ತಿಪಟೂರು: ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಬಿ.ಆರ್ ಗವಾಯಿ ಯವರ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ತಿಪಟೂರಿನಲ್ಲಿ ದಲಿತಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಿ.
ನಗರದ ನಗರಸಭಾ ವೃತ್ತದಲ್ಲಿ ಮಾನವಸರಪಳಿ ನಿರ್ಮಿಸಿ ಮನುವಾದಿ ವಕೀಲ ಕಿಶೋರ್ ರಾಕೇಶ್ ಗಡಿಪಾರು ಮಾಡಬೇಕುಎಂದು ಒತ್ತಾಯಿಸಲಾಯಿತು.

ನಗರಸಭಾ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಬಿ.ಹೆಚ್ ರಸ್ತೆ ಮೂಲಕ ಸಾಗಿ ತಾಲ್ಲೋಕು ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ನಿರತರನ್ನ ಉದೇಶಿಸಿ ಮಾತನಾಡಿದ ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಕೆ.ಎಂ ಶಾಂತಪ್ಪ ದೇಶದ ಸರ್ವೋಚ್ಚ ನ್ಯಾಯಲಯದ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಬಿ.ಆರ್ ಗವಾಯಿ ಮೇಲೆ ಮನುವಾದಿ ವಕೀಲ ಕಿಶೋರ್ ರಾಕೇಶ್ ಶೂ ಎಸೆದಿರುವುದು.ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಮಾಡಿರುವ ಅವಮಾನವಾಗಿದೆ. ದೇಶದ ಮಾನಮರ್ಯಾದೆ ವಿಶ್ವಮಟ್ಟದಲ್ಲಿ ಅಪಹಾಸ್ಯಕೊಳಗಾಗಿದೆ.ದೇಶದ ಕಾನೂನಿನ ಶಿಖರದಂತ್ತಿರುವ ಸುಪ್ರೀಮ್ ಕೋರ್ಟ್ ನಲ್ಲಿಯೇ ಹಲ್ಲೆಯಾಗುರುವುದು ಖಂಡನೀಯ ಹಾಗೂ ದೇಶದ್ರೋಹದ ಕೃತ್ಯವಾಗಿದ್ದು.ಕೇಂದ್ರ ಸರ್ಕಾರ ಕೂಡಲೇ ಆರೋಪಿ ಗಡಿಪಾರು ಮಾಡದೇ ಮೃದುಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ.ಈ ಕೃತ್ಯ ಸಂವಿಧಾನಕ್ಕೆ ಮಾಡಿದ ಅಪಮಾನ . ಕಾನೂನಿಗೆ ವಿರುದ್ಧವಾಗಿನಡೆದುಕೊಂಡ ವಕೀಲರನ್ನು ಕೂಡಲೇ ಬಂಧಿಸಬೇಕು .
ಆದರೂಮುಖ್ಯ ನ್ಯಾಯಾಧೀಶರು , ಹಿರಿಯ ವಕೀಲ ಮಾಡಿದ ಕೃತ್ಯವನ್ನು ಉದಾತ್ತ ಮನೋಭಾವದಿಂದ ನೋಡಿ ಅವರನ್ನು ಕ್ಷಮಿಸಿದ್ದಾರೆ . ಆದರೆ ಈ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಆತನಿಗೆ ಉಗ್ರ ಶಿಕ್ಷೆ ವಿಧಿಸಬೇಕು . ಮುಂದೆ ಇಂತಹ ಹೀನ ಕೃತ್ಯವನ್ನು
ಯಾರೂ ಮಾಡಬಾರದು.ನಮ್ಮ ಭವ್ಯ ಸಂವಿಧಾನ ಉಳಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ.ಇಂತಹ ಕಿಡಿಗೇಡಿಗಳು ಮನುವಾದಿಗಳಿಂದ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಅಪಾಯವಿದ್ದು ಎಲ್ಲರೂ ಒಗ್ಗೂಡಿ ಹೋರಾಟನಡೆಸಿ ಮನುವಾದಿ ಕ್ರಿಮಿಗಳನ್ನ ಹಿಂಮೆಟ್ಟಿಸಬೇಕು ಎಂದು ತಿಳಿಸಿದರು.

ಚಲವಾದಿ ಮಹಾಸಭಾ ಅಧ್ಯಕ್ಷ ಬಜಗೂರು ಮಂಜುನಾಥ್ ಮಾತನಾಡಿ ಜಸ್ಟೀಸ್ ಬಿ.ಆರ್ ಗವಾಯಿ ಅವರ ಮೇಲಿನ ಹಲ್ಲೆ ದೇಶದ ಸಂವಿಧಾನ ಹಾಗೂ ಕಾನೂನಿಗೆ ಮಾಡಿದ ಅವಮಾನ ಸಂವಿಧಾನ ಹಾಗೂ ಸಮಾಜತೆ ಒಪ್ಪದ ಕಿಡಿಗೇಡಿಗಳು.ಇಂತಹ ದೇಶದ್ರೋಹದ ಕೆಲಸ ಮಾಡುತ್ತಲ್ಲೇ ಬಂದಿದ್ದಾರೆ,ದೇಶದ ಇತಿಹಾಸದಲ್ಲಿ ಸರ್ಪೋಚ್ಚ ನ್ಯಾಯದೀಶರ ಮೇಲೆ ಹಲ್ಲೇ ನಡೆದಿರುವುದು ಇದೇ ಮೊದಲು,ಅದು ದಲಿತನೊಬ್ಬ ಸರ್ವೋಚ್ಚ ನ್ಯಾಯಾಧೀಶರ ಸ್ಥಾನದಲ್ಲಿ ಕುಳಿತ್ತಿದ್ದಾರೆ,ಎನ್ನೋ ಅಸಹನೆಯಿಂದ ಈ ಕೃತ್ಯ ನಡೆಸಲಾಗಿದೆ.ನ್ಯಾಯಮೂರ್ತಿಗಳ ಮೇಲಿನ ಹಲ್ಲೇಯನ್ನ ಗಂಭೀರವಾಗಿ ಪರಿಗಣಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಮಾದಿಗ ದಂಡೋರ ತಾಲ್ಲೋಕು ಅಧ್ಯಕ್ಷ ಕುಪ್ಪಾಳು ರಂಗಸ್ವಾಮಿ ಮಾತನಾಡಿ ನ್ಯಾಯದ ದೇಗುಲ ಸರ್ವೋಚ್ಚ ನ್ಯಾಯಾಲಯದಲ್ಲಿ ಇಂತಹ ಕೃತ್ಯಗಳು ನಡೆದರೆ,ಸಾಮಾನ್ಯ ಪ್ರಜೆ ಯಾರಬಳಿ ನ್ಯಾಯ ಕೇಳಬೇಕು.ಮನುವಾದದ ದರ್ಪದಲ್ಲಿ ಸಾವಿರಾರು ವರ್ಷಗಳಿಂದ ಶೋಷಣೆ ನಡೆಸುತ್ತಿರುವ ಮನುವಾದಿಗಳು ದಲಿತರ ಕೈಗೆ ಅಧಿಕಾರ ಸಿಕ್ಕಾಗ ಕುಪಿತರಾಗಿ ವರ್ತಿಸುತ್ತಿದ್ದಾರೆ.ನ್ಯಾಯಮೂರ್ತಿಗಳ ಮೇಲಿನ ಹಲ್ಲೆ ಪ್ರಕರಣ ದೇಶದ್ರೋಹದ ಕೆಲಸ ಎಂದು ಪ್ರಕರಣ ದಾಖಲು ಮಾಡಿ,ಗಡಿಪಾರು ಮಾಡದೆ ಕೇಂದ್ರ ಸರ್ಕಾರ ಕೈ ಕಟ್ಟಿ ಕುಳಿತಿದೆ,ನಮ್ಮ ನ್ಯಾಯದಾನ ವ್ಯವಸ್ಥೆ ಸುರಕ್ಷಿತವಾಗ ಬೇಕಾದರೆ,ಸಂವಿಧಾನ ವಿರೋಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಸಂಚಾಲಕ ನಾಗತೀಹಳ್ಳಿ ಕೃಷ್ಣಮೂರ್ತಿ ಮಾತನಾಡಿ ಸುಪ್ರೀಂಕೋರ್ಟ್ ಜಸ್ಟೀಸ್ ಮೇಲಿನ ಹಲ್ಲೆ ಕೇವಲ ವ್ಯಕ್ತಿಯ ಮೇಲಿನ ಹಲ್ಲೆಯಲ್ಲ. ದೇಶದ ಕಾನೂನಿನ ಮೇಲಿನ ಹಲ್ಲೆ .ಕೂಡಲೇ ಅವಿವೇಕಿ ವಕೀಲ ಕಿಶೋರ್ ರಾಕೇಶ್ ಗಡಿಪಾರು ಮಾಡಬೇಕು.ಸಾಮಾಜಿಕ ಜಾಲತಾಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯೋರ್ವ ನ್ಯಾಯಾಧೀಶರ ಮೇಲಿನ ಹಲ್ಲೇ ಸಮರ್ಥಿಸುವಂತೆ ಮಾತನಾಡಿರುವುದು ಸಹ ಕಾನೂನು ವಿರೋಧಿ ಕೆಲಸ ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಮೂಲಕ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು
ಪ್ರತಿಭಟನೆಯಲ್ಲಿ ಮುಖಂಡರಾದ.ಡಿಎಸ್ಎಸ್ ಸಂಘಟನಾ ಸಂಚಾಲಕ ಮತ್ತಿಹಳ್ಳಿ ಹರೀಶ್ ಗೌಡ. ಪೆದ್ದಿಹಳ್ಳಿ ನರಸಿಂಹಯ್ಯ.ಯಗಚೀಕಟ್ಟೆ ರಾಘವೇಂದ್ರ,ಮತ್ತಿಘಟ್ಟ ಶಿವಕುಮಾರ್ .ಗಾಂಧೀ ನಗರ ಬಸವರಾಜು.ಲಿಂಗದೇವರು,ಕರ್ನಾಟಕ ಮದಕರಿ ನಾಯಕ ಸಂಘದ ಅಧ್ಯಕ್ಷ ಮಾದೀಹಳ್ಳಿ ಜಯಸಿಂಹ,ಬಿಳಿಗೆರೆ ಮಹದೇವ್.ಕರಡಾಳು ವೆಂಕಟೇಶ್ ಮೂರ್ತಿ .ಈಚನೂರು ನರಸಿಂಹಮೂರ್ತಿ.ಸೋಮಶೇಖರದ.ನಾಗ್ತಿಹಳ್ಲಿ ಮೈಲಾರಪ್ಪ.ಚಿಕ್ಕತಿಮ್ಮಯ್ಯ.ಲಕ್ಷ್ಮೀ ದೇವಮ್ಮ ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ









