Spread the love

ತಿಪಟೂರು:ನಗರಸಭೆ ಅಧಿಕಾರಿಗಳ ಯಡವಟ್ಟಿನಿಂದ ನಗರದ ಗಾಂಧೀನಗರ ಪಾರ್ಕ್ ರಸ್ತೆಯ ರೈಲ್ವೆಗೇಟ್ ಆಟೋ ನಿಲ್ದಾಣದ ಹತ್ತಿರ ನೂತನವಾಗಿ ನಿರ್ಮಾಣ ಮಾಡಿರುವ ಚರಂಡಿ ಸೇತುವೆ ಮೇಲ್ಬಾಗ ಸ್ಲ್ಯಾಬ್ ಹಾಕದೇ ಬಿಟ್ಟಿದ್ದು ರಾತ್ರಿ ವೇಳೆಯಲ್ಲಿ ಯವಸ್ವರೂಪಿ ಗುಂಡಿಯಾಗಿದ್ದು ಕತ್ತಲೆ ವೇಳೆ ವೇಗವಾಗಿ ಬರುವ ವಾಹನ ಸವಾರರು ಗುಂಡಿಯಲ್ಲಿ ಬೀಳುವ ಆತಂಕ ಎದುರಾಗಿದೆ. ರಾತ್ರಿ ವೇಳೆ ಅನೇಕವಾಹನಗಳು ಗುಂಡಿಗೆ ಬಿದ್ದು ಗಾಯಗೊಂಡಿದ್ದಾರೆ .


ಅಪಘಾತಗಳು ನಡೆಯುತ್ತಿರುವುದನ್ನ ಕಂಡ ಸ್ಥಳೀಯರು ಚರಂಡಿ ಗುಂಡಿಯ ಸುತ್ತಲೂ ತಾತ್ಕಾಲಿಕವಾಗಿ ಕಲ್ಲು ಜೋಡಿಸಿದ್ದಾರೆ. ಗಾಂಧೀನಗರ ಮಸೀದಿ ರಸ್ತೆ ಹಾಗೂ ಪಾರ್ಕ್ ರಸ್ತೆಗೆ ಸಂಪರ್ಕ ಕಲ್ಪಿಸುವ ತಿರುವು ಇರುವ ಕಾರಣ ಅವಘಾತ ಉಂಟಾಗುವ ಸಂಭವವಿದೆ. ಸರ್ವಜನಿಕರು ರಸ್ತೆ ಮಧ್ಯದಲ್ಲಿಯೇ ಸ್ಲ್ಯಾಬ್ ಹಾಕದ ಕಾರಣ ಅಪಘಾತಗಳಿಗೆ ಕಾರಣವಾಗುತ್ತದೆ ಎಂದು ಅನೇಕ ಭಾರೀ ನಗರಸಭೆ ಎಇಇ ರವರ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ. ಕಾಮಗಾರಿ ಪೂರ್ಣಗೊಳಿಸಿ ಗುತ್ತಿಗೆದಾರರು,ಬಿಲ್ ಪಡೆದಿದ್ದಾರೆ.ಆದರೂ ಸ್ಲ್ಯಾಬ್ ಹಾಕಿಲ್ಲ.ನಗರಸಭೆ ಗಮನಕ್ಕೆ ತಂದರು ಅಧಿಕಾರಿಗಳು ಸಾರ್ವಜನಿಕ ಮನವಿಗೆ ಸ್ಪಂದಿಸುತ್ತಲ್ಲ .ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!