Spread the love

ತಿಪಟೂರು :ಸಾರ್ಥವಳ್ಳಿ ಜಾತ್ರೆಗೆ ಬಂದಿದ್ದ ವ್ಯಕ್ತಿ ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲ್ಲೋಕಿನ ಹೊನ್ನವಳ್ಳಿ ಹೋಬಳಿ ಸಾರ್ಥವಳ್ಳಿ ಗ್ರಾಮದಲ್ಲಿ ನಡೆದಿದೆ.
ಗುಬ್ಬಿ ತಾಲ್ಲೋಕು ಕಸಬಾ ಹೋಬಳಿ ಹೊನ್ನಾಂಬಿಕ ಹಟ್ಟಿ ವಾಸಿ ಲಿಂಗರಾಜು 27 ವರ್ಷ ಮೃತ ದುರ್ದೈವಿ.
ಲಿಂಗರಾಜು ತಾಲ್ಲೋಕಿನ ಸಾರ್ಥವಳ್ಳಿ ಗ್ರಾಮದೇವತೆ ಹುಚ್ಚಮ್ಮ ದೇವಿ ಜಾತ್ರೆಗಾಗಿ ಮಾವಿನಹಳ್ಳಿ ಗೊಲ್ಲರಹಟ್ಟಿಗೆ ಬಂದಿದ್ದ ಎನ್ನಲಾಗಿದ್ದು. ದೇವರ ಬಾನ ಮುಗಿಸಿ ರಾತ್ರಿ ಗಂಗಾಸ್ನಾನವಿದ್ದ ಕಾರಣ.ಗೆಳೆಯನೊಂದಿಗೆ ಸಾರ್ಥವಳ್ಳಿ ಕೆರೆಯಲ್ಲಿ ಕುರಿಮೇಯಿಸಲು ಹೋಗಿದ್ದು. ಬಿಸಿಲಿನ ಜಳಕೆ ಈಜಲು ಹೋಗಿದ್ದು. ಈಜು ಬಾರದೆ. ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು.


ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಶವ ನೀರಿನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದು. ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ವರದಿ: ಮಂಜುನಾಥ್ ಹಾಲ್ಕುರಿಕೆ

error: Content is protected !!