ತಿಪಟೂರು: ಸಾರ್ವಜನಿಕರು ಸಹಕಾರಿಗಳಲ್ಲಿ ನಂಬಿಕೆ ಇಟ್ಟು ವ್ಯವಹರಿಸುತ್ತಾ ತಮ್ಮ ಕನಸನ್ನು ಕಟ್ಟಿಕೊಂಡು, ಠೇವಣಿ ರೂಪದಲ್ಲಿ ಹಣವನ್ನು ಇಟ್ಟು, ನಮ್ಮ ಸಂಸಾರಕ್ಕೆ ಮುಂದೆ ಅನುಕೂಲವಾಗುತ್ತದೆ ಎಂದು ಭಾವಿಸಿ ವ್ಯವಹಾರ ಮಾಡುತ್ತಿರುವ ಸದಸ್ಯರಿಗೆ ಯಾವುದೇ ರೀತಿಯ ತೊಂದರೆ ಆಗದಂಗೆ, ನಮ್ಮ ಸಹಕಾರಿಯು ಕಾರ್ಯ ನಿರ್ವಹಿಸುತ್ತಿದೆ ಎಂದು ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಎಸ್.ಬಿ. ಲಿಂಗರಾಜು (ಶಿವಪುರ) ತಿಳಿಸಿದರು.

ನಗರದ ಸಿಂಗ್ರಿ ನಂಜಪ್ಪ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘ ನಿಯಮಿತದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಹಕಾರಿಯ ಸದಸ್ಯರಿಗೆ ಮರಣೋತ್ತರ ಪರಿಹಾರ ನಿಧಿ ಸೌಲಭ್ಯ,ಜಂಟಿ ಸಾಲ ಮತ್ತು ವಾಹನ ಸಾಲ ಸೇರಿದಂತೆ ನಮ್ಮ ಸಹಕಾರಿಯ ಸದಸ್ಯರಿಗೆ ಸರ್ವತೋಮುಖ ಆರ್ಥಿಕ ಅಭಿವೃದ್ಧಿಗಾಗಿ, ಸಾಕಷ್ಟು ಸೌಲಭ್ಯ ಮತ್ತು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ ಎಂದು ತಿಳಿಸಿದರು.
ಸಮಾಜದ ಹಿರಿಯ ಮುಖಂಡ ಕೋಳಿ ಮಲ್ಲಯ್ಯ ಮಾತನಾಡಿ, ಸಹಕಾರಿಯಿಂದ ಪಡೆದಿರುವ ಸಾಲವನ್ನು ಸದಸ್ಯರು ನಿಗದಿತ ಸಮಯಕ್ಕೆ ಮರುಪಾವತಿಸಿದಾಗ, ಸಂಘದ ಅಭಿವೃದ್ಧಿಗೆ ಮತ್ತು ಸದಸ್ಯರಿಗೆ ಅನುಕೂಲವಾಗುತ್ತದೆ ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕೆಂದರು.
ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ, ಸಹಕಾರಿಯ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಸದಸ್ಯರಾದ ಲೋಕೇಶ್, ತರಕಾರಿ ಗಂಗಾಧರ್, ಸಹಕಾರಿಯ ಉಪಾಧ್ಯಕ್ಷ ಹೊನ್ನೇಗೌಡ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಕೆ.ಚೈತ್ರ,ನಿರ್ದೇಶಕರಾದ ಶಿವಲಿಂಗಪ್ಪ,ಧನಂಜಯ, ಕುಮಾರಸ್ವಾಮಿ,ಹುಚ್ಚೇಗೌಡ, ಪುಟ್ಟರಾಜು,ದೇವರಾಜು,ನಾಗರತ್ನ, ಉಷಾ,ಸೀತಾರಾಮಯ್ಯ ಮತ್ತು ಶಿವಣ್ಣ,ಸಿಬ್ಬಂದಿ ಪಲ್ಲವಿ,ಮುಖಂಡರಾದ ಮಧು, ಗುಲಾಬಿ ಸುರೇಶ್ ಮತ್ತು ವೈಟ್ ಮಂಜುನಾಥ್ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ಸದಸ್ಯರು ಹಾಜರಿದ್ದರು.
ವರದಿ:ಮಂಜುನಾಥ್ ಹಾಲ್ಕುರಿಕೆ








