Spread the love

ತಿಪಟೂರು:ತಾಲ್ಲೋಕಿನಲ್ಲಿ ರಾಗಿ ಬೆಳೆಗೆ ಯೂರಿಯ ಹಾಕಲು ರೈತರು ಅಂಗಡಿಯಿಂದ ಅಂಗಡಿಗೆ ಪರದಡುತ್ತಿದ್ದಾರೆ,ರೈತರ ಪಾಲಿಗೆ ಯೂರಿಯಾ ಚಿನ್ನವಾಗಿ ಪರಿಣಮಿಸಿದೆ,ಎಷ್ಟು ಹಣವಾದರೂ ಪರವಾಗಿಲ್ಲ ಕೊಟ್ಟು ಗೊಬ್ಬರ ತಂದು ರಾಗಿ ಬೆಳೆ ಉಳಿಸಿಕೊಂಡರೆ ಸಾಕು ಎಂದು ರೈತ ಕಣ್ಣೀರು ಹಾಕುತ್ತಿದ್ದರೆ.ಕಾಳಸಂತೆ ಖದೀಮರು ಪರಿಸ್ಥಿತಿಯ ಲಾಭ ಪಡೆದು ಕೃತಕ ಅಭಾವ ಸೃಷ್ಠಿ ಮಾಡಿ ಅಕ್ರಮವಾಗಿ ಲೋಡ್ ಗಟ್ಟಲೇ ಯೂರಿಯ ಮಾರಾಟ ಮಾಡುತ್ತಿರುವ ಘಟನೆ
ನಗರದ ಕಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ರೈತರು ಯೂರಿಯಾ ಗೊಬ್ಬರಕ್ಕೆ ಮುಗಿಬಿದ್ದು ಅಂಗಲಾಚಿದ ಘಟನೆ ಮಂಗಳವಾರ ರಾತ್ರಿ 7=30 ಸಮಯದಲ್ಲಿ ನಡೆದಿದೆ.

ದೇವಸ್ಥಾನದ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕೆ.ಎ 01. ಎ.ಡಿ 1995ಲಾರಿಯಲ್ಲಿ ತುಂಬಿಕೊಡಿದ್ದ ಯೂರಿಯಾ ಚೀಲಗಳನ್ನು ರೈತರು ಪಡೆಯಲು ತಾ ಮುಂದು ನಾ ಮುಂದು ಎಂದು ಹಣ ಹಿಡಿದು ಲಾರಿ ಮಾಲೀಕನನ್ನು ಬೇಡಿದ ಪರಿಸ್ಥಿತಿ ಉಂಟಾಗಿತ್ತು.

ತುರ್ತು ಅವಶ್ಯಕತೆ ಇದೆ ಎಂದು ತಿಳಿದ ಲಾರಿ ಮಾಲೀಕನು ಹಾಗೂ ಅವರ ಸಹಚರರು ಒಂದು ಚೀಲಕ್ಕಾಗಿ ₹600 ರಿಂದ ₹700 ವರೆಗೆ ಹಣವನ್ನು ಪಡೆದುಕೊಂಡು ಮನಸೋ ಇಚ್ಚೆಯಂತೆ ಹಣ ಪಡೆದು ಯೂರಿಯಾ ಚೀಲಗಳನ್ನು ನೀಡಿದರು.

ಆದರೆ ಲಾರಿಯ ಬಳಿ ಯಾವ ರಸಗೊಬ್ಬರ ಅಂಗಡಿಯವರು ಯಾರು ಇಲ್ಲದೆಯಿದ್ದು ಕಂಡು ಬಂದಿದ್ದು, ಯೂರಿಯಾ ಚೀಲಗಳನ್ನು ನೀಡುತ್ತಿದ್ದನ್ನು ರಸ್ತೆಯಲ್ಲಿ ಸಂಚರಿಸುತ್ತಿದ್ದ ಪ್ರಯಾಣೀಕರು ನೋಡಿ ಅವರು ಸಹ ಗೊಬ್ಬರದ ಚೀಲವನ್ನು ಪಡೆಯಲು ಮುಂದಾಗಿ ಒಬ್ಬರಿಗೆ ಒಬ್ಬರು ಕೂಗಾಡಿ ಜಗಳವಾಡಿದ ಸಂದರ್ಭ ಉಂಟಾಗಿದೆ.

ಲಾರಿಯೊಳಗಿದ್ದವರು ನೇರವಾಗಿ ಹಣ ಪಡೆದು ಚೀಲಗಳನ್ನು ರೈತರಿಗೆ ಹಸ್ತಾಂತರಿಸುತ್ತಿದ್ದರೆ, ಹೊರಗಿದ್ದ ರೈತರು ಲಾರಿಯ ಮೇಲೆ ಎತ್ತಿ ಎಳೆದುಕೊಳ್ಳಲು ಪ್ರಯತ್ನ ಪಟ್ಟರು. ಅಲ್ಲಿಯೂ ಸಹ ಹೆಚ್ಚುವರಿ ಹಣ ಪಡೆದು ಗೊಬ್ಬರ ವಿತರಿಸಿದರು.

ಲಾರಿಗೆ ಮುತ್ತಿಗೆ ಹಾಕಿರುವುದನ್ನು ಗಮನಿಸಿ ಸ್ಥಳಕ್ಕೆ ಬಂದಾಗ ಯೂರಿಯಾ ಕೊಡುತ್ತಿದ್ದನ್ನು ತಿಳಿದು ರೂಪಾಯಿ 800ಗಳನ್ನು ಕೊಟ್ಟು ಎರಡು ಚೀಲವನ್ನು ಪಡೆದು ಹೋಗುತ್ತಿದ್ದೇನೆ. ಎಲ್ಲೂ ಯೂರಿಯಾ ಸಿಗದ ಕಾರಣ ನಾನು ಅನಿವಾರ್ಯ ಪರಿಸ್ಥಿತಿಯಲ್ಲಿ ಹೆಚ್ಚು ಹಣವನ್ನು ಕೊಡಬೇಕಾದ ಪರಿಸ್ಥಿತಿ ಒದಗಿ ಬಂದಿದೆ ಎಂದು ರಂಗಾಪುರದ ರೈತ ನಾಗರಾಜು ತಿಳಿಸಿದರು.
ಸರ್ಕಾರ ಹಾಗೂ ಕೃಷಿ ಇಲಾಖೆಯು ಒಂದು ಚೀಲ ಯೂರಿಯಾ ಬೆಲೆ 266 ರೂಪಾಯಿಗಳಿದೆ ಎಂದು ತಿಪಟೂರು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದರು.


ಮೊನ್ನೆಯಷ್ಟೇ ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಪಟೂರು ತಾಲ್ಲೂಕಿನಲ್ಲಿ ಪ್ರಗತಿ ಪರೀಶೀಲನಾ ವೇಳೆ ಕೃಷಿ ಅಧಿಕಾರಿಯಿಂದ ಮಾಹಿತಿ ಪಡೆದಾಗ ಯೂರಿಯಾ ರಸಗೊಬ್ಬರಕ್ಕೆ ಯಾವುದೇ ಕೊರತೆಯಿಲ್ಲ ಎಂದು ಮಾಹಿತಿ ನೀಡಿದ ಎರಡನೇ ದಿನದಲ್ಲಿ ಕಾಳಸಂತೆಯಲ್ಲಿ ಯೂರಿಯಾ ರಸಗೊಬ್ಬರ ಮಾರಾಟ ಮಾಡಲಾಗಿದೆ.
ಸರ್ಕಾರ ಸಹಕಾರಿ ಸಂಘಗಳು ಹಾಗೂ ಅಧೀಕೃತ ಲೈಸೆಂನ್ಸ್ ಪಡೆದ ಗೊಬ್ಬರ ಮಾರಾಟಗಾರರು ಮಾತ್ರ ಗೊಬ್ಬರ ಮಾರಾಟ ಮಾಡಬೇಕು,ಯೂರಿಯ ಪಡೆಯುವ ರೈತನ ಆಧಾರ್ ಕಾರ್ಡ್ ಪಡೆದು ಗೊಬ್ಬರ ವಿತರಣೆ ಮಾಡಬೇಕು ಎನ್ನುವ ನಿಯಮ ಮಾಡಲಾಗಿದೆ. ಆದರೆ ಕಾಳಸಂತೆಕೋರರಿಗೆ ಮಾತ್ರ ಈ ಯಾವುದೇ ನಿಯಮ ಅನ್ವಯವಾಗಲ್ವ ಅನೋದು,ಯಕ್ಷ ಪ್ರಶ್ನೆಯಾಗಿದೆ.ಈ ಕಾಳಸಂತೆ ಮಾರಾಟದಲ್ಲಿ ಅಧಿಕಾರಿಗಳ ಪಾತ್ರ ಇದೆಯಾ ಅನೋ ಅನುಮಾನ ಸರ್ವಜನಿಕರಲ್ಲಿ ಕಾಡುತ್ತಿದ್ದು,ಸರ್ಕಾರ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಅಕ್ರಮ ಮಾರಾಟಗಾರರ ವಿರುದ್ದ ಯಾವ ಕ್ರಮಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!