:ನಗರದ ಪೇಟೆ ಬಸವೇಶ್ವರ ದೇವಾಲಯದಲ್ಲಿ ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನ ಅದ್ದೂರಿಯಾಗಿ ಆಚರಿಸಲಾಯಿತು.
ಬಸವ ಜಯಂತಿ ಅಂಗವಾಗಿ ಪೇಟೆಬಸವೇಶ್ವರ ಸ್ವಾಮಿಗೆ ಅಭಿಷೇಕ ಹಾಗೂ ವಿಶೇಷ ಪೂಜೆಸಲ್ಲಿಸಲಾಯಿತು.

ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿದ ಕಂಚಾಘಟ್ಟ ಷಡಕ್ಷಡರ ಮಠದ ಶ್ರೀ ರುದ್ರಮುನಿ ಮಹಾಸ್ವಾಮೀಜಿ ಬಸವಣ್ಣ ನವರು ವಿಶ್ವಕಂಡ ಸಮಾನತೆಯ ಬೆಳಕು,ಕರ್ನಾಟಕದ ಸೇರಿದಂತೆ ಜಗತ್ತಿನಲ್ಲಿ ಸಮಾನತೆ ಪದಕ್ಕೆ ವಿಶೇಷ ಅರ್ಥಕೊಟ್ಟ ಮಹಾಪುರುಷ,ಜನರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ವಚನಗಳನ್ನ ರಚಿಸಿ,ಶ್ರೀಸಾಮಾನ್ಯರ ಗುರುವಾದರು,ಸಮಾಜದಲ್ಲಿ ಹಾಸುಹೊಕ್ಕಾಗಿದ ಅಸಮಾನತೆಯನ್ನ ದೂರಮಾಡಬೇಕು ಸಮಾಜದಲ್ಲಿ ಅನುಭವಮಂಟಪ ಸ್ಥಾಪನೆ ಮಾಡಿ,ಸಮಾಜದಲ್ಲಿ ಬದಲಾವಣೆಗೆ ಕಾರಣರಾಗಿದ್ದಾರೆ, ಜಗತ್ತಿನ ಜ್ಯೋತಿಯಾಗಿರುವ ಬಸವಣ್ಣ ಸರ್ವಕಾಲಕ್ಕೂ ಶ್ರೇಷ್ಠದಾರ್ಶನಿಕ ಅವರ ತತ್ವ ಆದರ್ಶ ಜಗತ್ತಿಗೆದಾರಿ ದೀಪ ಎಂದು ತಿಳಿಸಿದರು.
ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕಿರಿಯಶ್ರೀಗಳಾದ ಅಭಿನವ ಶ್ರೀ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಮಾತನಾಡಿ ನಮ್ಮ ಶಾಸ್ತ್ರ ಸಂಪ್ರದಾಯದಲ್ಲಿ ಅಕ್ಷಯ. ತೃತೀಯಕ್ಕೆ ವಿಶೇಷ ಸ್ಥಾನಮಾನವಿದೆ,ಬಸವೇಶ್ವರರು ಜಗತ್ತಿನ ಬೆಳಕು,ಸಮಾಜದಲ್ಲಿ ಅಮೂಲಾಗ್ರ ಬದಲಾವಣೆಗೆ ಕಾರಣೀಪುರುಷ, ಅವರ ದಾರಿ ಸಮಾಜ ನಡೆಯ ಬೇಕು ಎಂದು ತಿಳಿಸಿದರು,
ಕಾರ್ಯಕ್ರಮದಲ್ಲಿ ಮಾಡಾಳು ವಿರಕ್ತ ಮಠದ ಶ್ರೀ ರುದ್ರಮುನಿಮಹಾಸ್ವಾಮೀಜಿ,ಕುಪ್ಪೂರು ವಿರಕ್ತಮಠದ ಶ್ರೀ ತೇಜೇಶ್ವರಸ್ವಾಮೀಜಿ.ಕೊಬ್ಬರಿ ವರ್ತಕರಾದ ಮಹಾಲಿಂಗಯ್ಯ.ರೇಣುಕಯ್ಯ ವೋಡಪೋನ್ ಚಂದ್ರು ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ




