ತಿಪಟೂರು: ವಿದ್ಯಾರ್ಥಿಗಳ ದೈಹಿಕ ಸದೃಢತೆಗೆ ಹಾಗೂ ಮಾನಸಿಕ ಸ್ಥಿರತೆಗೆ ಕ್ರೀಡೆಗಳು ಅತ್ಯಂತ ಪರಿಣಾಮಕಾರಿಯಾಗುತ್ತವೆ ಎಂದು ತಿಪಟೂರಿನ ವಿಧಾನಸಭಾ ಕ್ಷೇತ್ರದ ಶಾಸಕ. ಕೆ.ಷಡಕ್ಷರಿ ತಿಳಿಸಿದರು.

ತಾಲ್ಲೂಕಿನ ಕಲ್ಪತರು ಕ್ರೀಡಾಂಗಣದಲ್ಲಿ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳು ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆಯೆಂಬುದು ಶಿಕ್ಷಣರ್ಥಿಗಳ ಬದುಕಿನಘಟ್ಟವನ್ನೇ ಬದಲಾಯಿಸುವ ಶಕ್ತಿಯನ್ನೊದಿದೆ. ವಿದ್ಯಾರ್ಥಿಗಳು ಅಭ್ಯಾಸದ ಜೊತೆಗೆ ಕ್ರೀಡೆ, ಕಲೆ, ಸಾಹಿತ್ಯಗಳಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು, ತಮ್ಮ ಮನದಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ವಿಕಾಸ ಮಾಡಿಕೊಳ್ಳತ್ತಾ ಆತ್ಮವಿಶ್ವಾಸದಿಂದ ಆಟೋಟಗಳಲ್ಲಿ ಭಾಗವಹಿಸುವ ಮನೋಭಾವಗಳನ್ನು ಬೆಳೆಸಿಕೊಳ್ಳಬೇಕು, ತಮ್ಮ ಸ್ವಂತ ಸಾಧನೆಗಾಗಿ ಕ್ರೀಡೆಗಳಲ್ಲಿ ಭಾಗವಹಿಸದೆ ದೇಶದ ಗೌರವವನ್ನು ಹೆಚ್ಚಿಸುವ ಹಾಗೂ ತನ್ನ ವ್ಯಕ್ತಿತ್ವವನ್ನು ಪರಿಪೂರ್ಣವಾಗಿ ವಿಕಾಸ ಮಾಡಿಕೊಳ್ಳತ್ತ ಗಮನ ಹರಿಸಬೇಕು, ಆರೋಗ್ಯವಂತ ಸಮಾಜ ನಿರ್ಮಾಣದಲ್ಲೂ ಕ್ರೀಡೆಗಳು ಹೆಚ್ಚು ಸಹಕಾರಿಯಾಗುತ್ತವೆಂಬುದನ್ನು ಯುವಶಕ್ತಿ ಮನದಟ್ಟು ಮಾಡಿಕೊಡಬೇಕಾಗಿದೆ, ಆದುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳೂ ಸೋಲುಗೆಲುವನ್ನು ಲೆಕ್ಕಿಸದೆ ಆಟವನ್ನು ಆಟಕ್ಕಾಗಿಯೇ ಆಡುತ್ತಾ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ಸುಂದವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾಗಿದೆಎಂದು ತಿಳಿಸಿದರು.

ನಗರಸಭೆಯ ಅಧ್ಯಕ್ಷರಾದ ಯಮುನಾಧರಣೇಶ್ ಮಾತನಾಡಿ ಇಂದಿನ ವಿದ್ಯಾರ್ಥಿಗಳು ಓದಿಗಿಂತ ಕ್ರೀಡೆಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ತೊಡಗಿಸಿಕೊಂಡು ಕ್ರೀಡೆಗಳ ಮಹತ್ವವನ್ನು ಎತ್ತಿಹಿಡಿಯಬೇಕು. ಮಾನಸಿಕಗೊಂದಲಗಳಿಂದ ಹಾಗೂ ಉದಾಸೀನ ನಿರ್ಲಿಪ್ತತ ಚಿಂತನೆಗಳಿಂದ ಹೊರಬರಲು ಹೆಚ್ಚು ಸಹಾಯವಾಗುವಂತೆ ನೋಡಿಕೊಳ್ಳಬೇಕಾಗಿದೆ. ಬಹುಮಾನ, ಪ್ರಶಸ್ತಿಗಳಿಗಾಗಿಯೇ ಆಟಗಳನ್ನು ಬಳಸಿಕೊಳ್ಳದೆ ಆತ್ಮಸ್ಥೈರ್ಯದಿಂದ ತಮ್ಮ ವರ್ಚಸ್ಸನ್ನೆ,ಇಮ್ಮಡಿಗೊಳಿಸುವಂತ್ತೆ ಕ್ರೀಡಾಸ್ಪೂರ್ತಿಯಿಂದ ಆಟವಾಡಿ ಎಂದು ತಿಳಿಸಿದರು.
ನಗರಸಭಾ ಸದಸ್ಯ ಯೋಗೀಶ್ ರವರು ಮಾತನಾಡಿ ಕ್ರೀಡೆಗಳಲ್ಲಿ ಗಂಡು, ಹೆಣ್ಣು ಮಕ್ಕಳೆಂಬ ತಾರತಮ್ಯವಿಲ್ಲದೆ ಭಾಗವಹಿಸಬೇಕು, ಸಾಧನೆ ಮಾಡಬೇಕು ದೃಢವಾದ ಸಂಕಲ್ಪ ಮಾಡಿಕೊಂಡು ಉತ್ಸಾಹದಿಂದ ಆಟವಾಡುತ್ತಾ ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದರು.

ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಎಂ.ಡಿ ಶಿವಕುಮಾರ್ ಪ್ರತಿವರ್ಷ ಒಂದೊಂದು ಕಾಲೇಜಿನವರು ತಾಲ್ಲೂಕಿನ ಕ್ರೀಡಾಕೂಟದ ಜವಾಬ್ದಾರಿಯನ್ನು ವಹಿಸಿಕೊಂಡು ನಡೆಸಿಕೊಂಡು ಬರುವ ಪದ್ಧತಿಯಿದೆ ಅದರಂತೆ ಈ ಬಾರಿ ಟೈಮ್ಸ್ ಕಾಲೇಜಿನವರು ಉಸ್ತುವಾರಿ ವಹಿಸಿಕೊಂಡು ಸುಸೂತ್ರವಾಗಿ ನಡೆಸುತ್ತಿದ್ದಾರೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ
ಟೈಮ್ಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಗಂಗಾಧರ್.ಪ್ರಾಂಶುಪಾಲರಾದ ಪ್ರದೀಶ್.ವೀರಶೈವ ಲಿಂಗಾಯಿತ ನೌಕರರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಎಂ ಸ್ವಾಮಿ.ಎಸ್.ಎಸ್ ಗಂಗಾಧರ್ .ವೀರಣ್ಣಗೌಡ.ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ








