ತಿಪಟೂರು : ಕಲ್ಪತರು ನಾಡಿನ ಶಕ್ತಿಪೀಠ,ತಿಪಟೂರು ತಾಲ್ಲೋಕಿನ ಪ್ರಸಿದ್ದ ಯಾತ್ರಾಕ್ಷೇತ್ರ ದಸರೀಘಟ್ಟ ಶ್ರೀಚೌಡೇಶ್ವರಿ ದೇವಾಲಯದಲ್ಲಿ ನವರಾತ್ರಿ ವಿಜಯದಶಮಿ ಅಂಗವಾಗಿ,ಮುಳ್ಳುಗದ್ದುಗೆ ಉತ್ಸವ ಅದ್ದೂರಿಯಾಗಿ ನಡೆಯಿತು.ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ಮುಳ್ಳಗದ್ದುಗೆ ಉತ್ಸವ ನೆರವೇರಿಸಲಾಯಿತು.

ಅಂಬು ಆಯಿಸಿದ ನಂತರ ಶ್ರೀಚೌಡೇಶ್ವರಿ ಅಮ್ಮ ನವರಿಗೆ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು ಪೂಜೆಸಲ್ಲಿಸಿದ ನಂತರ ಮುಳ್ಳುಗಳಿಂದ ತಯಾರಿಸಿದ ಆಳೆತ್ತರದ ಮುಳ್ಳುಗದ್ದುಗೆಯನ್ನ ಶ್ರೀ ಚೌಡೇಶ್ವರಿ ದೇವಿ ಏರುತ್ತಿದ್ದಂತೆ ನೆರೆದಿದ ,ಸಾವಿರಾರು ಭಕ್ತರ ಜಯಘೋಷ ಮುಗಿಲು ಮುಟ್ಟಿತು.

ಕಾರ್ಯಕ್ರಮದಲ್ಲಿ ಭಕ್ತರನ್ನ ಉದೇಶಿಸಿ ಮಾತನಾಡಿದ ಡಾ//ಶ್ರೀಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು ಪ್ರತಿಯೊಬ್ಬರು ದೇವಿಯ ಬಳಿ ಭಕ್ತಿಯಿಂದ ಸ್ಮರಿಸಿ ಇಚ್ಚಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿ ಪಡೆದು ಧರ್ಮಮಾರ್ಗದಲ್ಲಿ ನಡೆದಾಗ ಮಾತ್ರ ಯಶಸ್ಸನ್ನು ಕಾಣಬಹುದು
ಸಂಸಾರದ ಸಾಗರದಲ್ಲಿ ಕಷ್ಟಗಳು ನಿವಾರಣೆಯಾಗಲು ದೈವೀಭಕ್ತಿ ಅಗತ್ಯ. ಸುಖ ಹಾಗೂ ದುಃಖಗಳು ಬಂದಾಗ ದೇವರ ಸ್ಮರಣೆ ಮಾಡಬೇಕು. ಜಗತ್ತಿನ ಸೃಷ್ಠಿಕರ್ತ ಪರಮಾತ್ಮನಾದ್ದರಿಂದ ಮನುಷ್ಯನಾದವನು ಧರ್ಮದಾನಗಳಿಂದ ಬದುಕಬೇಕು. ಜಗತ್ತಿಗೆ ಬಂದಾಗ ಪ್ರತಿಯೊಬ್ಬರಿಗೂ ಮುಳ್ಳಿನ ರೀತಿಯ ಕಷ್ಟಗಳು ಸಂಸಾರದಲ್ಲಿ ಬರುತ್ತವೇ ಅದನ್ನು ಸಹನೆಯಿಟ್ಟುಕೊಂಡು ನಿರ್ವಹಣೆ ಮಾಡಬೇಕು.
ಮನುಷ್ಯನ ಮನಸ್ಸಿನ ಇಚ್ಛೇಯೂ ಕ್ರಿಯಾತ್ಮಕವಾಗಿ ತೊಡಗಿಸಿದಾಗ ಅಂತಹ ಇಚ್ಛೆಯೂ ಜ್ಞಾನಕ್ಕೆ ಕಾರಣವಾಗಿ ಮುಕ್ತಿಗೆ ತಲುಪುವಂತಾಗಬೇಕು ಎಂದರು.

ಮೈಸೂರು ಶಾಖಾಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ ನವರಾತ್ರಿಯ ಸಂದರ್ಭದಲ್ಲಿ ಮನುಷ್ಯನಲ್ಲಿರುವ ಕೆಟ್ಟ ಗುಣಗಳನ್ನು ಹೋಗಲಾಡಿಸಿ ಉತ್ತಮ ಜೀವನವನ್ನು ನಡೆಸಲು ದೇವಿಯ ಆಶೀರ್ವಾದ ಅತ್ಯವಶ್ಯವಾಗಿದೆ. ಪ್ರತಿಯೊಬ್ಬರಲ್ಲಿಯೂ ಆಧ್ಯಾತ್ಮಿಕತೆಯ ಕಡೆಗೆ ಒಲವು ಹೆಚ್ಚಾಗಿದ್ದು, ಶ್ರದ್ಧಾ ಭಕ್ತಿಯಿಂದ ನಡೆದಾಗ ದೇವಿಯೂ ಎಂದಿಗೂ ಯಾರನ್ನು ಕೈಬಿಡುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಹಾಸನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿಗಳು
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ದಸರೀಘಟ್ಟ ಶಾಖಾಮಠದ ಚಂದ್ರಶೇಖರನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರದ ಮಂಗಳನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ, ಬಿ.ಜಿ.ನಗರದ ಸತ್ಕೀರ್ತಿನಾಥ ಸ್ವಾಮೀಜಿ, ಮಠದ ಟ್ರಸ್ಟಿಗಳಾದ ಡಾ. ಜಿತೇಂದ್ರ ಕುಮಾರ್, ರವಿ ಸಿದ್ಧಪ್ಪ, ರಾಮಕೃಷ್ಣಪ್ಪ, ಗುಡಿಗೌಡ ಕುಮಾರಸ್ವಾಮಿ ಸೇರಿದಂತೆ ಗ್ರಾಮಸ್ಥರು ಭಕ್ತಾಧಿಗಳು ಇದ್ದರು.
ವರದಿ:ಮಂಜುನಾಥ್ ಹಾಲ್ಕುರಿಕೆ











