Spread the love

ತಿಪಟೂರು:ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾಧರಣೇ ರಾಜೀನಾಮೆಯಿಂದ ತೆರವಾಗಿದ ಅಧ್ಯಕ್ಷಸ್ಥಾನಕ್ಕೆ ಆಕ್ಟೋಬರ್ 29ರಂದು ನಡೆದ ಚುನಾವಣೆ ವೇಳೆ ಚುನಾವಣಾಧಿಕಾರಿಗಳಾದ ತಿಪಟೂರು ಉಪವಿಭಾಗಾಧಿಕಾರಿಗಳು ಚುನಾವಣಾ ಆಯೋಗದ ನಿಯಮಗಳನ್ನ ಗಾಳಿಗೆ ತೂರಿದ್ದು.ಹೈ ಕೋರ್ಟ್ ಆದೇಶ ಉಲ್ಲಂಘನೆ ಮಾಡಿದ್ದಾರೆ ಎಂದು ತಿಪಟೂರು ಬಿಜೆಪಿ ಆರೋಪಿಸಿದೆ .
ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಪ್ರಧಾನ ಕಾರ್ಯದರ್ಶಿ ಗಂಗರಾಜು,ನಗರಸಭೆ ಚುನಾವಣೆ ವೇಳೆ ಚುನಾವಣಾ ಆಯೋಗದ ನಿಯಮಗಳನ್ನ ಗಾಳಿಗೆ ತೋರಿದು,ಶಾಸಕರ ಕೈ ಗೊಂಬೆಯಂತೆ ವರ್ತಿಸಿದ್ದಾರೆ.ಕಳೆದ ಭಾರಿ ಅಧ್ಯಕ್ಷರ ಚುನಾವಣೆ ವೇಳೆ ಅಡ್ಡ ಮತದಾನ ಮಾಡಿ ಅನರ್ಹಗೊಂಡಿದ್ದ, ಸದಸ್ಯರಿಗೆ ಘನ ನ್ಯಾಯಾಲಯ ಮತದಾನಕ್ಕೆ ಮಾತ್ರ ಅವಕಾಶ ನೀಡಿದೆ ಆದರೆ ಚುನಾವಣಾಧಿಕಾರಿಗಳು ನಿಯಮ ಬಾಹಿರವಾಗಿ ಸ್ಪರ್ಧೆಗೆ ಅವಕಾಶ ನೀಡಿದ್ದಾರೆ.ನಗರಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬೆಲ್ ಪಡೆಯದೆ ಇರುವ ಸದಸ್ಯರು ಚುನಾವಣೆ ಪೊಲೀಸರ ಎದುರಿಗೆ ಓಡಾಡಿದರು ಬಂಧನ ಮಾಡದೆ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದೆ.ನ್ಯಾಯಾಲಯದಿಂದ ಅನರ್ಹ ಸದಸ್ಯರಿಗೆ ಮತದಾನಕ್ಕೆ ನ್ಯಾಯಾಲಯ ಅನುಮತಿ ನೀಡಿದ್ದು ಪಕ್ಷದ ಅಧೀಕೃತ ಅಭ್ಯಾರ್ಥಿ ಡಾ//ಓಹಿಲಾ ಗಂಗಾಧರ್ ರವರಿಗೆ ಮತಹಾಕುವಂತ್ತೆ.ಪಕ್ಷ ವಿಪ್ ಜಾರಿಮಾಡಿದೆ, ಆದರೆ ನಿಯಮಬಾಹಿರವಾಗಿ ಅಬ್ಯಾರ್ಥಿಯಾಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಚುನಾವಣಾಧಿಕಾರಿಗಳು ಹಾಗೂ ನಗರಸಭಾ ಪೌರಾಯುಕ್ತರು ಕಾನೂನು ಉಲ್ಲಂಘನೆ ಮಾಡಿ ಆಡಳಿತ ಪಕ್ಷದೊಂದಿಗೆ ಕೈ ಜೋಡಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು.ಪಕ್ಷದ ಶಿಸ್ತು ಉಲ್ಲಂಘಿಸಿ ವಿಪ್ ಉಲ್ಲಂಘನೆ ಮಾಡಿರುವ ಸದಸ್ಯರ ವಿರುದ್ದ ಹಾಗೂ ನಿಯಮ ಉಲ್ಲಂಘನೆ ಮಾಡಿರುವ ಚುನಾವಣಾಧಿಕಾರಿಗಳ ವಿರುದ್ದ ಕಾನೂನು ಹೋರಾಟ ಮಾಡುವುದ್ದಾಗಿ ತಿಳಿಸಿದರು.


