ತಿಪಟೂರು : ತಾಲ್ಲೂಕು ಕಛೇರಿಯ ಚುನಾವಣಾ ಶಿರಸ್ತೇದಾರ್ ಎನ್,ಸೋಮಶೇಖರ್ 2024 ಸೆಪ್ಟಂಬರ್ 20ರಿಂದ ಕರ್ತವ್ಯ ಗೈರು ಹಾಜರಾಗಿದ್ದು ಈ ತಹಲ್‌ನವರೆಗೆ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ, ಹಾಗೂ ನೋಟೀಸ್ ದೂರವಾಣಿ ಸಂಪರ್ಕಕ್ಕೆ ಕೂಡ ಸಿಗುತ್ತಿಲ್ಲವಾದ ಕಾರಣ ಈ ಪ್ರಕಟಣೆ ನೀಡಲಾಗಿದ್ದ ಈ ಕೂಡಲೇ ಕರ್ತವ್ಯಕ್ಕೆ ಹಾಜರಾಗುವುದು ಇಲ್ಲವಾದಲ್ಲಿ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಪಟೂರು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದೇ ರೀತಿ ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ ಬಿಳಿಗೆರೆ ವೃತ್ತದ ಗ್ರಾಮ ಆಡಳಿತ ಅಧಿಕಾರಿ ಕೆ.ಎಚ್.ಶಂಕರ್ 2023 ಅಕ್ಟೋಬರ್ 18ರಿಂದ ಕರ್ತವ್ಯ ಗೈರು ಹಾಜರಾಗಿದ್ದು ಈ ತಹಲ್‌ನವರೆಗೆ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ, ಹಾಗೂ ನೋಟೀಸ್ ದೂರವಾಣಿ ಸಂಪರ್ಕಕ್ಕೆ ಕೂಡ ಸಿಗುತ್ತಿಲ್ಲವಾದ ಕಾರಣ ಈ ಪ್ರಕಟಣೆ ನೀಡಲಾಗಿದ್ದ ಈ ಕೂಡಲೇ ಕರ್ತವ್ಯಕ್ಕೆ ಹಾಜರಾಗುವುದು ಇಲ್ಲವಾದಲ್ಲಿ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಪಟೂರು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:ಮಂಜುನಾಥ್ ಹಾಲ್ಕುರಿಕೆ




