ತಿಪಟೂರು:ನಗರಸಭೆ ಚುನಾವಣೆ ಅಕ್ಟೋಬರ್ 29ರಂದು ನಡೆಯುತ್ತಿದ್ದು ಪೋಲೀಸ್ ಸರ್ಪಗಾವಲಿನಲ್ಲಿ ಚುನಾವಣೆಗೆ ಭರ್ಜರಿ ಬಂದೂಬಸ್ತ್ ಏರ್ಪಡಿಸಲಾಗಿದೆ.ಆಧ್ಯಕ್ಷಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಸದಸ್ಯರಾದ ಶ್ರೀಮತಿ ಓಹೀಲಾ ಗಂಗಾಧರ್ ನಾಮಪತ್ರಸಲ್ಲಿಸಿದ್ದು, ವಾರ್ಡ್ ನಂಬರ್ 31ರ ಬಿಜೆಪಿ ಸದಸ್ಯೆ ಶ್ರೀಮತಿ ಎಂ.ಎಸ್ ಅಶ್ವಿನಿ ಎರಡು ನಾಮಪತ್ರಸಲ್ಲಿಸಿದ್ದು ಇಬ್ಬರೂ ಬಿಜೆಪಿ ಸದಸ್ಯರು ನಾಮಪತ್ರಸಲ್ಲಿಸಿದ್ದಾರೆ. ಜೆಡಿಎಸ್ ಹಾಗೂ ಆಡಳಿತರೂಡ ಕಾಂಗ್ರೇಸ್ ಪಕ್ಷದಿಂದ ಯಾವುದೇ ಸಲ್ಲಿಸದಿರುವುದು ತೀವ್ರ ಕುತೂಹಲ ಉಂಟುಮಾಡಿದರೆ.ಬಿಜೆಪಿ ಸದಸ್ಯೆಯಾದ ಎಂ.ಎಸ್. ಅಶ್ವಿನಿ ಶಾಸಕ ಕೆ.ಷಡಕ್ಷರಿ ಯವರ ಕಾರಿನಲ್ಲಿ ಬಂದು ನಾಮಪತ್ರಸಲ್ಲಿದ್ದಾರೆ ಎನ್ನಲಾಗಿದ್ದು, ಆಡಳಿತರೂಢ ಸರ್ಕಾರದ ಕಾಂಗ್ರೇಸ್ ಸದಸ್ಯರು ನಾಮಪತ್ರ ಸಲ್ಲಿಸದೇ ಇರುವುದು,ಸಾರ್ವಜನಿಕರಲ್ಲಿ ಕುತೂಹಲ ಉಂಟುಮಾಡಿದೆ. ಒಟ್ಟು 3ನಾಮಪತ್ರಗಳು ಸಲ್ಲಿಕೆಯಾಗಿದ್ದು
ಒಟ್ಟು 31 ಸದಸ್ಯ ಬಲದ ನಗರಸಭೆಯಲ್ಲಿ ಶಾಸಕರು ಹಾಗೂ ಸಂಸದರ ಮತಸೇರಿ 33ಮತಗಳು ಕೃಢೀಕರಗೊಳ್ಳುತ್ತವೆ.

ನಗರಸಭೆಯಲ್ಲಿ ಬಿಜೆಪಿ 11ಸದಸ್ಯರು,ಕಾಂಗ್ರೇಸ್ ಪಕ್ಷದ 09 ಸದಸ್ಯರು ,ಜೆಡಿಎಸ್ ಪಕ್ಷದಿಂದ 05 ಜನ ಸದಸ್ಯರು ಪಕ್ಷೇತರರಾಗಿ 06ಜನ ಶಾಸಕರು ಹಾಗೂ ಸಂಸದರ ಮತ ಸೇರಿ33ಮತಗಳ ಆಗುತ್ತವೆ. ಇಲ್ಲಿಂದ ಕಳೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ವಿಪ್ ಉಲ್ಲಂಗಿಸಿ ಅಡ್ಡ ಮತದಾನದ ಮಾಡಿ ಅನಾರ್ಹತೆ ಹೊಂದಿದ್ದ,ನಗರಸಭೆ ಸದಸ್ಯರಾದ ಶ್ರೀಮತಿ ಅಶ್ವಿನಿದೇವರಾಜು,ಎ.ಬಿ.ಜಯರಾಮ್. ಆಸೀಫಾ ಬಾನು,ಪದ್ಮ ಶಿವಪ್ಪ ಈ ನಾಲ್ಕು ಜನ ಸದಸ್ಯರ ಅನರ್ಹತೆ ಆದೇಶಕ್ಕೆ ತಡೆಯಾಜ್ಞೆ ಸಿಕ್ಕಿದೆ.ಚುನಾವಣೆ ರಂಗೇರಲು ಕಾರಣವಾಗಿದ್ದು. ಸದಸ್ಯರಾದ ಡಾ//ಓಹೀಲಾ ಗಂಗಾಧರ್ ಹಾಗೂ ಶ್ರೀ ಅಶ್ವಿನಿ ಎಂ.ಎಸ್ ನಾಮಪತ್ರಸಲ್ಲಿಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು. ನಗರಸಭಾ ಚುನಾವಣಾ ಫಲಿತಾಂಶ ರಾಜ್ಯದ ಗಮನಸೆಳೆಯಲಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ









