:ಜೂನ್ 07ಮತ್ತು 08ರಂದು ತಿಪಟೂರು ನಗರದ ಕಲ್ಪತರು ಪದವಿಪೂರ್ವ ಕಾಲೇಜು ಆಡಿಟೋರಿಯಂ ನಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೃಷಿ ಸಾಹಿತ್ಯ ಸಮ್ಮೇಳನ ಹಾಗೂ ಕೃಷಿ ವಿಚಾರ ಸಂಕೀರಣ,ಆಯೋಜನೆ ಮಾಡಲಾಗಿದೆ.

ಸಮ್ಮೇಳನದ ಪೂರ್ವಭಾವಿ ತಯಾರಿಗಳ ಕುರಿತು ತಿಪಟೂರು ನಗರದ ಕಲ್ಪತರು ಗ್ರ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ತಿಪಟೂರು ತಾಲ್ಲೋಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಬಸವರಾಜಪ್ಪ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ ನಿಂದ ಈಗಾಗಲೇ ಮಕ್ಕಳ ಸಾಹಿತ್ಯ ಸಮ್ಮೆಳನ,ಮಹಿಳಾ ಸಾಹಿತ್ಯ ಸಮ್ಮೇಳನ ನಡೆಸಲಾಗಿದೆ. ಈ ಭಾರೀ ವಿಶೇಷ ಹಾಗೂ ವಿನೂತನವಾಗಿ ಕೃಷಿ ಸಾಹಿತ್ಯ ಸಮ್ಮೇಳನ ಹಾಗೂಸಮ್ಮೇಳನದ ಅಂಗವಾಗಿ ಕೃಷಿ ವಿಚಾರ ಸಂಕೀರಣ ನಡೆಸಲಾಗುವುದು. ಕನ್ನಡ ಸಾಹಿತ್ಯ ಪರಿಷತ್.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ)ನಿವೃತ್ತ ನೌಕರರ ಸಂಘ .ಜನಸ್ಪಂದಾನ ಟ್ರಸ್ಟ್ .ಸೌಹಾರ್ದ ತಿಪಟೂರು.ಸೊಗಡು ಜನಪದ ಹೆಜ್ಜೆ.ಪ್ರಾಂತರೈತ ಸಂಘ.ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕೃಷಿ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗಿದೆ.ನಮ್ಮ ದೇಶ ಕೃಷಿ ಪ್ರದಾನ ದೇಶವಾಗಿದ್ದು,ಕೃಷಿ ಲಾಭದಾಯಕವಾಗಿಲ್ಲ,ಎಂದು ಕೃಷಿಯಿಂದ ವಿಮುಖರಾಗುತ್ತಿರುವ ಹೊತ್ತಿನಲ್ಲಿ, ನಮ್ಮ ರೈತರಿಗೆ ಯುವಕರಿಗೆ, ಆತ್ಮಸ್ಥೈರ್ಯ ತುಂಬವ ಕೆಲಸ ಮಾಡಬೇಕು.ಕೃಷಿ ಸಾಹಿತ್ಯ ಸಮ್ಮೇಳನದಲ್ಲಿ ಕೃಷಿಯಲ್ಲಿ ವಿನೂತನ .ಪ್ರಯೋಗಗಳು,ಹಾಗೂ ಲಾಭದಾಯಕ ಕೃಷಿ ಮಾರ್ಗಗಳ ಕುರಿತು, ಸಂವಾದ ನಡೆಸಬೇಕು,ಕೃಷಿಯಲ್ಲಿ ಸಾಧನೆ ಮಾಡಿರುವ ರೈತರಿಂದ ಮಾರ್ಗದರ್ಶನ ಪಡೆಯಬೇಕು,ಯುವಕರು ಕೃಷಿಯತ್ತ ಆಕರ್ಷಿತರಾಗಲು,ಸಂವಾದ ಏರ್ಪಡಿಸಲಾಗಿದೆ.ಜೂನ್ 07ರಂದು ಶನಿವಾರ ಬೆಳಗ್ಗೆ 10.30ಕ್ಕೆ ತಿಪಟೂರು ಜನಪ್ರೀಯ ಶಾಸಕರಾದ ಕೆ.ಷಡಕ್ಷರಿ ಉದ್ಘಾಟನೆ ನೆರವೇರಿಸಲಿದ್ದಾರೆ.ಅಧ್ಯಕ್ಷತೆಯನ್ನ ತಾಲ್ಲೋಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಬಸವರಾಜಪ್ಪ ವಹಿಸಲ್ಲಿದ್ದು .ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಪ್ರಾಸ್ಥಾವಿಕ ನುಡಿನುಡಿಯಲ್ಲಿದ್ದಾರೆ .ಪುಸ್ತಕ ಮಳಿಗೆಯನ್ನ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ,ಕೆ.ಎಸ್ ಸಿದ್ದಲಿಂಗಪ್ಪ,ಉದ್ಘಾಟಿಸಲಿದ್ದು.ತಿಪಟೂರು ತಹಸೀಲ್ದಾರ್ ಪವನ್ ಕುಮಾರ್ .ಇಒ ಸುದರ್ಶನ್.ತೋಟಗಾರಿಕೆ ಸಹಾಯಕ ನಿರ್ದೇಶಕ ಚಂದ್ರಶೇಖರ್.ಸರ್ಕಾರಿ ಬಾಲಕರ ಕಾಲೇಜು ಪ್ರಚಾರ್ಯ ಶಿವಕುಮಾರ್,ಭಾಗವಹಿಸಲ್ಲಿದ್ದಾರೆ.ಕೃಷಿ ಸಾಹಿತ್ಯ ಸಮ್ಮೇಳನದಲ್ಲಿ 5 ಘೋಷ್ಠಿಗಳು ನಡೆಯಲಿದ್ದು, ತೆಂಗು ಮತ್ತು ಅಡಿಕೆ ಪ್ರಸ್ತುತ ಮತ್ತು ಭವಿಷ್ಯ.2ನೇ ಘೋಷ್ಠಿ ಬಹು ಬೆಳೆ ಪದ್ದತಿ ಮತ್ತು ನನ್ನ ಪ್ರಯೋಜನಗಳು ಮತ್ತು ಸಹಜ ಕೃಷಿಯ ನನ್ನ ಪ್ರಯೋಜನಗಳು.ದಿನಾಂಕ 08.06.2025 ರಂದು ಭಾನುವಾರ 3ನೇ ಗೋಷ್ಠಿ ಮನುಷ್ಯ ಸತ್ತರೆ ಮಣ್ಣಿಗೆ ಮಣ್ಣು ಸತ್ತರೆ ಮಲ್ಲಿ.ಮತ್ತುನೀರು.ನೀರು ನೀರು ಎಲ್ಲಿದೆ ಕೊನೆ.4ನೇ ಘೋಷ್ಠಿ ಕೃಷಿ ಉದ್ಯಮವೋ,ಜೀವನ ವಿಧಾನವೋ,ಮತ್ತು ತೆಂಗಿನಲ್ಲಿ ಸಹಜ ಕೃಷಿ5ನೇ ಘೋಷ್ಠಿ ಸಮಗ್ರ ಕೃಷಿಯ ಅಪಾರ ಸಾಧ್ಯತೆಗಳು.ಕೃಷಿ ನೀತಿಯ ಅದ್ವಾನಗಳು. ಘೋಷ್ಠಗಳು ನಡೆಯಲಿವೆ.ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಕೃಷಿ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು

ಪತ್ರಿಕಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಶಂಕರಪ್ಪ. ಉಪನ್ಯಾಸಕರಾದ ಶಿವಕುಮಾರ್.ಬಸವರಾಜು.ಚಂದ್ರಶೇಖರ್.ಗೋವಿಂದರಾಜು.ಜಯಾನಂದಯ್ಯ.ಕೆ.ಎಂ ರಾಜಣ್ಣ.ಸ್ವರ್ಣಗೌರಮ್ಮ.ಶಂಕರಪ್ಪ ಬಳ್ಳೆಕಟ್ಟೆ,ಉಜ್ಜಜ್ಜಿರಾಜಣ್ಣ.ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ




