Spread the love

ತಿಪಟೂರು:ಗ್ರಾಮಪಂಚಾಯ್ತಿಗಳು ನೈಜ ಗ್ರಾಮಾಡಳಿತದ ಕೇಂದ್ರಗಳಾದಾಗ ಗ್ರಾಮಗಳು ಸಮಗ್ರವಾಗಿ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಪ್ರಭು ತಿಳಿಸಿದರು.
ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯ ಆಡಿಟೋರಿಯಂ ನಲ್ಲಿ ಆಯೋಜಿಸಿದ ಗ್ರಾಮಪಂಚಾಯ್ತಿ ಅಧ್ಯಕ್ಷರು ಉಪಾಧ್ಯಕ್ಷರು,ಸದಸ್ಯರು ಹಾಗೂ ಗ್ರಾಮಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು, ಕಾರ್ಯದರ್ಶಿಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದ ಅವರು,ಗ್ರಾಮಪಂಚಾಯ್ತಿಗಳು ಗ್ರಾಮೀಣಜನ ಆಶೋತ್ತರಗಳನ್ನ ಈಡೇರಿಸುವ,ನೈಜ ಗ್ರಾಮಾಡಳಿತ ಕೇಂದ್ರಗಳಾಗ ಬೇಕು,ಸರ್ಕಾರದ ಸವಲತ್ತುಗಳು ನೇರವಾಗಿ ಜನರಿಗೆತಲುಪಿಸಲು ಸಾಧ್ಯವಾಗುತ್ತದೆ. ತುಮಕೂರು ಜಿಲ್ಲೆ ನರೇಗ ಯೋಜನೆಯಲ್ಲಿ ಸುಮಾರು 650ಕೋಟಿ ಗುರಿ ಸಾಧಿಸುವ ಮೂಲಕ,ಉತ್ತಮಸಾಧನೆ ಮಾಡಿದೆ.ಈ ಸಾಧನೆಗೆ ಕಾರಣರಾದ ಎಲ್ಲ ಗ್ರಾಮಪಂಚಾಯ್ತಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಅಭಿನಂದನೆಗಳು,ವಯುಕ್ತಿಕ ಕಾಮಗಾರಿಗಳ ಜೊತೆಗೆ ಸಮುದಾಯ ಕಾಮಗಾರಿಗಳನ್ನ ಹೆಚ್ಚಿನ ಪ್ರಮಾಣದಲ್ಲಿ ಕೈಗೊಳ್ಳುವ ಮೂಲಕ ಸಾರ್ವಜನಿಕ ಆಸ್ತಿಸೃಜನೆ ಮಾಡುವ ಕೆಲಸ ಮಾಡಲಾಗಿದೆ. ಜಿಲ್ಲಾಪಂಚಾಯ್ತಿ ವ್ಯಕ್ತಿಯಲ್ಲಿ 29ಇಲಾಖೆಗಳು ಕೆಲಸ ಮಾಡುತ್ತಿವೆ ಲೈನ್ ಡಿಪಾರ್ಟ್ಮೆಂಟ್ ಗಳು ಹೊಂದಾಣಿಕೆಯಿಂದ ಕೆಲಸ ಮಾಡಿ,ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು.ಸರ್ಕಾರದ ಲ್ಲಿ ನರೇಗ ಯೋಜನೆ ಕೆಲಸಗಳಿಗೆ ಹಣಕಾಸಿನ ಕೊರತೆ ಇಲ್ಲ,ಗ್ರಾಮಪಂಚಾಯ್ತಿಗಳಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಿ.ನಿಮಗೆ ಅನುದಾನ ನಾವು ನೀಡುತ್ತೇವೆ. ನಿಮ್ಮ ಗ್ರಾಮದ ಅಭಿವೃದ್ದಿ ಮಾಡಿ,ನಿಮ್ಮ ಹೆಸರು ಉಳಿಯುತ್ತದೆ. ಗ್ರಾಮಾಡಳಿತದಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು ನಿಮ್ಮ ಅಧಿಕಾರ ಹಾಗೂ ಕರ್ತವ್ಯಗಳನ್ನ ಜವಾಬ್ದಾರಿಯಿಂದ ನಿಭಾಯಿಸಿ ಎಂದು ತಿಳಿಸಿದರು .

