Spread the love

ತಿಪಟೂರು:ನಗರದ ಅಮಾನೀಕೆರೆ ಏರಿ ದುರಸ್ತಿ ಕಾಮಗಾರಿ ಸೇರಿದಂತೆ ಅಮಾನೀಕೆರೆ ಸೌಂದರ್ಯಿಕರಣ ಕಾಮಗಾರಿಗೆ ಶಾಸಕ ಕೆ.ಷಡಕ್ಷರಿ ಗುದ್ದಲಿಪೂಜೆ ನೆರವೇರಿಸಿದರು.


ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಶಾಸಕರು ಅಮಾನೀಕೆರೆ ಏರಿ ಶಿಥಿಲವಾಗಿದ್ದು. ನೀರು ಸೋರಿಕೆಯಾಗುತ್ತಿದೆ,ಏರಿ ಏನಾದ್ರು ಹೊಡೆದರೆ ಸುಮಾರು ಮೂರ್ನಾಲ್ಕು ಹಳ್ಳಿಗಳು ಅಪಾಯಕ್ಕೆ ಒಳಗಾಗುತ್ತವೆ, ಆದರಿಂದ 5ಕೋಟಿ ವೆಚ್ಚದಲ್ಲಿ ಏರಿದುರಸ್ತಿಮಾಡಲಾಗುತ್ತಿದೆ.ಕೆರೆ ಸೌಂದರ್ಯಕರಣಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದು,ನಗರದ ಅಮಾನೀಕೆರೆ ಆವರಣದಲ್ಲಿ ತುಮಕೂರು ಗ್ಲಾಸ್ ಹೌಸ್ ಗೂ ದೊಡ್ಡದ್ದಾಗಿ ಸುಮಾರು 200×300 ಅಳತೆಯ ಗ್ಲಾಸ್ ಹೌಸ್ ನಿರ್ಮಾಣ ಮಾಡಲಾಗುತ್ತಿದೆ.ಖಾಸಗೀ ಬಸ್ ನಿಲ್ದಾಣದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗುತ್ತಿದೆ.ಎಪಿಎಂಸಿ ಆಡಳಿತ ಕಚೇರಿ ನಿರ್ಮಾಣ ಮಾಡಲಾಗುವುದು.ನಾನು ಈ ಹಿಂದೆ ಶಾಸಕನಾಗಿದ್ದಾಗ ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಎಪಿಎಂಸಿ ಆಡಳಿತ ಕಚೇರಿ ನಿರ್ಮಾಣಕ್ಕೆ ಅನುದಾನ ತಂದಿದ್ದೆ,ಆದರೆ ಕೆಲವರು ಕಾಮಗಾರಿ ಮಾಡದೆ ತೊಂದರೆ ಮಾಡಿದರು.ಆದರೂ ತಿಪಟೂರು ಅಭಿವೃದ್ದಿಯ ದೃಷ್ಠಿಯಿಂದ ನಾನು ಮತ್ತೆ ಅನುದಾನ ತಂದಿದ್ದೇನೆ. ಶೀಘ್ರವಾಗಿ ಕಾಮಗಾರಿ ಪ್ರಾರಂಭ ಮಾಡಲಾಗುವುದು.ತಾಲ್ಲೋಕಿನ ಅಭಿವೃದ್ದಿಯೇ ನನ್ನ ಆಧ್ಯತೆ. ಜಿಲ್ಲಾಕೇಂದ್ರಕ್ಕೆ ಅಗತ್ಯವಾದ ಅಭಿವೃದ್ದಿಗೆ ಆಧ್ಯತೆ ನೀಡಬೇಕಾಗಿದೆ ಎಂದು ತಿಳಿಸಿದರು.


ಸಭೆಯಲ್ಲಿ ತಾ.ಪಂ ಮಾಜಿ ಸದಸ್ಯ ನ್ಯಾಕೇನಹಳ್ಳಿ ಸುರೇಶ್.ನಗರಸಭೆ ಮಾಜಿ ಅಧ್ಯಕ್ಷ ಟಿ.ಎನ್ ಪ್ರಕಾಶ್‌.ಸಣ್ಣನೀರಾವರಿ ಇಲಾಖೆ ಅಭಿಯಂತರರಾದ ದೊಡ್ಡಯ್ಯ. ವಿನಯ್ ಗುತ್ತಿಗೆದಾರ ಗೌರೀಶ್ ಮುಂತ್ತಾದವರು ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!