ಅಭಿಮಾನಿಗಳು,ಸ್ನೇಹಿತರಿಂದ ಹರಿದು ಬಂದ ಶುಭಾಷಯಗಳ ಮಹಾಪೂರ.
ತಿಪಟೂರು: ಸಮಾಜ ಸೇವಕ, ಗುತ್ತಿಗೆದಾರ ಹಾಗೂ ಅಖಿಲ ಭಾರತ ವೀರಶೈವಲಿಂಗಾಯಿತ ಮಹಾಸಭಾ ಹಾಸನಾ ಜಿಲ್ಲಾಧ್ಯಕ್ಷ ನವಿಲೇ ಪರಮೇಶ್ ಹುಟ್ಟುಹಬ್ಬ ನಗರದ ಹೊರವಲಯದ ಬಿ.ಜಿ.ಎಸ್ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.

ಬೆಳಿಗ್ಗೆಯಿಂದಲೇ ಮನೆಗೆ ಹತ್ತಾರು ಮಠಾಧೀಶರು ಆಗಮಿಸಿ ಹುಟ್ಟುಹಬ್ಬಕ್ಕೆ ಆಶೀರ್ವದಿಸಿದರು, ದೇವಾಲಯಗಳಿಗೆ ತೆರಳಿದ ನವಿಲೇ ಪರಮೇಶ್ ದಂಪತಿಗಳು ದೇವರ ದರ್ಶನಾಶೀರ್ವಾದ ಪಡೆದರು, ಬಿಜಿಎಸ್ ಸಭಾಂಗಣದಲ್ಲಿ ನಡೆದ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ , ಆಗಮಿಸಿದ್ದ ಹೃದಯ ತಜ್ಞ ವಿವೇಚನ್ ಮಾತನಾಡಿ ಸಮಾಜಸೇವೆಗೆ ಜೀವನ ಮುಡುಪಾಗಿಟ್ಟಿರುವ ಪರಮೇಶ್ ಹುಟ್ಟು ಹಬ್ಬಗಳು ನೂರಾರು ರಾಜ್ಯದಾದ್ಯಂತ ಆಚರಣೆಯಾಗಲಿ,ಸರಳ ವ್ಯಕ್ತಿತ್ವವಹೊಂದಿರುವ ಇವರು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಜೊತೆಗೆ ಸಮಾಜದಲ್ಲಿ ನೊಂದವರ ಪರವಾಗಿ ಕೆಲಸ ಮಾಡುತ್ತಿದ್ದಾರೆ,ತಮ್ಮ ತಂದೆಯವರಂತೆ ಶತಾಯುಷಿಗಳಾಗಲಿ ಎಂದರು.

ಕುಮಾರ್ ಆಸ್ಪತ್ರೆ ವೈದ್ಯರಾದ ಶ್ರೀಧರ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿ ಶ್ರಮದಿಂದ ಮೇಲೆ ಬಂದು ಸಾಮಾಜಿಕ ಸೇವೆ ಮಾಡುತ್ತಿರುವ ನವಿಲೆ ಪರಮೇಶ್ ಕುಟುಂಬ ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದರು, ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಯುವ ಮುಖಂಡ ನಿಖಿಲ್ ರಾಜಣ್ಣ, ಜೆಡಿಎಸ್ ಮುಖಂಡ ಲಿಂಗರಾಜು.ತಾ.ಪಂ ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್.ಸೇರಿದಂತೆ.ವಿವಿಧ ಪಕ್ಷಗಳ ರಾಜಕೀಯ ಮುಖಂಡರು ನೂರಾರು ಅಭಿಮಾನಿಗಳು ಭಾಗವಹಿಸಿ ಶುಭ ಹಾರೈಸಿದರು.
ವರದಿ :ಮಂಜುನಾಥ್ ಹಾಲ್ಕುರಿಕೆ