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಕೆ.ಷಡಕ್ಷರಿ ಮಾತನಾಡಿ ಗ್ರಾಮಸ್ಪರಾಜ್ಯ ಮಹಾತ್ಮ ಗಾಂಧೀಜಿಯವರ ಕನಸು ಗ್ರಾಮಾಪಂಚಾಯ್ತಿಗಳು ಸಭಲೀಕರಣಗೊಂಡಾಗ ಗಾಂಧೀಜಿ ಕನಸಿಗೆ ಜೀವಬರುತ್ತದೆ.ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿದರೆ, ಗ್ರಾಮಗಳಲ್ಲಿ ಜನ ಅತ್ಯಂತ ಗೌರವದಿಂದ ಕಾಣುತ್ತಾರೆ,ನಾನು ಮೂರು ಭಾರೀ ಶಾಸಕನಾಗಿ ಕೆಲಸ ಮಾಡಿದ್ದೇನೆ.ಮೊದಲಭಾರೀ ಶಾಸಕನಾಗಿದ್ದ ಅವಧಿಯಲ್ಲಿ ಸುಮಾರು 8ಸಾವಿರ ಕುಟುಂಬಗಳಿಗೆ ಅನುಕೂಲವಾಗುವಂತೆ,18 ಸಾವಿರ ಹೆಕ್ಟೆರೆ ಬಗರ್ ಹುಕ್ಕುಂ ಭೂಮಿ ಮಂಜೂರು ಮಾಡಿದ್ದೇನೆ,ಸಾವಿರಾರು ವಸತಿರಹಿತರಿಗೆ ವಸತಿ ಹಾಗೂ ನಿವೇಷನ ನೀಡಿದ್ದೇವೆ ಆದರೂ ಅಭಿವೃದ್ದಿಯ ವಿಷಯದಲ್ಲಿ ತೃಪ್ತಿಯಿಲ್ಲ.ನಮ್ಮ ತಾಲ್ಲೋಕಿಗೆ ಅಗತ್ಯವಿರುವ ಎಲ್ಲಾ ಯೋಜನೆಗಳನ್ನ ತರಬೇಕು ನಮ್ಮ ಜನರಿಗೆ ಹೆಚ್ಚು ಅನುಕೂಲವಾಗಬೇಕು ಎನ್ನುವ ಆಸೆಹೊಂದಿದ್ದೇನೆ,ಸರ್ಕಾರದ ಯೋಜನೆಗಳು ತಳಮಟ್ಟದ ಜನರಿಗೆ ತಲುಪುವಂತೆ ಮಾಡಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು.ನೀವು ಹೆಚ್ಚು ಕೆಲಸ ಮಾಡಬೇಕು ಗ್ರಾಮೀಣಜನರಿಗೆ ಗ್ರಾಮಪಂಚಾಯ್ತಿಗಳು ಸಕ್ರೀಯವಾಗಿ ಕೆಲಸ ಮಾಡಿದರೆ.ನಗರಕ್ಕೆ ಬರುವ ಕೆಲಸ ತಪ್ಪುತ್ತದೆ.ಗ್ರಾಮಪಂಚಾಯ್ತಿಗಳಿಗೆ ಮೊದಲಿಗಿಂತಲೂ ಹೆಚ್ಚು ಜವಾಬ್ದಾರಿಗಳಿದು,ನಿಮಗೆ ಕೊಟ್ಟಕೆಲಸ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.


ಇಒ ಸುದರ್ಶನ್ ಮಾತನಾಡಿ ಗ್ರಾಮಪಂಚಾಯ್ತಿಗಳು ಹಳ್ಳಿಗಳ ಜನರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು.ಮೂಲಭೂತ ಸೌಕಾರ್ಯಗಳಾದ ರಸ್ತೆ.ನೀರು.ಚರಂಡಿ .ಬೀದಿದೀಪ ನಿರ್ವಹಣೆ,ಹೆಚ್ಚು ಆಧ್ಯತೆ ನೀಡಿ ಕೆಲಸ ಮಾಡಿ,ಇತ್ತಿಚಿಗೆ ಒತ್ತುವರಿ ತೆರವಿನ ಅಧಿಕಾರವನ್ನ ಸರ್ಕಾರ ಗ್ರಾಮಪಂಚಾಯ್ತಿಗಳಿಗೆ ನೀಡಿದೆ.ಗ್ರಾಮಪಂಚಾಯ್ತಿ ಅಧಿಕಾರಿಗಳು ಒತ್ತುವರಿ ತೆರವಿಗೆ ಆಧ್ಯತೆ ನೀಡಬೇಕು. ಗ್ರಾಮೀಣ ಭಾಗದಲ್ಲಿ ಬೀದಿನಾಯಿಗಳ ಹಾವಳಿಜಾಸ್ತಿಯಾಗಿದ್ದು. ಬೀದಿನಾಯಿಹಾವಳಿ ನಿಗ್ರಹಕ್ಕೆ ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪವನ್ ಕುಮಾರ್.ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ನಂದೀಶ್ ಸೇರಿದಂತೆ ಅನೇಕರು ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!