Spread the love

ತಿಪಟೂರು:ಮಂಡ್ಯಜಿಲ್ಲೆ ಮದೂರಿನಲ್ಲಿ ಗಣೇಶೋತ್ಸವದ ವೇಳೆ ನಡೆದಿರುವ ಕೋಮುಗಲಭೆಯಲ್ಲಿ ಭಾಗಿಯಾದವರ ಮೇಲೆ ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳುತ್ತೇವೆ.ಸಮಾಜದ ಸಾಮರಸ್ಯ ಕದಡುವವರ ಮೇಲೆ ಈಗಾಗಲೇ ಕ್ರಮವಹಿಸಲಾಗಿದೆ.ಯಾವುದೇ ವ್ಯಕ್ತಿ ಹಾಗೂ ಸಮಾಜ, ಪಕ್ಷ, ಭಾಗಿಯಾಗಿದರೂ.ಸುಮ್ಮನೆ ಬಿಡುವುದಿಲ್ಲ ಎಂದು ಕೃಷಿ ಸಚಿವ ಚಲುವನಾರಾಯಣಸ್ವಾಮಿ ತಿಳಿಸಿದರು


ತಿಪಟೂರು ಶಾಸಕ ಕೆ.ಷಡಕ್ಷರಿಯವರ ನಿವಾಸಕ್ಕೆ ಭೇಟಿ ನೀಡಿದ ಕೃಷಿ ಸಚಿವರು ಶಾಸಕ ಕೆ.ಷಡಕ್ಷರಿಯವರ ಉಭಯ ಕುಷಲೋಪರಿ ವಿಚಾರಿಸಿ ಮಾಧ್ಯಮಗೊಂದಿಗೆ ಮಾತನಾಡಿದ ಅವರು ಕಾಂಗ್ರೇಸ್ ಪಕ್ಷ ಯಾವತ್ತು ಸಮಾಜ ಒಡೆಯುವ ಕೆಲಸ ಮಾಡಿಲ್ಲ, ಮಾಡುವುದುಇಲ್ಲ.ಮದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಕಲ್ಲುತೂರಾಟ ಘಟನೆಯಲ್ಲಿ ಭಾಗಿಯಾದವರ ಮೇಲೆ ಕಠಿಣ ಕ್ರಮವಹಿಸಲಾಗುವುದು,ಯಾವುದೇ ವ್ಯಕ್ತಿಯನ್ನ ರಕ್ಷಣೆ ಮಾಡುವುದಿಲ್ಲ. ಬಿಜೆಪಿ ರಾಜಕೀಯ ಉದೇಶಕ್ಕಾಗಿ ಪ್ರತಿಭಟನೆ ಮಾಡುತ್ತಿದೆ. ಸಮಾಜವನ್ನ ಕೂಡಿಸುವುದು ಕಾಂಗ್ರೇಸ್ ಕೆಲಸ, ಸಮಾಜವನ್ನ ಒಡೆಯುವುದು ಬಿಜೆಪಿ ಕೆಲಸ ಎಂದು ತಿಳಿಸಿದರು


ಶಾಸಕ ಕೆ.ಷಡಕ್ಷರಿ.ಕಾಂಗ್ರೇಸ್ ಯುವ ಕಾಂಗ್ರೇಸ್ ಅಧ್ಯಕ್ಷ ನಿಖಿಲ್ ರಾಜಣ್ಣ.ಖ್ಯಾತ ವೈದ್ಯರಾದ ಡಾ//ಶ್ರೀಧರ್.ಮಾಜಿ ತಾ.ಪಂ ಸದಸ್ಯ ನ್ಯಾಕೇನಹಳ್ಳಿ ಸುರೇಶ್.ಪ್ರಸಾದ್.ಶಿವರನಾಗರಾಜು ಮುಂತ್ತಾದವರು ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!