ತಿಪಟೂರು:ಕರ್ನಾಟಕದ ಪ್ರತಿಷ್ಠಿತ ತಾಂತ್ರಿಕ ಮಹಾವಿದ್ಯಾಯಗಳಲ್ಲಿ ಒಂದಾದ ತಿಪಟೂರು ಕಲ್ಪತರು ತಾಂತ್ರಿಕ ಮಹಾವಿದ್ಯಾಲಯಕ್ಕೆ ನ್ಯಾಷನಲ್ ಬೋರ್ಡ್ ಅಫ್ ಅಕ್ರಿಡೇಷನ್ ಕಮಿಟಿ ಮಾನ್ಯತೆ ದೊರೆತ್ತಿದ್ದು.ಕಲ್ಪತರು ತಾಂತ್ರಿಕ ಮಹಾವಿದ್ಯಾಲಯಕ್ಕೆ ಎಪ್ರೀಲ್ 26 ರಂದು ಭೇಟಿ ನೀಡಿದ ಎನ್.ಬಿ.ಎ ತಾಂತ್ರಿಕ ಪರಿಣಿತರ ತಂಡ ಭೇಟಿ ನೀಡಿ,ಕಾಲೇಜಿ.ವ್ಯವಸ್ಥೆಗಳು,ಮೂಲಸೌಕರ್ಯ.ವಿದ್ಯಾರ್ಥಿಗಳಿಗೆ ಪಠ್ಯಪೂರಕ .ಹಾಗೂ ಪಠ್ಯೇತರ ಸೌಕರ್ಯಗಳು.ಪರಿಶೀಲನೆ ನಡೆಸಿದ್ದು, ಕಮಿಟಿಯ ಶೀಪಾರಸ್ಸಿನಂತೆ 2025ರಿಂದ 2028ರ ಶೈಕ್ಷಣಿಕ ಸಾಲಿನ ವರೆಗೆ ಮಾನ್ಯತೆ ನೀಡಿ.ಕಲ್ಪತರು ಇಂಜಿನಿಯರಿಂಗ್ ಕಾಲೇಜು ಸೌಕರ್ಯಗಳು ಹಾಗೂ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದೆ.

ತಿಪಟೂರು ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾನಿಲಯ ಆಡಳಿತ ಭವನದಲ್ಲಿ ಆಯೋಜಿಸಿದ ಪತ್ರಿಕಾಘೋಷ್ಠಿಯನ್ನ ಉದೇಶಿಸಿ ಮಾತನಾಡಿದ ಕಲ್ಪತರು ವಿದ್ಯಾಸಂಸ್ಥೆ ಖಜಾಂಚಿ ಶಿವಪ್ರಸಾದ್ .ಕಲ್ಪತರು ತಾಂತ್ರಿಕ ಮಹಾವಿದ್ಯಾಲಯ ಕಲ್ಪತರು ನಾಡಿನ ಹೆಮ್ಮೆಯ ಕಾಲೇಜು ನಮ್ಮ ಕಾಲೇಜು ಗ್ರಾಮಿಉಣ ಭಾಗದ ಸಾವಿರಾರು ಜನ ವಿದ್ಯಾರ್ಥಿಗಳ ಬಾಳಿನ ಆಶಾಕಿರಣವಾಗಿದ್ದು.ನಮ್ಮ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಸಾವಿರಾರು ವಿದ್ಯಾರ್ಥಿಗಳು ದೇಶ ವಿದೇಶಗಳ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆದು.ಕಾಲೇಜು ಹಾಗೂ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ.ನಮ್ಮ ಕಾಲೇಜಿನ ಹಿರಿಮೆ ಎಂಬಂತ್ತೆ ಪ್ರಸಕ್ತ ಸಾಲಿನಲ್ಲಿ ಕಲ್ಪತರು ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿದ ನ್ಯಾಷನಲ್ ಬೋರ್ಡ್ ಆಫ್ ಅಕ್ರಿಡೇಷನ್. ದೆಹಲಿ ತಂಡ ನಮ್ಮ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ,ಕಲ್ಪತರು ಇಂಜಿನಿಯರಿಂಗ್ ಕಾಲೇಜು ,ಕಂಪ್ಯೂಟರ್ ಸೈನ್ಸ್ &ಇಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಲೇಜಿನಲ್ಲಿ ಇರುವ ಲ್ಯಾಬ್. ಕ್ಯಾಪಸ್.ಬೋದಕ ಹಾಗೂ ಬೋಧಕೇತರ ವರ್ಗ,ಕಾಲೇಜು ಮೂಲಸೌಕರ್ಯಗಳ ಸೇರಿದಂತೆ ನಮ್ಮ ಶಿಕ್ಷಣದ ಗುಣಮಟ್ಟ ಹಾಗೂ ಸೌಕರ್ಯಗಳನ್ನ ಎಲ್ಲಾ ಆಯಾಮಗಳಲ್ಲಿ ಪರಿಶೀಲನೆ ನಡೆಸಿ .ಕಾಲೇಜು ಸೌಕರ್ಯಗಳು ಹಾಗೂ ಉಪನ್ಯಾಸಕರು.ಕಾಲೇಜಿನಲ್ಲಿ ನಡೆಯುತ್ತಿರುವ ಹೊಸ ಹೊಸ ಪ್ರಯೋಗಗಳು ಹಾಗೂ ಸಂಶೋಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ತಿಪಟೂರು ಕಲ್ಪತರು ಇಂಜಿನಿಯರ್ ಕಾಲೇಜಿಗೆ ಎನ್ .ಬಿ.ಎ ಮಾನ್ಯತೆ ದೊರೆತಿರುವುದು ಸಂತೋಷ ಉಂಟುಮಾಡಿದ್ದು,ನಮ್ಮ ಸಂಸ್ಥೆಯ ಮೂಲ ಉದೇಶದಂತೆ ಇನ್ನೂ ಹೆಚ್ಚಿನ ಸೇವೆ ಮಾಡಬೇಕು ಎನ್ನುವ ಉತ್ಸಾಹ ಹೆಚ್ಚಿಸಿದೆ ನಮ್ಮ ಸಂಸ್ಥೆಯ ಸಾಧನೆಗೆ ಕಾರಣೀಕರ್ತರಾದ ಸಂಸ್ಥೆಯ ಆಡಳಿತ ಮಂಡಳಿ ಸಿಬ್ಬಂದಿ ವರ್ಗ ಬೋಧಕ ಬೋಧಕೇತರ ವರ್ಗಕ್ಕೆ ಅಭಿನಂದನೆಗಳು ಎಂದು ತಿಳಿಸಿದರು.

ಕಲ್ಪತರು ವಿದ್ಯಾಸಂಸ್ಥೆ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜ್ ಮಾತನಾಡಿ ಕಲ್ಪತರು ಇಂಜಿನಿಯರಿಂಗ್ ಕಾಲೇಜಿಗೆ ಎನ್.ಬಿ.ಎ ಮಾನ್ಯತೆ ದೊರೆತ್ತಿದೆ.ನಮ್ಮ ಕಾಲೇಜಿಗೆ ಭೇಟಿ ನೀಡಿದ ನ್ಯಾಷನಲ್ ಬೋರ್ಡ್ ಆಫ್ ಅಕ್ರಿಡೇಷನ್ ತಂಡ ಭೇಟಿ ನೀಡಿದ ವೇಳೆ ಕಲ್ಪತರು ವಿದ್ಯಾಸಂಸ್ಥೆ ಅತ್ಯುತ್ತಮ ಮೂಲಸೌಕರ್ಯಗಳನ್ನ ಒಳಗೊಂಡಿದ್ದು, ಸ್ವಯುಕ್ತ ವಿಶ್ವವಿದ್ಯಾಲಯದ ಮಾನ್ಯತೆ ಅರ್ಹವಾದ ಎಲ್ಲಾ ಸೌಕರ್ಯಗಳು ಇವೇ ಆದರೇ ಯಾಕೆ ಇನ್ನು ಪಡೆದಿಲ್ಲ. ಸ್ವಯುಕ್ತ ತಾಂತ್ರಿಕ ಮಹಾವಿದ್ಯಾಲಯಕ್ಕೆ ಮಾನ್ಯತೆ ಪಡೆಯಿರಿ ಎಂದು ತಿಳಿಸಿದ್ದಾರೆ.ಅದರಂತೆ ಮುಂದಿನ ದಿನಗಳಲ್ಲಿ ಕಲ್ಪತರು ತಾಂತ್ರಿಕಾ ಮಹಾವಿದ್ಯಾಲಯವನ್ನ ಕಲ್ಪತರು ಸ್ವಯುಕ್ತ ತಾಂತ್ರಿಕ ಮಹಾವಿದ್ಯಾಲಯ ಮಾಡುವನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ.ನಮ್ಮ ಸಂಸ್ಥೆಯ ಮೇಲೆ ಜನ ಹಾಗೂ ವಿದ್ಯಾರ್ಥಿಗಳ ಪೋಷಕರು ಇಟ್ಟಿರುವ ನಂಬಿಕೆಯನ್ನ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದ್ದಾಗಿ ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ಸಂಗಮೇಶ್ ಮಾತನಾಡಿ ಕಲ್ಪತರು ವಿದ್ಯಾಸಂಸ್ಥೆ ಬೆಳೆಯಲು ತಿಪಟೂರು ಸೇರಿದಂತೆ ಸುತ್ತಮುತ್ತಲ ತಾಲ್ಲೋಕಿನ ಕೊಬ್ಬರಿ ವರ್ತಕರು,ವ್ಯಾಪಾರಿಗಳು ರೈತರು ಸಹಕಾರ ಕಾರಣವಾಗಿದ್ದು,ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎನ್ನುವ ಸಂಸ್ಥೆ ಸಂಸ್ಥಾಪಕ ಆಶಯದಂತೆ ನಾವು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಸಂಸ್ಥೆ ಕಾರ್ಯದರ್ಶಿ ಸುಧಾಕರ್ ಮಾತನಾಡಿ ಕಲ್ಪತರು ಇಂಜಿನಿಯರಿಂಗ್ ಕಾಲೇಜಿನಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.ನಮ್ಮ ಕಾಲೇಜಿನಲ್ಲಿ ಸುಮಾರು 1800 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಪಠ್ಯಪೂರಕ ಹಾಗೂ ಪಠ್ಯೇತರ ಚಟುವಟಿಕೆಗಳು ಕ್ರೀಡೆ ಸೇರಿದಂತೆ ಎಲ್ಲಾ ವಿಭಾಗಗಳಿಗೆ ಆಧ್ಯತೆ ನೀಡಲಾಗುತ್ತಿದೆ.ನಮ್ಮ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ದೇಶ ವಿದೇಶಗಳ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದು,ಶೇಕಡ 60ರಷ್ಟು ಕ್ಯಾಪಸ್ ಸೆಲೆಕ್ಷನ್ ಆಗುತ್ತಿದ್ದಾರೆ.ವಿದ್ಯಾರ್ಥಿಗಳು ಹಾಗೂ ಪೋಷಕರ ಆಶಯಕ್ಕೆ ತಕ್ಕಂತೆ ಸಮಲತ್ತು ನೀಡಿ ಕಾಲೇಜಿನ ಕೀರ್ತಿ ಹೆಚ್ಚಿಸುವ ಕೆಲಸ ಮಾಡಲಾಗುವುದು.ಕಾಲೇಜು ಆಡಳಿತ ಮಂಡಳಿ ಹಾಗೂ ಬೋಧಕರು ಬೋಧಕೇತರ ಸಿಬ್ಬಂದಿಯ ಶ್ರಮಕ್ಕೆ ಅಧ್ಯಕ್ಷರಾದ ಪಿ.ಕೆ ತಿಪ್ಪೆರುದ್ರಪ್ಪ ಅಭಿನಂದನೆ ಸಲ್ಲಿಸಿರುವುದ್ದಾಗಿ ತಿಳಿಸಿದರು.
ಪತ್ರಿಕಾ ಘೋಷ್ಠಿಯಲ್ಲಿ ಸಂಸ್ಥೆ ಉಪಾಧ್ಯಕ್ಷ .ಟಿ.ಎಸ್ ಬಸವರಾಜು.ಜಿ.ಡಿ.ದೀಪಕ್ ಬಿ.ಎಸ್ ಉಮೇಶ್.ಕಾರ್ಯದರ್ಶಿಗಳಾದ ಜಗದೀಶ್ ಮೂರ್ತಿ.ಜಿ.ಎಸ್ ಉಮಾಶಂಕರ್. ಪ್ರಾಚಾರ್ಯರಾದ ಡಾ//ಜಿ.ಡಿ ಗುರುಮೂರ್ತಿ.ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಮೈತ್ರಿ ಸಿ.ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ರಾಜಶೇಖರ್ ಆರಾಧ್ಯ.ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ




