ತಿಪಟೂರು ನಗರದ ಇಂದಿರಾ ನಗರದ ಬಳಿ ಅಕ್ರಮವಾಗಿ ಗಾಂಜಾಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ತಿಪಟೂರು ನಗರಠಾಣೆ ಸಬ್ ಇನ್ಪೆಕ್ಟರ್ ಕೃಷ್ಣಪ್ಪ.ಎಎಸ್ಐ ಲಕ್ಕೆಗೌಡ,ಪೋಲಿಸ್ ಪೇದೆ ಮಂಜುನಾಥ್ ನೇತೃತ್ವದ ತಂಡ ದಾಳಿ ನಡೆಸಿದೆ.

ಗಾಂಜಾಮಾರಾಟ ಮಾಡುತ್ತಿದ್ದ ತಡಸೂರು ಗ್ರಾಮದ ಮಂಜುನಾಥ್ ಎಂಬುವವನ್ನು ಮಾಲು ಸಮೇತ ಬಂಧಿಸಿದ್ದು, ಮಾರಾಟಕ್ಕೆ ತಂದಿದ್ದ ಸುಮಾರು 450ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದು.ನಗರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.




