ತಿಪಟೂರು:ನಗರದ ಗಾಂಧೀನಗರದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪನೆಗೊಂಡಿದ,ಗಣೇಶ ಮೂರ್ತಿಗಳನ್ನ ಸಮೂಹಿಕವಾಗಿ ಮೆರವಣಿಗೆ ನಡೆಸಿ ತಿಪಟೂರು ಅಮಾನೀಕೆರೆ ಕಲ್ಯಾಣಿಯಲ್ಲಿ ವಿಸರ್ಜನೆ ಮಾಡಲಾಯಿತು.
ತಿಪಟೂರು ನಗರದ ಗಾಂಧೀನಗರದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶ ಹಾಗೂ ಗೌರಿ ಮೂರ್ತಿಗಳಿಗೆ ಆಯಾಯ ಗಣೇಶ ಪೆಂಡಲ್ ಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಸಾದ ನೈವೇದ್ಯ ನೆರವೇರಿಸಿ ವಾದ್ಯ ಗೋಷ್ಠಿಗಳೊಂದಿಗೆ ಮೆರವಣಿಗೆ ಮೂಲಕ ಶ್ರೀಶನೇಶ್ವರಸ್ವಾಮಿ ದೇವಾಲಯ ಬಳಿ ಕರೆತರಲಾಯಿತು.ಶ್ರೀಶನೇಶ್ವರಸ್ವಾಮಿ ದೇವಾಲಯದ ಬಳಿ ಶಾಸಕ ಕೆ.ಷಡಕ್ಷರಿ ಸಾಮೂಹಿಕ ಗಣೇಶ ಉತ್ಸವಕ್ಕೆ ಪೂಜೆಸಲ್ಲಿಸಿ ಚಾಲನೆ ನೀಡಿದರು.

ಶ್ರೀಶನೇಶ್ವರಸ್ವಾಮಿ ದೇವಾಲಯದಿಂದ ಹೊರಟ ಮೆರವಣಿಗೆ ಮದೀನ ಮಸೀದಿ ರಸ್ತೆ ಮೂಲಕ ಸಾಗಿ ಎಪಿಎಂಸಿ ರಸ್ತೆ.ಕೋಡಿಸರ್ಕಲ್.ದೊಡ್ಡಪೇಟೆ ಮೂಲಕ ಕಲ್ಯಾಣಿ ಬಳಿ ಪೂಜೆಸಲ್ಲಿಸಿ ವಿಸರ್ಜನಾ ಮಹೋತ್ಸವ ನೆರವೇರಿಸಲಾಯಿತು.ಮೆರವಣಿಗೆಯಲ್ಲಿ ತಮಟೆ ವಾದ್ಯ,ನಾಸೀಕ್ ಡೋಲ್. ಚಿಟ್ಟೆಮೇಳ, ನಾದಸ್ವಾರ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

ಶಾಸಕ ಕೆ.ಷಡಕ್ಷರಿ.ಮಾಜಿ ಸಚಿವ ಬಿ.ಸಿ ನಾಗೇಶ್.ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್.ಖ್ಯಾತ ವೈದ್ಯರಾದ ಡಾ//ಶ್ರೀಧರ್ ಶ್ರೀ ಸತ್ಯಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀಕಂಠ.ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ .ನಗರಸಭಾ ಸದಸ್ಯ ಶಶಿಕಿರಣ್.ಕಾಂಗ್ರೇಸ್ ಯುವ ಮುಖಂಡ ನಿಖಿಲ್ ರಾಜಣ್ಣ .ಕಾಂಗ್ರೇಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸೈಫ್ಫುಲ್ಲ, ನಗರ ಕಾಂಗ್ರೇಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಷಫಿಉಲ್ಲಾ ಷರೀಫ್.ಮುಖಂಡರಾದ ಸಮಿ ಉಲ್ಲಾ.ಮದೀನ ಮಸೀದಿ ಮುತಾವಲ್ಲಿ ಮಹಮದ್ ದಸ್ತಗಿರ್.ಮುನ್ನಾವರ್ ಪಾಷ.ಸೇರಿದಂತೆ ಅನೇಕ ಮುಖಂಡರು ಮೆರವಣಿಗೆಯಲ್ಲಿ ಸಾಗಿದರು.ಮದೀನ ಮಸೀದಿ ಬಳಿ ಮುಸ್ಲಿಂ ಸಮುದಾಯದಿಂದ ಗಣೇಶ ಉತ್ಸವಕ್ಕೆ ಪೂಜೆಸಲ್ಲಿಸಲಾಯಿತು.

ಮೆರವಣಿಗೆ ಉದ್ದಕ್ಕೂ ಕೇಸರಿ ಧ್ವಜಹಿಡಿದ ಯುವಕರು ಕುಪ್ಪಳಿಸಿ ಸಂಭ್ರಮಿಸಿದರು, ಶ್ರೀಸತ್ಯಗಣಪತಿಕೀ ಜೈ ಘೋಷಣೆ ಮುಗಿಲು ಮುಟ್ಟಿತು.

ಶಾಂತಿ ಸೌಹಾರ್ದತೆಯಿಂದ ನಡೆದ ಸಾಮೂಹಿಕ ಗಣೇಶ ವಿಸರ್ಜನಾ ಮಹೋತ್ಸವದಲ್ಲಿ ತುಮಕೂರು ಜಿಲ್ಲಾಪೊಲೀಸ್ ವರೀಷ್ಠಾಧಿಕಾರಿ ಅಶೋಕ್ .ಕೆ.ರವರ ನೇತೃತ್ವದಲ್ಲಿ ಅಡಿಷನಲ್ ಎಸ್ಪಿ ಗೋಪಾಲ್ ಹಾಗೂ ತಿಪಟೂರು ಉಪವಿಭಾಗ ಪೊಲೀಸ್ ಅಡಿಷನಲ್ ಎಸ್ಪಿ ಯಶ್ ಕುಮಾರ್ ಶರ್ಮ ನೇತೃತ್ವದಲ್ಲಿ,2ಡಿವೈಎಸ್.10ಸರ್ಕಲದ ಇನ್ಪೆಕ್ಟರ್.21ಸಬ್ ಇನ್ಪೆಕ್ಟರ್ 53ಎಎಸ್ಐ. 4 ಡಿಆರ್ ತುಕ್ಕಡಿ.1ಕೆ.ಎಸ್ ಆರ್.ಪಿ.ತುಕ್ಕಡಿ ಸೇರಿ600ಜನ ಪೊಲೀಸ್ ಸಿಬ್ಬಂದಿ ಹಾಗೂ 5ಡ್ರೋಣ್ ಕ್ಯಾಮರ ಕಣ್ಗಾವಲಿನಲ್ಲಿ ಬಿಗಿ ಬಂದುಬಸ್ತ್ ನಡುವೆ ಶಾಂತಿಯುತವಾಗಿ ಗಣೇಶೋತ್ಸವ ನಡೆಸಲಾಯಿತು.
ಅಮಾನೀಕೆರೆ ಕಲ್ಯಾಣಿ ಬಳಿ ಸಮೂಹಿಕವಾಗಿ ಪೂಜೆಸಲ್ಲಿಸಿ,ಕಲ್ಯಾಣಿಯಲ್ಲಿ ವಿಸರ್ಜನೆ ನೆರವೇರಿಸಲಾಯಿತು.
ವರದಿ:ಮಂಜುನಾಥ್ ಹಾಲ್ಕುರಿಕೆ






