Spread the love

ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅಪಪ್ರಚಾರಕ್ಕೆ ತೀಕ್ಷ್ಣ ಪ್ರತಿಕ್ರಿಯೆ

ತಿಪಟೂರು: ತಾಲ್ಲೂಕಿನ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ತರಲಾಗಿದ್ದು, ಸುಮಾರು 300 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಭೂಮಿ ಪೂಜೆ ಹಂತದಲ್ಲಿವೆ. ಅಭಿವೃದ್ಧಿಯನ್ನು ಸಹಿಸದ ಕೆಲವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಅಪಪ್ರಚಾರ ಮಾಡುವ ಮೊದಲು ಸರಿಯಾದ ಮಾಹಿತಿ ಪಡೆಯಲಿ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.


ತಾಲ್ಲೂಕಿನ ಕಲ್ಲೇಗೌಡನಪಾಳ್ಯ ಬಳಿಯ ಎಸ್.ಟಿ.ಪಿ. ಘಟಕದ ಬಳಿ ಸುಮಾರು 19 ಕೋಟಿ ವೆಚ್ಚದ ಯುಜಿಡಿ ತ್ಯಾಜ್ಯ ನೀರು ಸಂಸ್ಕರಣ ಘಟಕವನ್ನು 6 ಎಂ.ಎಲ್.ಡಿ. ಸಾಮರ್ಥ್ಯದಿಂದ 9 ಎಂ.ಎಲ್.ಡಿ. ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿ. ನಗರದ ಜನಸಂಖ್ಯೆಗೆ ಅನುಗುಣವಾಗಿ ಈ ಮೇಲ್ದರ್ಜೆ ಕಾಮಗಾರಿಗೆ 19 ಕೋಟಿರೂಪಾಯಿನಗರದಲ್ಲಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಶೆಡ್ ನಿರ್ಮಾಣ – 50 ಲಕ್ಷ ರೂ.,ಗಾಂಧೀನಗರ ಪಾರ್ಕ್ ಬಳಿ ಪೌರಕಾರ್ಮಿಕರ ಶೌಚಾಲಯ ಹಾಗೂ ವಿಶ್ರಾಂತಿ ಗೃಹ ನಿರ್ಮಾಣ – 25 ಲಕ್ಷ ರೂ.,ಜಲಶುದ್ಧೀಕರಣ ಘಟಕದ ಬಳಿ ಮಳೆನೀರು ಚರಂಡಿ ನಿರ್ಮಾಣ – 35 ಲಕ್ಷ ರೂ.,ಗಾಂಧೀನಗರ ಜಲಶುದ್ಧೀಕರಣ ಘಟಕದ ಬಳಿ ವಿದ್ಯುತ್ ಪರಿವರ್ತಕ ಸ್ಥಳಾಂತರ – 10 ಲಕ್ಷ ರೂ.,ಚಿಕ್ಕಮಾರ್ಕೆಟ್ ಬಳಿ ಗ್ರಂಥಾಲಯ ಹಾಗೂ ನಗರಸಭೆ ವಾಹನ ಶೆಡ್‌ಗೆ ತಡೆಗೋಡೆ ನಿರ್ಮಾಣ – 40 ಲಕ್ಷ ರೂ.,ಕೆ.ಆರ್. ಬಡಾವಣೆ ಪಾರ್ಕ್ ಬಳಿ ವಿಕಲಚೇತನ ಮಕ್ಕಳ ಸಾಮರ್ಥ್ಯ ಕಟ್ಟಡ ನಿರ್ಮಾಣ – 45 ಲಕ್ಷ 75 ಸಾವಿರ ರೂ.,
ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಬಳಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ – 50 ಲಕ್ಷ ರೂ.,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ಕೊಠಡಿ ನಿರ್ಮಾಣ – 58 ಲಕ್ಷ 95 ಸಾವಿರ ರೂ.ಇದಲ್ಲದೆ, ಸುಮಾರು 1 ಕೋಟಿ ರೂ. ವೆಚ್ಚದ ವಿವಿಧ ರಸ್ತೆ ಕಾಮಗಾರಿಗಳಿಗೂ ಭೂಮಿ ಪೂಜೆ ನೆರವೇರಿಸಲಾಯಿತು


ನಂತರ ಮಾತನಾಡಿದ ಶಾಸಕ ಕೆ. ಷಡಕ್ಷರಿ, 2,638 ಮೀಟರ್ ಯುಜಿಡಿ ಪೈಪ್‌ಲೈನ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 4 ಸಾವಿರ ಯುಜಿಡಿ ಸಂಪರ್ಕಗಳಿಗೆ ಕ್ರಮವಹಿಸಲಾಗುತ್ತದೆ. ತಾಲ್ಲೂಕಿನಲ್ಲಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆದರೂ ಕೆಲವು ವ್ಯಕ್ತಿಗಳು ಪೂರ್ವಾಗ್ರಹ ಪೀಡಿತರಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಅಪಪ್ರಚಾರ ಮಾಡುವವರು ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿ ಮಾತನಾಡಲಿ. ಅಭಿವೃದ್ಧಿಯೇ ನಮ್ಮ ಆದ್ಯತೆ; ಕೆಲಸಗಳೇ ಮಾತನಾಡುತ್ತವೆ ಎಂದು ಹೇಳಿದರು.
ನಗರದಲ್ಲಿ 4.5 ಕೋಟಿ ರೂ. ವೆಚ್ಚದಲ್ಲಿ ಎಪಿಎಂಸಿ ಆಡಳಿತ ಭವನ ನಿರ್ಮಾಣ, 9.5 ಕೋಟಿ ರೂ. ವೆಚ್ಚದಲ್ಲಿ ಜೈಲು ನಿರ್ಮಾಣ ಹಾಗೂ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ನಗರದ ಕೆರೆಗಳ ಸೌಂದರ್ಯೀಕರಣ ಕಾಮಗಾರಿಗೂ ಆದ್ಯತೆ ನೀಡಲಾಗಿದ್ದು, ಸದ್ಯದಲ್ಲೇ ಭೂಮಿ ಪೂಜೆ ನೆರವೇರಿಸಲಾಗುವುದು. ತಾಲ್ಲೂಕಿನಲ್ಲಿ ಇಷ್ಟೆಲ್ಲ ಕಾಮಗಾರಿಗಳು ನಡೆಯುತ್ತಿದ್ದರೂ ಕೆಲವರ ಕಣ್ಣಿಗೆ ಕಾಣುವುದಿಲ್ಲ ಎಂದು ಅವರು ತಿಳಿಸಿದರು.
ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ, ನಗರಸಭೆ ಮಾಜಿ ಅಧ್ಯಕ್ಷೆ ಯಮುನಾ ಧರಣೇಶ್, ಮಾಜಿ ಸದಸ್ಯೆ ಅಶ್ವಿನಿ ದೇವರಾಜು, ಎಇಇ. ಸುನೀಲ್ ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!