Spread the love

ತಿಪಟೂರು : ಗಾಂಧಿನಗರದ ದಿವಂಗತ ಮಹಮೂದ್ ಅಣ್ಣನವರ ಮನೆಯಲ್ಲಿ ಸಂವಿಧಾನ ದಿನವನ್ನು ಆಚರಿಸಲಾಯಿತು. ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ಭಾವಚಿತ್ರ ಹಾಗೂ ಸಂವಿಧಾನದ ಪ್ರತಿಗೆ ತಿಪಟೂರು ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ. ಶಶಿಧರ್ ಪುಷ್ಪಾರ್ಚನೆ ನೆರವೇರಿಸಿದರು.

ನಂತರ ಮಾತನಾಡಿ ಇಂದು ಅತಿ ಮಹತ್ವದ ದಿನವಾಗಿದ್ದು ನಮ್ಮ ಸಂವಿಧಾನವು ಘೋಷಿತವಾದಂತ ದಿನ ಜಾತ್ಯತೀತ ಸಮಾಜವಾದ ಒಳಗೊಂಡ ನಮ್ಮ ಸಂವಿಧಾನ ದೇಶದ ಐಕ್ಯತೆಗೆ ಸಮಗ್ರತೆಗೆ ಬುನಾದಿಯಾಗಿದೆ. ಪ್ರತಿಯೊಬ್ಬ ನಾಗರಿಕರು ಸಂವಿಧಾನದ ಆಶಯಗಳನ್ನು ತಿಳಿದುಕೊಳ್ಳಬೇಕಿದೆ ಇದು ಪ್ರತಿಯೊಬ್ಬರ ಕರ್ತವ್ಯ ಕೂಡ ಎಂದರು. ಈ ಸಂದರ್ಭದಲ್ಲಿ ಬೆಲೆ ಕಾವಲು ಸಮಿತಿಯ ಶ್ರೀಕಾಂತ್ ಕೆಳಹಟ್ಟಿ ಮಾತನಾಡಿ ಎಲ್ಲಾ ಧರ್ಮದ ಜನರು ತಮ್ಮ ತಮ್ಮ ಧರ್ಮ ಗ್ರಂಥದ ಜೊತೆಗೆ ಸಂವಿಧಾನವೆಂಬ ರಾಷ್ಟ್ರ ಗ್ರಂಥವನ್ನು ಓದಿ ಅರ್ಥೈಸಿಕೊಳ್ಳುವ ತುರ್ತು ಬಂದಿದೆ ಎಂದರು. ತಾಲ್ಲೂಕು ಸಂವಿಧಾನ ಸಂರಕ್ಷಣಾ ಪಡೆಯ ಅಧ್ಯಕ್ಷ ಲೋಕೇಶ್, ಸೌಹಾರ್ದ ತಿಪಟೂರು ಅಲ್ಲಾಭಕಾಶ್, ಕಾರ್ಯಕ್ರಮದ ಆಯೋಜಕರು ಮುಜ್ಜು ಹಾಜರಿದ್ದರು‌. ಮಾಜರಿ ಮಸೀದಿಯ ಮುಖ್ಯಸ್ಥರಾದ ಇಸ್ಮಾಯಿಲ್ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ ಜನಸ್ಪಂದನ ಟ್ರಸ್ಟ್ ನ ಸಂವಿಧಾನದ ಆಶಯಗಳನ್ನು ಮನೆಮನೆಗೆ ತಲುಪಿಸುವ ಈ ಕಾರ್ಯ ಪ್ರತಿಯೊಬ್ಬರ ಮನಮನಕ್ಕೆ ತಲುಪುವಂತಾಗಬೇಕು ಎಂದರು. ಈ ಕಾರ್ಯಕ್ರಮದಲ್ಲಿ ತಿಪಟೂರು ನಗರದ ಯುವ ಮುಖಂಡರುಗಳಾದ ತಾಸಿನ್ ಶರೀಫ್, ಸೈಫ್ ಉಲ್ಲಾ, ನವಾಬ್ ಜಾನ್ ಮಹಮದ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!