ತಿಪಟೂರು:ತಾಲ್ಲೋಕಿನ ನೊಣವಿನಕೆರೆ ಹೋಬಳಿ ಕರೀಕೆರೆ ಗ್ರಾಮದಲ್ಲಿ ಆಸ್ತಿವಿಚಾರವಾಗಿ ಅಣ್ಣ ತಮ್ಮಂದಿರ ನಡುವೆ ಗಲಾಟೆ ನಡೆದು ಯುವಕ ನೋರ್ವ ದುರ್ಮರಣ ಹೊಂದಿರುವ ಘಟನೆ ನಡೆದಿದೆ.
ಕರೀಕೆರೆ ಗ್ರಾಮದ ವಾಸಿ ಮಂಜುನಾಥ್ 32 ವರ್ಷ ಮೃತ ದುರ್ದೈವಿ.
ಕರೀಕೆರೆ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ಮೃತ ಮಂಜುನಾಥ್ ಹಾಗೂ ಅತನ ಚಿಕ್ಕಪ್ಪ ಶೇಖರಯ್ಯ ಮತ್ತು ಮನು ಎಂಬುವವರ ನಡುವೆ ಗಲಾಟೆ ನಡೆದಿದ್ದು. ಗಲಾಟೆಯಲ್ಲಿ ಮಂಜುನಾಥ್ ಎದೆಭಾಗಕ್ಕೆ ಬಲವಾದ ಪೆಟ್ಟುಬಿದ್ದಿದ್ದು.ನೊಣವಿನಕೆರೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತ ಪಟ್ಟಿರುತ್ತಾರೆ.ಸ್ಥಳಕ್ಕೆ ನೊಣವಿನಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಶವವನ್ನ ಸಾರ್ವಜನಿಕ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ




