ಎಲ್ಲರಿಗೂ ಆರೋಗ್ಯ ರಕ್ಷಣೆಯಾಗಲಿ ಎನ್ನುವ ಉದೇಶದಿಂದ ಜಾರಿಗೆ ಇಂದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಹಳ್ಳ ಹಿಡಿಯುಂತೆ ಮಾಡಿ ಬಡವರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಕಾಂಗ್ರೇಸ್ ಸರ್ಕಾರ. ಜನಪರ ಕೆಲಸಗಳನ್ನು ಮಾಡಲಿ ಎಂದು ಪೂರ್ಣ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ ಆದರೆ ಮೊದಲ ದಿನದಿಂದ ಜನವಿರೋಧಿಯಾಗಿ ಕೆಲಸ ಮಾಡುತ್ತಾ ಬರಲಾಗುತ್ತಿದೆ, ಕೇಂದ್ರ ಸರ್ಕಾರವು ಮಧ್ಯಮ ಹಾಗೂ ಬಡ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಜನೌಷಧಿಗಳನ್ನು ತೆರೆಯಲಾಗಿತ್ತು ಆದರೆ ಇಂದಿನ ಕೆಟ್ಟ ಸರ್ಕಾರವು ಎಲ್ಲಾ ಸಾರ್ವಜನಿಕ ಆಸ್ವತ್ರೆಗಳಿಂದ ಕೇಂದ್ರಗಳನ್ನು ತೆಗೆದು ಜನವಿರೋಧಿ ಕೆಲಸ ಮಾಡಿದೆ.

ರಾಜ್ಯದಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಿಸಿದ್ದು ಈಗಾಗಲೇ ಜನರು ತೊಂದರೆ ಅನುಭವಿಸುತ್ತಿದ್ದಾರೆ ಇಂತಹ ಕೆಟ್ಟ ನಿರ್ಧಾರಗಳನ್ನು ಸರ್ಕಾರ ಕೈ ಬಿಡಬೇಕಾಗಿದೆ ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ರಸ್ತೆಗಳಿದು ಉಗ್ರ ಪತ್ರಿಭಟನೆ ಮಾಡಲಾಗುವುದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗರಾಜು ಮಾತನಾಡಿ ಸಿದ್ದರಾಮಯ್ಯ ಸರ್ಕಾರ ಆಡಳಿತಕ್ಕೆ ಬಂದ ದಿನದಿಂದ ಜನವಿರೋಧಿ ಆಡಳಿತ ನೆಡೆಸುತ್ತಿದ್ದು, ದಿ.ಆನಂತ್‌ಕುಮಾರ್ ಕನಸಿನ ಯೋಜನೆಯಾದ ಜನೌಷಧಿ ಕೇಂದ್ರವನ್ನು ಮುಚ್ಚಿರುವುದು ಖಂಡನೀಯವಾಗಿದೆ. ರಾಜ್ಯ ಸರ್ಕಾರವು ಮುಚ್ಚುವ ಆದೇಶವನ್ನು ವಾಪಸ್ಸು ಪಡೆಯಬೇಕು ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು. ಸರ್ಕಾರಕ್ಕೆ ಕಣ್ಣು ಕಿವಿಯಿಲ್ಲದಂತಾಗಿದೆ ಮಂಡ ಸಿದ್ದರಾಮಯ್ಯ ಮಂಡತನ ಬಿಡಬೇಕು.
ಈ ಯೋಜನೆಯಲ್ಲಿ ಮೋದಿಯವರ ಭಾವಚಿತ್ರ ಹಾಕಿರುವ ಉದ್ದೇಶದಿಂದ ಜನೌಷಧಿಯನ್ನು ಮುಚ್ಚಲ್ಪಟುತ್ತಿದ್ದಾರೆ. ಹಿಂದೆಯೂ ಸಹ ಮನಮೋಹನ್ ಸಿಂಗ್ ಕಾಲದಲ್ಲಿ ಹೆದ್ದಾರಿ ಯೋಜನೆಯಲ್ಲಿ ವಾಜಪೇಯಿಯವರ ಭಾವಚಿತ್ರ ತೆಗೆಸಿದಂತೆ ಇಲ್ಲಿಯೂ ಮೋದಿಯವರ ಅಭಿವೃದ್ದಿ ಸಹಿಸದೆ ಇಂತಹ ಕೆಲಸಕ್ಕೆ ಕೈಹಾಕಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಲಿಂಗರಾಜು, ಬಿಸಲೇಹಳ್ಳಿ ಜಗದೀಶ್, ಸಿಂಗ್ರೀ ದತ್ತಪ್ರಸಾದ್, ಆಯರಹಳ್ಳಿ ಶಂಕರಪ್ಪ, ನಗರಸಭಾ ಸದಸ್ಯರಾದ ಸಂಗಮೇಶ್, ಪದ್ಮತಿಮ್ಮೇಗೌಡ, ಜಯಲಕ್ಷಿö್ಮ, ಸಂದ್ಯಾಕಿರಣ್, ಮೋಹನ್‌ಕುಮಾರ್, ಮಾಜಿ ನಗರಸಭಾ ಸದಸ್ಯರಾದ ಪ್ರಸನ್ನಕುಮಾರ್, ತರಕಾರಿ ಗಂಗಾಧರ್, ಲೋಕೇಶ್, ಕಾಡುಗೊಲ್ಲ ಸಮಾಜದ ತಾ.ಅಧ್ಯಕ್ಷ ಬಾಲರಾಜು, ದಿಲೀಪ್ ಸೂಗೂರು, ಜಗದೀಶ್, ಸತೀಶ್, ಪ್ರಕಾಶ್ ಮತ್ತಿತ್ತರು ಹಾಜರಿದ್ದರು.
ವರದಿ:ಮಂಜುನಾಥ್ ಹಾಲ್ಕುರಿಕೆ




