Spread the love

ದಿನಾಂಕ : 15.08.2025 ರಂದು ರಾತ್ರಿ ತಿಪಟೂರು ಟೌನಿನ ತಿಪಟೂರು ಹುಳಿಯಾರುಮಾರ್ಗದ ರಾಜ್ಯ,ಹೆದ್ದಾರಿ ಪಕ್ಕದಲ್ಲಿರುವ ಏಕಲವ್ಯ ಪ್ರಾವಿಜನ್ ಸ್ಟೋರ್ & ಎಸ್.ಎನ್ ಕಾರ್ ಸೆಕೆಂಡ್ ಹ್ಯಾಂಡ್ ಷೋರೂಂ ಅನ್ನು ನಿರ್ಮಾಣ ಮಾಡಿರುವ , ಕಬ್ಬಿಣದ ನೀಲಿ ಶೀಟ್‌ಗಳನ್ನು ತೆಗೆದು ಅಂಗಡಿಯಲ್ಲಿದ್ದ 2,77,000 ರೂ ನಗದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಅಂಗಡಿಯ ಮಾಲೀಕರಾದ ಗಿರೀಶ್ ತಂದೆ ನಾಗರಾಜು , ಕೆ.ಆರ್.ಬಡಾವಣೆ , ತಿಪಟೂರು ಟೌನ್ ರವರು ನೀಡಿದ ದೂರಿನ ಮೇರೆಗೆ ತಿಪಟೂರು ನಗರ ಪೊಲೀಸ್ ಠಾಣಾ ಮೊಕದ್ದಮೆ ಸಂಖ್ಯೆ 160/2025 ಕಲಂ 331 ( 4 ) , 305 BNS ರೀತ್ಯ ಪ್ರಕರಣ ದಾಖಲಿಸಿರುತ್ತೆ .
ಮೇಲ್ಕಂಡ ಪ್ರಕರಣವನ್ನು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಅಶೋಕ್ ಕೆ.ವಿ. ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಸಿ.ಗೋಪಾಲ್ ಮತ್ತು ಪುರುಷೋತ್ತಮ ಎಂ.ಎಲ್ . ರವರ ನೇತೃತ್ವದಲ್ಲಿ ತಿಪಟೂರು ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರವರಾದ ಯಶ್ ಕುಮಾರ್ ಶರ್ಮ ಐ.ಪಿ.ಎಸ್ ರವರ ಮಾರ್ಗಸೂಚನೆ ಮೇರೆಗೆ ತಿಪಟೂರು ನಗರ ಪೊಲೀಸ್ ಠಾಣೆಯ ವೆಂಕಟೇಶ್ ಸಿ , ಪೊಲೀಸ್
ಇನ್ಸ್‌ಪೆಕ್ಟರ್ , ಚಿಕ್ಕಲಕ್ಕೇಗೌಡ ASI ಮತ್ತು ಸಿಬ್ಬಂದಿಯವರಾದ ಮೋಹನ್ ಕುಮಾರ್‌ ಜಿ.ಎಂ , ಲೋಕೇಶ್ ಜಿ.ಆರ್ , ಕಿರಣ್ ಕುಮಾರ್ ಎನ್.ಬಿ , ಸಾಗರ್ ಅಂಬಿಗೇರ್ , ಮಂಜುನಾಥ ಎಂ ಕುಪ್ಪಾಡ , ಚಾಲಕರಾದ ಮನೋಜ್ ರವರು ಕಾರ್ಯಾಚರಣೆ ಮಾಡಿ ಆರೋಪಿಯಾದ ಮಹೇಶ್ ಪಿ.ಎಸ್ @ ಪಿಲ್ಲಿ ಬಿನ್ ಲೇಟ್ ರಾಮಪ್ಪ , 30 ವರ್ಷ , ಚಾಲಕ & ಗಾರೆ ಕೆಲಸ , ಪುಲವಾರಿಪಲ್ಲಿ , ಪರಗೋಡು ಹೋಬಳಿ , ಬಾಗೇಪಲ್ಲಿ ತಾಲ್ಲೋಕ್ , ಚಿಕ್ಕಬಳ್ಳಾಪುರ ಜಿಲ್ಲೆ ರವರನ್ನು ಬಂಧಿಸಿರುತ್ತದೆ .
ಮೇಲ್ಕಂಡ ಆರೋಪಿಯಿಂದ ಮೇಲ್ಕಂಡ ಪ್ರಕರಣದಲ್ಲಿ ಕಂಡ 80,000 ರೂ ನಗದು ಮತ್ತು ಬೆಂಗಳೂರು ನಗರ ಸೋಲದೇವರಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ 4 ಲಕ್ಷದ 40 ಸಾವಿರ ಬೆಲೆಬಾಳುವ ಗೂಡ್ಸ್ ವಾಹನ , ಕಳ್ಳತನಕ್ಕೆ ಬಳಸಿದ್ದ ಟೂಲ್ಸ್‌ಗಳನ್ನು ವಶಕ್ಕೆ ಪಡೆದುಕೊಂಡಿರುತ್ತದೆ ಹಾಗೂ ವಿಚಾರಣೆ ವೇಳೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ 52 ಸಾವಿರ ರೂ ಬೆಲೆಬಾಳುವ ಮಾರುತಿ ಒಮಿನಿ ಕಾರು ಮತ್ತು ಕೆ ಬಿ ಕ್ರಾಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾಗಿರುವ 1 ಲಕ್ಷ 20 ಸಾವಿರದ ಹಣ & ಸಿಗರೇಟ್ ಗೂಡ್ಸ್ ಬಗ್ಗೆ ಮಾಹಿತಿ ನೀಡಿರುತ್ತಾರೆ . ಆರೋಪಿಯನ್ನು ಘನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು , ಆರೋಪಿಯು ಹಾಲಿ ತುಮಕೂರು ಜಿಲ್ಲಾ ಉಪ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುತ್ತಾರೆ .
ಸದರಿ ತನಿಖಾ ತಂಡವನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಕೆ.ವಿ.ಅಶೋಕ್ , ಐ.ಪಿ.ಎಸ್ ರವರು ಪ್ರಶಂಸಿದ್ದಾರೆ.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!