ಬಿಜೆಪಿ ಸದಸ್ಯ ಹಾಗೂ ನಗರಸಭಾ ಅಧ್ಯಕ್ಷ ಸ್ಥಾನದ ಅಭ್ಯಾರ್ಥಿ ಡಾ//ಓಹೀಲಾ ಗಂಗಾಧರ್ ಮಾತನಾಡಿ ನಂತರ ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ವೇಳೆ ಚುನಾವಣಾಧಿಕಾರಿಗಳು ಚುನಾವಣಾ ಆಯೋಗದ ನಿಯಮ ಉಲ್ಲಂಘನೆ ಮಾಡಿದ್ದು,ಬಿಜೆಪಿ ಪಕ್ಷದಿಂದ ಆಕ್ಷೇಪ ಸಲ್ಲಿಸಿದ್ದೇವೆ ಆದರೂ ಸಹ ಚುನಾವಣ ಆಧಿಕಾರಿಗಳು ಉಮೇದುವಾರಿಕೆ ಸಲ್ಲಿಸಲು ಅವಕಾಶಕೊಟ್ಟು.ಚುನಾವಣೆ ನಡೆಸಿದ್ದಾರೆ.ಅನರ್ಹಗೊಂಡಿದ್ದ, ನಾಲ್ಕುಜನ ಸದಸ್ಯರಿಗೆ ಗುಪ್ತಮತದಾನಕ್ಕೆ ಹೈ ಕೋರ್ಟ್ ಸೂಚನೆ ನೀಡಿದರು,ತೆರೆಮರೆಯಲ್ಲಿ ಮತದಾನ ಮಾಡಿಸದೆ, ತೆರೆದ ಸ್ಥಳದಲ್ಲಿ ಎಲ್ಲಾ ಸದಸ್ಯರು ಹಾಗೂ ಶಾಸಕರ ಸಮ್ಮುಖದಲ್ಲಿಗೆ ಮತದಾನ ಮಾಡಿಸಲಾಗಿದೆ.ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವುದ್ದಾಗಿ ತಿಳಿಸಿದರು
ಪತ್ರಿಕಾ ಘೋಷ್ಠಿಯಲ್ಲಿ ಉಪಸ್ಥಿತರಿದ ಮುಖಂಡರು ತಾಲ್ಲೋಕಿನಲ್ಲಿ ಅಭಿವೃದ್ದಿ ಶೂನ್ಯವಾಗಿದೆ,ಯಾವುದೇ ಅಭಿವೃದ್ದಿ ಕೆಲಸಗಳು ನಡೆಯುತ್ತಿಲ್ಲ,ತಾಲ್ಲೋಕು ಆಡಳಿತ ಆಡಳಿತ ಪಕ್ಷದ ಕೈ ಗೊಂಬೆಯಾಗಿವರ್ತಿಸುತ್ತಿದೆ.ವಿಪರ್ಯಾಸವೆಂದರೆ ಆಡಳಿತ ರೂಢ ಶಾಸಕ ಕೆ.ಷಡಕ್ಷರಿಯಾದಿಯಾಗಿ ಕಾಂಗ್ರೇಸ್ ನಗರಸಭಾ ಸದಸ್ಯರು ಬಿಜೆಪಿ ಸದಸ್ಯರಿಗೆ ಮತಚಲಾವಣೆಯಾಗಿರುವುದು ರಾಜಕೀಯ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು .


ಪತ್ರಿಕಾ ಘೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಹಳೇಪಾಳ್ಯ ಜಗದೀಶ್.ನಿಕಟಪೂರ್ವ ಅಧ್ಯಕ್ಷ ಸುರೇಶ್.ಜಿಲ್ಲಾ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಗಿರೀಶ್ .ಮುಖಂಡರಾದ ವಿಶ್ವದೀಪ್.ಮಂಜುನಾಥ್ ಹಳೇಪಾಳ್ಯ.ತರಕಾರಿ ಗಂಗಾಧರ್ ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!