ತಿಪಟೂರು:ನಗರದ ಕೆ.ಆರ್ ಬಡಾವಣೆ ಮೋಹನ್ ಕುಮಾರ್ ಎಂಬುವವರ ಮನೆಯಲ್ಲಿ ಪೇಂಟ್ ಕೆಲಸಕ್ಕೆ ಬಂದಿದ್ದ ಕಾರ್ಮಿಕ ಮನೆ ಚಾವಣಿಗೆ ಪೇಂಟ್ ಮಾಡುವಾಗ ಪಕ್ಕದಲ್ಲೇ ಹಾದುಹೋಗಿರುವ ವಿದ್ಯುತ್ ತಂತಿ ಸ್ಪರ್ಶಿಸಿ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಿಪಟೂರಿನಲ್ಲಿ ನಡೆದಿದೆ.

ಚಿಕ್ಕನಾಯ್ಕನಹಳ್ಳಿ ತಾಲ್ಲೋಕು ಹಂದನಕೆರೆ ಹೋಬಳಿ ಭೀಮಾನಾಯ್ಕನ ತಾಂಡ್ಯ ನಿವಾಸಿ ಪುಟ್ಟನಾಯ್ಕ ಪೇಂಟ್ ಕೆಲಸಕ್ಕಾಗಿ ಕೆ.ಆರ್ ಬಡಾವಣೆ,ಮೋಹನ್ ಕುಮಾರ್ ರವರ ಮನೆಯಲ್ಲಿ ಪೇಂಟ್ ಕೆಲಸ ಮಾಡುವಾಗ,ಪೇಂಟ್ ಮಾಡಲು ಕಬ್ಬಿಣದ ರಾಡ್ ಗೆ ಪೇಂಟಿಂಗ್ ರೋಲಾರ್ ಕಟ್ಟಿಕೊಂಡು ಕೆಲಸ ಮಾಡುವ ವೇಳೆ, ಪಕ್ಕದಲ್ಲೇ ಹಾದುಹೋಗಿರುವ ಬಂಡಿಹಳ್ಳಿ ಪವರ್ ಸ್ಟೇಷನ್ 110ಕೆ.ವಿ ವಿದ್ಯುತ್ ಲೈನ್ ಗೆ ತಾಗಿದ್ದು, ವಿದ್ಯುತ್ ಶಾಕ್ ಒಳಗಾಗಿದ್ದು,ಗಾಯಗೊಂಡು ತೀವ್ರ ಅಸ್ವಸ್ಥಗೊಂಡಿದ್ದ,ಗಾಯಾಳು ಪುಟ್ಟನಾಯ್ಕನನ್ನ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಆಸ್ಪತ್ರೆಗಾಗಿ ಬೆಂಗಳೂರು ನಿಮಾನ್ಸ್ ಆಸ್ಪತ್ರೆ ದಾಖಲಿಸಲಾಗಿದ್ದು,ತಿಪಟೂರು ಬೆಸ್ಕಾಂ ಇಲಾಖೆಗೆ ಮಾಹಿತಿ ನೀಡದೆ, ಅನಾಧೀಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಅವಗಡಕ್ಕೆ ಕಾರಣವಾಗಿದೆ,ಎಂದು ತಿಪಟೂರು ಬೆಸ್ಕಾಂ ಇಲಾಖೆ ದೂರಿನ ಮೇರೆಗೆ ನಗರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ




