: ನಗರದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಕಳ್ಳತನ ಮಾಡಲು ಪ್ರಯತ್ನಿಸಿದ ಓರ್ವ ಕಳ್ಳನನ್ನು ಹಿಡಿದು ಪೋಲೀಸರಿಗೆ ಒಪ್ಪಿಸಲಾಗಿದೆ.

ಮದ್ಯರಾತ್ರಿ 12 ಗಂಟೆಗೆ ರೈಲ್ವೆ ಹಳಿಗಳ ಕಡೆಯಿಂದನಗರದ ಶ್ರೀಮಲ್ಲಿಕಾರ್ಜುನಸ್ವಾಮಿ ದೇವಾಲಯ,ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯದ ಸಂಕೀರ್ಣ ದೇವಾಲಯದ ನೈಋತ್ಯ ಮೂಲೆಯಿಂದ ಒಳಗೆ ಬಂದ ಕಳ್ಳ ಸಿಸಿ ಟಿವಿ ಕ್ಯಾಮೆರಾ ನಾಶಪಡಿಸಿ ವ್ಯವಸ್ಥಾಪಕರ ಮನೆಯ ಚಿಲಕ ಹಾಕಿ ಕಳ್ಳತನಕ್ಕೆ ತೊಡಗಿದಾಗ ಎಚ್ಚರಗೊಂಡ ವ್ಯವಸ್ಥಾಪಕ ರಂಗನಾಥ ಎದುರಿನ ನ್ಯೂಮಾಡ್ರನ್ ಹೇರ್ ಡ್ರೆಸರ್ಸ & ಮಂಜುನಾಥ ಸೌಂಡ್ಸ್ ನ ಲಿಂಗರಾಜು ಗೆ ಫೋನ್ ಮಾಡಲಾಗಿ ಆತ ಬಂದು ಚಿಲಕ ತೆಗೆದು, ಇಬ್ಬರು ನೋಡಿದಾಕ್ಷಣ ಚಿಗರೆಯಂತೆ ಓಡಿದ ಕಳ್ಳ (50 ವರ್ಷ) ನೆಲ್ಲಿಮರ ಹತ್ತಿ ಹೊರಹೋಗುವ ಪ್ರಯತ್ನ ನಡೆಸಿದ್ದು ಆತನ ಕಾಲು ಹಿಡಿದೆಳೆದು ಬೀಳಿಸಿ ಪೋಲಿಸ್ ಕರೆಸಿ ಒಪ್ಪಿಸಲಾಗಿದೆ.. ಟ್ರಾಕ್ ಪ್ಯಾಂಟ್, ಟಿ ಷರ್ಟ್, ಮಂಕಿಟೋಪಿ, ಹ್ಯಾಂಡ್ ಗ್ಲೌಸ್ ಧರಿಸಿ, ಲುಂಗಿ ಹೊದ್ದಿದ್ದ ಕಳ್ಳನಿಂದ
ಎರಡು ತಾಳಿ, ಸ್ಕ್ರೂಡ್ರೈವರ್, ರಾಡು, ಚಾಕು, ಮೊಬೈಲ್ ವಶಕ್ಕೆ ಪಡೆಯಲಾಗಿದ್ದುಆರೋಪಿ ದೇವಾಲಯಗಳನ್ನೆ ಕಳವು ಮಾಡುವೆ ಕೆಲಸ ಮಾಡಿಕೊಂಡಿದ ಈತ ಈ ಹಿಂದೆಯೂ ಸಹ 2ಭಾರೀ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಕಳ್ಳತನ ಮಾಡಿದ ಎನ್ನಲಾಗಿದ್ದು . ತಿಪಟೂರು ನಗರಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವರದಿ:ಮಂಜುನಾಥ್ ಹಾಲ್ಕುರಿಕೆ







