ತಿಪಟೂರು: ನಗರದ ನಗರಸಭಾ ವೃತದಲ್ಲಿ ಬಿಜೆಪಿ ವತಿಯಿಂದ ಮಂಗಳೂರಿನಲ್ಲಿ ಹಿಂದೂ ಸಂಘಟನೆಯ ಮುಖಂಡ ಸುಹಾಸ್ ಶೆಟ್ಟಿ ಹತ್ಯೆಯನ್ನ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ನಗರಸಭಾ ವೃತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿದ ಟೈರ್ ಗೆ ಬೆಂಕಿ ಹಚ್ಚಿ ಮತಾಂಧ ಶಕ್ತಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಂತ್ತಾಗಿದೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಮತಾಂದಶಕ್ತಿಗಳು ಹಾಗೂ ಹಿಂದೂ ವಿರೋಧಿ ಶಕ್ತಿಗಳು ಉಪಟಳ ಹೆಚ್ಚಾಗಿದೆ, ಶಿವಮೊಗ್ಗ ಮಂಗಳೂರು ವಿಜಯಪುರ ಸೇರಿದಂತೆ ಹಲವು ಕಡೆಗಳಲ್ಲಿ ಹಿಂದೂ ಮುಖಂಡರು ಹಾಗೂ ಕಾರ್ಯಕರ್ತರನ್ನ ಹತ್ಯೆ ಮಾಡಲಾಗುತ್ತಿದೆ, ಹಿಂದುಗಳು ಒಗ್ಗಟ್ಟಾಗಿ ಮತಾಂದ ಶಕ್ತಿಗಳನ್ನ ಖಂಡಿಸದಿದ್ದರೆ ಮಂಗಳೂರಿನಲ್ಲಿ ನಡೆದಿರುವ ಕೃತ್ಯ, ನಾಳೆ ತಿಪಟೂರಿನಲ್ಲೂ ನಡೆಯಬಹುದು, ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿತರಾಗಿ ಮತಾಂಧ ಶಕ್ತಿಗಳನ್ನ ಹೆಮ್ಮೆಟ್ಟಿಸಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂ ವಿರೋಧಿಗಳ ಉಪಟಳ ಹೆಚ್ಚಾಗುತ್ತಿದೆ,ಹಿಂದೂಗಳ ಮೇಲೆ ದೌರ್ಜನ್ಯ ಮಾಡುವವರಿಗೆ ಸರ್ಕಾರ ರಕ್ಷಣೆ ನೀಡುತ್ತಿದೆ,ಮತಾಂದರ ವಿರುದ್ದ ದೂರು ನೀಡಲು ಹೋದರೆ ಪೋಲಿಸ್ ಇಲಾಖೆ ನಿರ್ಲಕ್ಷ್ಯ ಮಾಡುತ್ತಿದೆ, ಅನ್ಯಕೋಮಿನವರು ದೂರು ನೀಡಿದರೆ ರಾಜಕೀಯ ಒತ್ತಡಕ್ಕೊಳಗಾದ ಪೊಲೀಸರೇ ಮುಂದೆ ನಿಂತು ಹಿಂದುಗಳ ವಿರುದ್ಧ ಕೆಲಸಮಾಡುತ್ತಿದ್ದಾರೆ, ಹಿಂದೂಗಳೆ ಎಚ್ಚರಗೊಳ್ಳಿ,ಸಂಘಟಿತಾರಾಗಿ ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕು ಎಂದು ತಿಳಿಸಿದರು

ಪ್ರತಿಭಟನೆಯಲ್ಲಿ ಮುಖಂಡರಾದ ಗಂಗರಾಜು, ಪ್ರಸನ್ನ ಕುಮಾರ್, ಗುಲಾಬಿ ಸುರೇಶ್, ಹಳೇಪಾಳ್ಯ ಜಗದೀಶ್,ಮಹಾಲಕ್ಷ್ಮಿ,ಪದ್ಮತಿಮ್ಮೆಗೌಡ,ಬಿಸ್ಲೇಹಳ್ಳಿ ಜಗದೀಶ್ ಹಾವೇನಹಳ್ಳಿ ಮಂಜುನಾಥ್,ಹರೀಸಮುದ್ರ ಗಂಗಾಧರ್, ಡಿ.ಆರ್ ಬಸವರಾಜು.ಹರ್ಷವರ್ಧನ್.ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ




