Month: January 2025

ತಿಪಟೂರಿನ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಇಲಾಖೆ, ಆರೋಗ್ಯ ಇಲಾಖೆ, ತಿಪಟೂರು ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟ (ರಿ) ಮತ್ತು ವೈಭವಿ ಆಸ್ಪತ್ರೆ ಇವರ ಸಹಯೋಗದಲ್ಲಿ ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆ ಶಿಭಿರ ನಡೆಸಲಾಯಿತು

ಶಿಶುಅಭಿವೃದ್ಧಿಇಲಾಖೆ ಯೋಜನಾಧಿಕಾರಿಲೋಕೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅಪೌಷ್ಠಿಕ ಮಕ್ಕಳನ್ನು ಬಡತನ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಾರದು ಎನ್ನುವ ದೃಷ್ಠಿಯಿಂದಸರ್ಕಾರ ಗರ್ಭಿಣಿಯರುಹಾಗೂ ಬಾಣಂತಿಯರಿಗೆ ಅಂಗನವಾಡಿ ಕೇಂದ್ರದಲ್ಲಿಪೌಷ್ಠಿಕಆಹಾರ,ಹಾಲುಕೋಳಿಮಟ್ಟೆ ವಿತರಣೆ ನೀಡುತ್ತಿದ್ದು,ನಿಯಮಿತವಾಗಿ ಮಕ್ಕಳ ತಪಾಸಣೆ ಮಹಿಳೆಯರ ಹಾಗೂ ಮಕ್ಕಳ ಆರೋಗ್ಯ ಪರೀಕ್ಷೆ ಮಾಡುತ್ತಿದೆ, ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕು ಎಂದು ತಿಳಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಶ್ರೀಮತಿ ಡಾ// ರಾಧಿಕಮಾತನಾಡಿ ಆರೋಗ್ಯ ಇಲಾಖೆಯಿಂದಅನುಷ್ಠಾನಗೊಳ್ಳುತ್ತಿರುವ ಅನೀಮಿಯ ಮುಕ್ತ ಭಾರತ ಕಾರ್ಯಕ್ರಮದಲ್ಲಿರಕ್ತಹೀನತೆ ಯಿಂದ ಬಳಲುತ್ತಿರುವ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರು, ಹದಿಹರೆಯದ ಹೆಣ್ಣು ಮಕ್ಕಳು ಹಾಗೂಮಕ್ಕಳ ಆರೋಗ್ಯ ತಪಾಸಣೆಯನ್ನು ಮಾಡಲಾಗುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಡಾllಶಿವಕುಮಾರ್ ಮಾತನಾಡಿ ನಮ್ಮ ಆರೋಗ್ಯ ಸಂಪಾದನೆಗೆ ನಾವು ಯಾವುದೇ ಕಂಪನಿಗಳಿಂದ ದೊರೆಯುವ ಔಷಧಿಗಳ ಮೊರೆಹೋಗುವ ಅಗತ್ಯವಿಲ್ಲ, ಕೇವಲ ಜಾಹಿರಾತುಗಳಿಗೆ ಮರುಳಾಗಿ ಆರೋಗ್ಯ ಹಾಳುಮಾಡಿಕೊಳ್ಳದೆ,ನಿಮ್ಮ ಮನೆಯಲ್ಲಿಯೇ ತಯಾರು
ಮಾಡುವ ಮೊಳಕೆ ಕಾಳುಗಳು ಹಾಗೂ ಸ್ಥಳೀಯವಾಗಿ ಸಿಗುವ ಸೊಪ್ಪು ತರಕಾರಿ ಮತ್ತು ಹಣ್ಣುಗಳನ್ನು ಮೊಟ್ಟೆ ಯನ್ನ ಯಥೇಚ್ಛವಾಗಿಉಪಯೋಗಿಸಬೇಕೆಂದು ತಿಳಿಸಿದರು.


ತಿಪಟೂಟೂರು ವೈಭವಿ ಆಸ್ಪತ್ರೆಯ ವೈದ್ಯರಾದ ಡಾ//ಮಧುಸೂಧನ್ ಮಾತನಾಡಿ ತಾಯಿ ಹಾಲು ಅಮೃತಕ್ಕೆ ಸಮಾನ ತಾಯಿ ಹಾಲಿನಲ್ಲಿ ಹೆಚ್ಚು ಹೆಚ್ಚು ರೋಗ ನಿರೋಧಕಶಕ್ತಿಹೆಚ್ಚಿನ ಪ್ರಮಾಣದಲ್ಲಿಪೌಷ್ಠಿಕಾಂಶಗಳಿವೆ,ಮಗು ಹುಟ್ಟಿದ ಅರ್ಧಗಂಟೆಯೊಳಗೆ, ತಾಯಿ ಎದೆಹಾಲನ್ನು ಕೊಡಬೇಕು, ಹಾಗೂ ಮನೆಯಲ್ಲಿ ತಯಾರಿಸಿದ ಪೌಷ್ಠಿಕಆಹಾರ ನೀಡಬೇಕು.ತಾಯಿ ಹಾಗೂ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದ ಅವರು
ಆಪೌಷ್ಠಿಕ ಮಕ್ಕಳಿಗೆ ಐರನ್ ಮತ್ತು ಕ್ಯಾಲ್ಸಿಯಂ ಸಿರಪ್ ಗಳನ್ನು ಉಚಿತವಾಗಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಡಾ//ರವಿ, ಡಾ// ರಂಗನಾಥ್, ಡಾ//ಮುಸ್ತಾಫ್ ಆರ್.ಬಿ.ಎಸ್.ಕೆ.
ವೈದ್ಯಾಧಿಕಾರಿಗಳಾದ ಡಾ//ರಾಜು ತಿಪಟೂರು ತಾಲ್ಲೂಕು, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ
ಎಂ.ಮಂಜುಳಾ ಸಹಾಯಕ ಶಿಶು ಅಭಿವೃದ್ದಿಯೋಜನಾಧಿಕಾರಿಗಳಾದ ಶ್ರೀಮತಿ ದೀಪ ಹೆಬ್ಬಳ್ಳಿ, ಶ್ರೀಮತಿ ಮೀನಾಕ್ಷಿ ಬಿ.ಬಟ್ಟೂರ, ಮೇಲ್ವಿಚಾರಕಿಯರಾದ ಶ್ರೀಮತಿ ಬಿ.ಎಸ್. ಪ್ರೇಮ, ಶ್ರೀಮತಿ ಮಂಜುಳಾದೇವಿ,ಭಾಗ್ಯಮ್ಮ,ಉಪಸ್ಥಿತರಿದರು ತಿಪಟೂರು ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟದ ವತಿಯಿಂದ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಲಯನ್ ಡೇಟ್ ಸಿರಪ್‌ನ್ನು ಉಚಿತವಾಗಿ ಅಪೌಷ್ಠಿಕ ಮಕ್ಕಳಿಗೆ ವಿತರಿಸಿದರು.

ತಿಪಟೂರು : ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ನಿರ್ಧೇಶಕರ ಸ್ಥಾನದ ಚುನಾವಣೆಯಲ್ಲಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಬಸವರಾಜು.ಹೆಚ್.ಎನ್, ಉಮಾಮಹೇಶ್.ಬಿ, ಸೋಮಶೇಖರ್.ಹೆಚ್, ರೇವಣ್ಣ.ಹೆಚ್.ಎಸ್, ಚಂದ್ರಶೇಖರಯ್ಯ,ಆರ್,ವಿ, ಮಹಿಳಾ ಮೀಸಲು ಕ್ಷೇತ್ರದಿಂದ ಜಯಂತಿಕುಮಾರಸ್ವಾಮಿ, ಶೋಭಾ ಕೃಷ್ಣಮೂರ್ತಿ, ಹಿಂದುವಳಿದ ವರ್ಗದಿಂದ ರಾಮಣ್ಣ.ಎಂ.ಆರ್, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಮೋಹನ್‌ನಾಯ್ಕ, ಪರಿಶಿಷ್ಟ ವರ್ಗದ ಮೀಸಲು ಕ್ಷೇತ್ರದಿಂದ ನಾಗರಾಜು, ಸಾಲಗಾರರಲ್ಲದ ಮೀಸಲು ಕ್ಷೇತ್ರದಿಂದ ಶೀಲಾಸುರೇಶ್ ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ವರದಿ: ಸಂತೋಷ್ ಓಬಳ. ಗುಬ್ಬಿ

ತಿಪಟೂರು: ತಿಪಟೂರು ತಾಲ್ಲೂಕಿನ ಚಿಕ್ಕಮಾರ್ಪನಹಳ್ಳಿ ಹೆಚ್.ಪಿ.ಎಸ್ ಶಾಲೆಯಲ್ಲಿ ಶಾಂತಲಾ ಕೂಚಿಪೂಡಿ ನೃತ್ಯ ಮತ್ತು ಸಂಗೀತ ಶಾಲೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಮದಲ್ಲಿ ಕೂಚಿಪುಡಿ ನೃತ್ಯ ಪರಂಪರೆಯ ಪ್ರಾತ್ಯಕ್ಷಿತೆಯ ತರಭೇತಿಯನ್ನು ನೀಡಲಾಯಿತು. ಈ ಸಂಧರ್ಬದಲ್ಲಿ ನೃತ್ಯ ಶಾಲೆಯ ಕಾರ್ಯದರ್ಶಿ ವಿ.ವೇದಾವತಿ, ನಿವೃತ್ತ ದೈಹಿಕ ಶಿಕ್ಷಣ ಅಧೀಕ್ಷಕ ಹೆಚ್.ಎಮ್. ನೀಲೇಶ್‌ಗೌಡ, ಶಮಂತ್, ಶಶಿಕಲಾ, ಭಾಗ್ಯ, ಹರಿಣಾಕ್ಷಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವರದಿ: ಸಂತೋಷ್ ಓಬಳ. ಗುಬ್ಬಿ

ವಿನೋದ್ ಬಾಬು.ಟಿ.ಎಸ್ ( ಬಾಬಣ್ಣ) ವಯಸ್ಸು (60) ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು,ತಿಪಟೂರು ತಾಲೂಕು,ಹೆಡಗರಹಳ್ಳಿ ಕಾಲೋನಿಯ ವಾಸಿಯಾಗಿದ್ದು ,ಬಸ್ ಏಜೆಂಟರಾಗಿ ಕೆಲಸ ಮಾಡುತ್ತಿದ್ದರು. ಕೆಂಪು ಬಣ್ಣದ ಚೆಕ್ಸ್ ಶರ್ಟ್ ಹಾಗೂ ನೀಲಿ ಬಣ್ಣದ ಪಂಚ ಧರಿಸಿದ್ದಾರೆ.5 ಅಡಿ 11 ಇಂಚು ಎತ್ತರ, ಗೋಧಿ ಮೈಬಣ್ಣ ಹಾಗೂ ದೃಢಕಾಯ ಶರೀರವನ್ನು ಹೊಂದಿದ್ದಾರೆ.ದಿನಾಂಕ 8.10.2024ರಂದು ಕಾಣೆಯಾಗಿದ್ದು, ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯು ಕಂಡು ಬಂದಲ್ಲಿ ದಯವಿಟ್ಟು ಈ ಕೆಳಗಿನ ಮೊಬೈಲ್ ನಂಬರ್ ಗೆ ಕರೆ ಮಾಡಿ.
ಪುನೀತ್. 9844099113,7975650875

ವರದಿ:ಮಂಜುನಾಥ್ ಹಾಲ್ಕುರಿಕೆ

ತುಮಕೂರು ಜಿಲ್ಲೆ ತಿಪಟೂರು ನಗರದ ಕೆ.ಆರ್ ಬಡಾವಣೆ ಶಂಕರಪ್ಪ ಲೇಹೌಟ್ ನಲ್ಲಿ ಗೃಹಿಣಿಯೊಬ್ಬರ ಮಾಗಲ್ಯ ಸರಕದ್ದು ಕಳ್ಳರು ಪಾರಾರಿಯಾಗಿದ್ದಾರೆ


ನಗರದ ಕೆ.ಆರ್ ಬಡಾವಣೆ ವಾಸಿಯಾದ ಅನಸೂಯರಾಜ್ ಎನ್ನುವ ಮಹಿಳೆ ಅಂಗಡಿಯಲ್ಲಿ ದಿನಸಿ ಕೊಳ್ಳಲು ಹೋಗಿದ್ದು,ಅಂಗಡಿಯಿಂದ ವಾಪಾಸ್ ಬರುವಾಗ ಹಿಂಬದಿಯಿಂದ ಬೈಕ್ ನಲ್ಲಿ ಬಂದ ಕಳ್ಳರು ಮಹಿಳೆಯ ಮಾಂಗಲ್ಯ ಸರಕಸಿದುಕೊಂಡು ಪಾರಾರಿಯಾಗಿದ್ದಾರೆ.ತಕ್ಷಣ ಮಹಿಳೆ ತಿಪಟೂರು ನಗರಪೊಲೀಸ್ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ತಿಪಟೂರು ನಗರಪೊಲೀಸ್ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ನಗರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ವರದಿ :ಮಂಜುನಾಥ್ ಹಾಲ್ಕುರಿಕ

*
ತುಮಕೂರು ಜಿಲ್ಲೆ ತಿಪಟೂರು. ನಗರದ ಕೃಷಿ ಉತ್ವನ್ನ ಮಾರುಕಟ್ಟೆಯಲ್ಲಿ ಸೋಮವಾರ ರಾತ್ರಿ ಕಳ್ಳರು ಲಕ್ಷಾಂತರ ಮೌಲ್ಯದ ಸುಮಾರು 3635 ಕೆಜಿ ಕೊಬ್ಬರಿ ಕಳವು ಮಾಡುವ ಮೂಲಕ ಕೈಚಳಕ ತೋರಿಸಿದ್ದಾರೆ.

ಎಪಿಎಂಸಿ ಮಾರುಕಟ್ಟೆಯ ಮುಖ್ಯ ದ್ವಾರದ ಬೀಗ ಒಡೆದು ಕಳ್ಳರು ಘಟಕಿನಕೆರೆ ಮೂಲದ ನಾಗರಾಜ್ ಎಂಬುವರ ಒಡೆತನಕ್ಕೆ ಸೇರಿದ ಗಂಗಾ ಟ್ರೇಡರ್ಸ್ ನ ಕಂಪೌಂಡ್ ಹಾಗೂ ಅಂಗಡಿ ಬಾಗಿಲು ಬೀಗ ಮುರಿದು 3645 ಕೆ.ಜಿ ತೂಕದ ಕೊಬ್ಬರಿಯನ್ನು ಕಳ್ಳತನ ಮಾಡಲಾಗಿದೆ. ಏಷಿಯಾ ಖಂಡದಲ್ಲಿಯೇ ದೊಡ್ಡ ಮಾರುಕಟ್ಟೆಯ ಕಾವಲುಗಾರರ ಕಣ್ ತಪ್ಪಿಸಿ ಕಳವು ಮಾಡಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದು.
ಮಾರುಕಟ್ಟೆಯಲ್ಲಿ ಭದ್ರತಾ ವೈಪಲ್ಯಕ್ಕೆ ಸಾಕ್ಷಿಯಾಗಿದೆ
ಬಲ್ಲಮೂಲಗಳ ಪ್ರಕಾರ, 4ಟನ್ ಕೊಬ್ಬರಿಯನ್ನ ಲಾರಿಯಲ್ಲಿ ತುಂಬಿ ಸಾಗಿಸಲಾಗಿದೆ ಇಷ್ಟೊಂದು ರಾಜಾರೋಷವಾಗಿ ಕಳ್ಳತನವಾಗಿರುವುದು, ಎಪಿಎಂಸಿ ಮಾರುಕಟ್ಟೆ ವೈಪಲ್ಯವನ್ನ ತೋರಿಸುತ್ತಿದ್ದು,
ಕಳ್ಳರು ಪೂರ್ವ ನಿಯೋಜಿತ ಸಂಚುರೂಪಿಸಿ ಕಳ್ಳತನ ಮಾಡಿದ್ದಾರೆ.
ಕದಿಯಲು ಬಂದ ಕಳ್ಳರು ಚಾಕು ಹಾಗೂ ಕಾರದ ಪುಡಿಯನ್ನು ತಂದಿದ್ದು, ಕಾರದಪುಡಿಯನ್ನು ಅಲ್ಲೇ ಚೆಲ್ಲಿ ಹೋಗಿದ್ದಾರೆ.
ಸ್ಥಳಕ್ಕೆ ಎಪಿಎಂಸಿ ಅಧಿಕಾರಿಗಳು,ತಿಪಟೂರು ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ ನಗರಠಾಣೆ ವೃತ್ತ ನಿರೀಕ್ಷಕ ವೆಂಕಟೇಶ್, ಸಬ್ ಇನ್ಪೆಕ್ಟರ್ ಕೃಷ್ಣಪ್ಪ ಭೇಟಿ ನೀಡಿದ್ದು,
ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದ್ದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳಲಾಗಿದ್ದು, ಸಿಸಿ ಕ್ಯಾಮರ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

ವರದಿ:ಮಂಜುನಾಥ್ ಹಾಲ್ಕುರಿಕೆ

ಜನವರಿ 10 ರಂದು ತಿಪಟೂರು ತಾಲ್ಲೋಕಿನ ರಂಗಾಪುರ ಗ್ರಾಮದ ಕವನ ಎನ್ನು ಸುಮಾರು 14 ಹುಡುಗಿ ಚಿಕಿತ್ಸೆಗಾಗಿ ವೈಭವಿ ಮಲ್ಟಿಸ್ಪೆಷಲಿಟಿ ಹಾಸ್ಪೆಟಲ್ ನಲ್ಲಿ ಬಹುಅಂಗಾಗ ವೈಪಲ್ಯ ಚಿಕಿತ್ಸೆಗೆ ಒಳಗಾಗಿದ್ದು, ಮಗುವಿಗೆ ನಮ್ಮ ಹಾಸ್ಪೆಟಲ್ ನಲ್ಲಿ ದೊರೆಯುವ ಎಲ್ಲಾ ಚಿಕಿತ್ಸೆ ಸಹ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಉನ್ನತ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚನೆ ನೀಡದ್ದು ಚಿಕಿತ್ಸೆಯಲ್ಲಿ ಯಾವುದೇ ಲೋಪವಾಗಿರುವುದಿಲ್ಲ, ಕೆಲಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ನಿರಾಧಾರವಾಗಿದ್ದು ದುರುದೇಶಪೂರಿತವಾಗಿದೆಎಂದು ವೈಭವಿ ಆಸ್ಪತ್ರೆ ವೈದ್ಯಾಧಿಕಾರಿ ಡಾ//ಮಧುಸೂಧನ್ ತಿಳಿಸಿದರು.

ತುಮಕೂರು ಜಿಲ್ಲೆ ತಿಪಟೂರು ನಗರದ ಭಾರತೀಯ ವೈದ್ಯಕೀಯ ಸಂಘದ ಆವರಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾಧ್ಯಮ ಘೋಷ್ಠಿ ಉದೇಶಿಸಿ ಮಾತನಾಡಿದ ಡಾ// ಮಧುಸೂಧನ್,ನಮ್ಮ ಹಾಸ್ಪೆಟಲ್ ಗೆ ಚಿಕಿತ್ಸೆಗಾಗಿ ಬಂದಿದ್ದ ಕವನ ಎನ್ನುವ ಸುಮಾರು 14 ವರ್ಷದ ಹುಡುಗಿ ಮೊದಲು ಶ್ರೀದೇವಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ, ವೈದ್ಯರ ಸೂಚನೆ ಮೇರೆಗೆ ವೈಭವಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಮಗು ನಮ್ಮ ಆಸ್ಪತ್ರೆಗೆ ದಾಖಲಿಸಿಕೊಂಡು ತುರ್ತು ಚಿಕಿತ್ಸೆ ಸಹ ,ನೀಡಲಾಗಿದೆ.ಮಗುವಿನ ನಾಡಿಮಿಡಿತ ಹಾಗೂ ತೀವ್ರ ಉಸಿರಾಟದತೊಂದರೆ,ತೊಂದರೆಗೆ ಒಳಗಾಗಿತ್ತು,ತಕ್ಷಣ ತುರ್ತುಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ಆಸ್ಪತ್ರೆಗೆ,ಕರೆದುಕೊಂಡು ಹೋಗಲು ಸೂಚಿಸಿದ್ದೇವು, ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗುವ ವೇಳೆ ಹುಡುಗಿ ಸಾವನ್ನಪ್ಪಿದೆ, ಆದರೆ ಕೆಲ ಮಾಧ್ಯಮಗಳು ನಮ್ಮ ಆಸ್ಪತ್ರೆಯಿಂದ ಸೂಕ್ತ ಚಿಕಿತ್ಸೆ ನೀಡದೆ ಕರ್ತವ್ಯ ಲೋಪವೆಸಗಲಾಗಿದೆ ಎಂದು ಸುಳ್ಳು ಸುದ್ದಿ ಮಾಡುತ್ತಿರುವುದು, ಸರಿಯಲ್ಲ, ಪ್ರಾಣಾಪಾಯದಲ್ಲಿ ಇದ್ದ ಹುಡುಗಿಗೆ ನಮ್ಮ ಶಕ್ತಿ ಮೀರಿ ತುರ್ತು ಚಿಕಿತ್ಸೆ ನೀಡಿದ್ದೇವೆ ಆದರೆ ಸುಳ್ಳು ಆರೋಪದ ಸುದ್ದಿ ನೋಡಿ, ನಮಗೆ ಆಘಾತವಾಗಿದೆ, ಪ್ರಾಮಾಣಿಕವಾಗಿ ಕೆಲಸ ಮಾಡುವವರ ಮೇಲೆ ಸುಳ್ಳು ಆರೋಪ ಮಾಡಿದರೆ,ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಮಾನಸಿಕ ಸ್ಥೈರ್ಯ ಕುಗಿಸುವ ಕೆಲಸವಾಗುತ್ತದೆ,ನಾನು ಆತ್ಮಸಾಕ್ಷಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ನಮ್ಮ ಆಸ್ಪತ್ರೆ ವಿರುದ್ದ ಯಾರಾದರೂ ಪೂರ್ವಾಗ್ರಹ ಪೀಡಿತರಾಗಿ, ದುರುದೇಶಪೂರಕವಾಗಿ ಅಪಪ್ರಚಾರ ಮಾಡಿದರೇ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದರು.
ಪತ್ರಿಕಾ ಘೋಷ್ಠಿಯಲ್ಲಿ ಉಪಸ್ಥಿತರಿದ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ//ರಾಮೇಗೌಡ ಮಾತನಾಡಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಮಗುವಿಗೆ,ತುರ್ತು ಚಿಕಿತ್ಸೆ ನೀಡಲಾಗಿದೆ ಆದರೆ ದುರುದೇಶ ಪೂರಕವಾಗಿ ಮಾಧ್ಯಮಗಳಲ್ಲಿ ನಿರಾಧಾರ ಆರೋಪಮಾಡಿ,ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದರೆ ವೈದ್ಯರು ತುರ್ತು ಸಂದರ್ಭಗಳಲ್ಲಿ ಹೇಗೆ ತಾವೇ ಧೈರ್ಯವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು,


ಕುಮಾರ್ ಅಸ್ಪತ್ರೆಯ ವೈದ್ಯಾಧಿಕಾರಿ ಡಾ//ಶ್ರೀಧರ್ ಮಾತನಾಡಿ ವೈದ್ಯರು ಸಹ ಮನುಷ್ಯರೇ ನಾವೇನು ದೇವರಲ್ಲ, ನಾವೂ ಪ್ರತಿಯೊಬ್ಬ ರೋಗಿಯನ್ನ ಬದುಕಿಸಬೇಕು ಎನ್ನುವ ಆಸೆಯಿಂದ ಚಿಕಿತ್ಸೆ ನೀಡುತ್ತೇವೆ,ಆದರೆ ನಮ್ಮ ಕೈಮೀರಿ ಸಾವು ನೋವುಗಳು ಸಂಭವಿಸಿದರೆ, ನಾವೇನು ಮಾಡಲು ಸಾಧ್ಯ,ವೈಭವಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡುವಾಗ ಮಗು ಸಂಪೂರ್ಣ ಅಸ್ವಸ್ಥಗೊಂಡಿದ್ದು ಬಹುಅಂಗಾಗ ವೈಪಲ್ಯಕ್ಕೆ ಒಳಗಾಗಿದ್ದ,ಮಗುವಿಗೆ ಆಸ್ಪತ್ರೆಯಲ್ಲಿ ಇರುವ ಎಲ್ಲಾಸೌಲಭ್ಯ ಬಳಸಿ ಚಿಕಿತ್ಸೆ ನೀಡಿದರು ಮಾಧ್ಯಮಗಳಲ್ಲಿ ಆರೋಪ ಮಾಡಿರುವುದು ಸರಿಯಲ್ಲ ಎಂದು ತಿಳಿಸಿದರು
ಡಾ//ವಿವೇಚನ್ ಮಾತನಾಡಿ ವೈಭವಿ ಆಸ್ಪತ್ರೆಯಲ್ಲಿ ಮಗುವಿಗೆ ಎಲ್ಲಾ ರೀತಿ ಚಿಕಿತ್ಸೆ ನೀಡಲಾಗಿದೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಕರ್ತವ್ಯ ಲೋಪವಾಗಿಲ್ಲ,ಎಂದು ತಿಳಿಸಿದರು
ಪತ್ರಿಕಾ ಘೋಷ್ಠಿಯಲ್ಲಿ ಉಪಸ್ಥಿತರಿದ ಸ್ತ್ರೀ ಹಾಗೂ ಪ್ರಸೂತಿ ತಜ್ಞ ವೈದ್ಯರಾದ ಡಾ//ರವಿ ಮಾತನಾಡಿ ತಿಪಟೂರಿನಿಂದ ಹಾಸನ ಆಸ್ಪತ್ರೆ ,ತುಮಕೂರು ಆಸ್ಪತ್ರೆ, ಬೆಂಗಳೂರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಅನೇಕ ರೋಗಿಗಳ ಪ್ರಾಣಹಾನಿಯಾಗಿರುವ ಉದಾಹರಣೆಗಳಿವೆ,ವೈಭವಿ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯವಿದ್ದು, ಮಕ್ಕಳಿಗೆ ಉತ್ತಮ ವೈದ್ಯಕೀಯ ಸೌಲಭ್ಯ ನೀಡಲಾಗುತ್ತಿದೆ,ಆದರೇ ಆಸ್ಪತ್ರೆಗೆ ಬರುವ ಮೊದಲೇ ರೋಗಿ ತೀವ್ರವಾದ ಕಾಯಿಲೆಗೆ ಒಳಗಾಗಿದರೆ ನಮ್ಮ ಅಸ್ಪತ್ರೆಯ ಸೌಲಭ್ಯಗಳು ಹಾಗೂ ವೈದ್ಯರು ಶಕ್ತಿಮೀರಿ ಪ್ರಯತ್ನಿಸಿದರು ಜೀವ ಉಳಿಸಲು ಸಾಧ್ಯವಾಗುವುದಿಲ್ಲ,ಎಂದು ತಿಳಿಸಿದರು
ಪತ್ರಿಕಾ ಘೋಷ್ಠಿಯಲ್ಲಿ ವೈದ್ಯರಾದ ಡಾ//ನಟರಾಜ್ ಡಾ//ಅನೀಲ್.ಡಾ//ಕಿರಣ್ ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು ನಗರದ ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಯಲ್ಲಿ ರಾತ್ರಿ ಸುಮಾರು 8ಗಂಟೆ ಸಮಯದಲ್ಲಿ ಹೂವಿನ ತೊಡಗಿದ, ತಿಪಟೂರು ನಗರದ ಕೋಟೆ ವಾಸಿ ಸಂತೋಷ್ ಉರುಫ್ ಸಂತು ಎನುವವನಿಗೆ ಚಾಕುವಿನಿಂದ ಇರಿಯಾಲಾಗಿದ್ದು, ಗಾಯಾಳು ಸಂತೋಷ್ ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾನೆ
ತಿಪಟೂರು ನಗರದ ಹಳೇಪಾಳ್ಯದ ತನ್ನ ಮಾವನ ಮನೆಯಲ್ಲಿ ವಾಸವಾಗಿದ್ದ ಆನಂದ ಹೂವು ತರಕಾರಿ ಮಾರುಕಟ್ಟೆಯಲ್ಲಿ ಹೂವಿನ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದ ಎನ್ನಲಾಗಿದ್ದು
ಸಂಜೆ ಬಾರ್ ನಲ್ಲಿ ಸಂತು ಮತ್ತು ಆನಂದ ಜೊತೆಯಾಗಿ ಎಣ್ಣೆ ಕುಡಿದಿದ್ದಾರೆ,ಎಣ್ಣೆ ಜಾಸ್ತಿಯಾಗಿ ಇಬ್ಬರ ನಡುವೆ ಜಗಳವಾಗಿದ್ದು, ಬಾರ್ ನಲ್ಲಿ ಜಗಳವಾಡಿಕೊಂಡ ಇಬ್ಬರನ್ನು ಬಾರ್ ನಿಂದ ಆಚೆಕಳಿಸಲಾಗಿದ್ದು,ಬಾರ್ ನಿಂದ ಬಂದ ಸಂತೋಷ್ ಹೂವು ಮತ್ತು ಹಣ್ಣು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದಾಗ ಅಂಗಡಿ ಬಳಿ ಬಂದ ಆನಂದ್ ಜಗಳ ತೆಗೆದು, ಸಂತೋಷ್ ಗೆ ಚಾಕುವಿನಿಂದ ಚುಚ್ಚಿದ್ದಾನೆ,ತಕ್ಷಣ ಸ್ಥಳೀಯರು ಸಂತೋಷ್ ನನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಸ್ಥಳಕ್ಕೆ ತಿಪಟೂರು ನಗರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ತನಿಖೆ ಕೈಗೊಳ್ಳಲಾಗಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು: ಕಾಂಗ್ರೇಸ್ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಜನವಿರೋಧಿ ಆಡಳಿತ ಭ್ರಷ್ಟಚಾರ ,ಸ್ವಜನ ಪಕ್ಷಪಾತ ಹಾಗೂ ಕೋಮುಮನಸ್ಥಿತಿಯಿಂದ ದೇಶ ಹಾಗೂ ರಾಜ್ಯದಲ್ಲಿ ಜನ ಬೇಸತ್ತಿದ್ದಾರೆ,ದೇಶಕ್ಕೆ ತೃತೀಯ ಶಕ್ತಿಯ ಅವಶ್ಯವಿದ್ದು, ಪರ್ಯಾಯ ರಾಜಕೀಯ ಪಕ್ಷ ಸ್ಥಾಪನೆಗೆ ,ಬಹುಜನ ಚಳುವಳಿ ,ದಲಿತಚಳುವಳಿರೈತ ಚಳುವಳಿ ಹಾಗೂ ಸಮಾನಮನಸ್ಕ ರಾಜಕೀಯ ಮುಖಂಡರು ಪರ್ಯಾಯ ಪಕ್ಷ ಸಂಘಟನೆಗೆ ಮುಂದಾಗಿದ್ದು ಸದ್ಯದಲ್ಲಿಯೇ ಹೊಸ ಪಕ್ಷ ಉದಯವಾಗಲಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹಾಗೂ ರಿಪಬ್ಲಕ್ ಪಾರ್ಟಿ ಅಫ್ ಇಂಡಿಯಾ(ಬಿ)ಅಧ್ಯಕ್ಷ ಡಾ//ಎನ್ ಮೂರ್ತಿ ತಿಳಿಸಿದರು.

ತುಮಕೂರು ಜಿಲ್ಲೆ ತಿಪಟೂರು ನಗರದ ಕಲ್ಪತರುಗ್ರಾಂಡ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾ ಸಾಹೇಬ್ ಎನ್.ಮೂರ್ತಿ ಸ್ಥಾಪಿತ ) ಹಾಗೂ ರಿಪಬ್ಲಿಕನ್ ಪಾರ್ಟಿ ಅಫ್ ಇಂಡಿಯಾ ವತಿಯಿಂದ ಆಯೋಜಿಸಿದ ಬಹುಜನರ ಸಮಸ್ಯೆಗಳ ನಿಷ್ಕರ್ಷೆ ಹಾಗೂ ಪುನಶ್ಚೇತನ ಹಾಗೂ ಜಿಲ್ಲಾಕಾರ್ಯಕಾರಿಣಿ ಸಭೆ ನಡೆಸಿ ನಂತರ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಡಾ//ಎನ್ .ಮೂರ್ತಿ ದೇಶದಲ್ಲಿ ನೈತಿಕ ರಾಜಕಾರಣ ನಾಶವಾಗಿದೆ, ಭ್ರಷ್ಟ ಹಾಗೂ ಕೋಮುವಾದಿ ರಾಜಕಾರಣ ಮೇಳೈದುತ್ತಿದ್ದು, ದೇಶದ ಜನ ಭ್ರಮನಿರಸಗೊಂಡಿದ್ದಾರೆ, ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಚಾರ,ಕೋಮುವಾದಿ,ಮನಸ್ಥಿತಿ ಹಾಗೂ ಜಾತಿರಾಜಕಾರಣಕಂಡು ಮುಂದಿನ ದಿನಗಳಲ್ಲಿ ದೇಶಕ್ಕೆ ಉತ್ತಮ ಭವಿಷ್ಯ ಸಿಗಬೇಕೆಂದರೆ, ಪರ್ಯಾರ ರಾಜಕೀಯ ಚಿಂತನೆ ಅಗತ್ಯವಿದೆ.ಬಹುಜನ ಚಳುವಳಿ ಮುಖಂಡರು, ದಲಿತಪರ ಚಳುವಳಿ ಮುಖಂಡರು, ರೈತ ಚಳುವಳಿ ಮುಖಂಡರು,ಹಾಗೂ ಕನ್ನಡಪರ ಸಂಘಟನೆಗಳು ಹಾಗೂ ಪ್ರಗತಿಪರ ಚಿಂತನೆಯುಳ್ಳ ರಾಜಕೀಯ ಮುಖಂಡರು ಸೇರಿ ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾಗಿದ್ದೇವೆ, ರಾಜ್ಯದ ಎಲ್ಲಾ ವಿಧಾನಸಭಾಕ್ಷೇತ್ರಗಳಲ್ಲೂ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇವೆ,ಮುಂದಿನ 2028ರ ವಿಧಾನ ಸಭೆ ಚುನಾವಣೆ ಒಳಗೆ ಸರ್ವಜನರ ಹಿತಬಯಸುವ ಹೊಸ ಪಕ್ಷ ಸ್ಥಾಪನೆಯಾಗಲಿದೆ.ಈಗಾಗಲೇ ಹೊಸ ಪಕ್ಷದ ಪ್ರನಾಳಿಕೆಗಳು ಸಿದ್ದಗೊಂಡಿದ್ದು, ಸರ್ವಜನರ ಹಿತಬಯಸುವ ಹೊಸ ಪಕ್ಷ ಸ್ಥಾಪನೆಯಾಗುತ್ತದೆ, ಎಂದ ಅವರು


ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ,ಜನರಲ್ಲಿ ಭಿತ್ತಿದ ಬರವಣೆಗಳು ಹುಸಿಯಾಗಿವೆ, ಕೇಂದ್ರ ಸರ್ಕಾರ ಭ್ರಷ್ಟಚಾರ ಕೋಮುವಾದಲ್ಲಿ ಮುಳುಗಿದೆ,ಚುನಾವಣಾ ಬಾಂಡ್ ಗಳ ಮೂಲಕ ನೂರಾರು ಕೋಟಿ ಹಣವನ್ನ ಭ್ರಷ್ಟಚಾರದ ಮೂಲಕ ಸಂಗ್ರಹಿಸಿದ್ದು, ಮೋದಿ ಸರ್ಕಾರದ ಪಾಪದ ಫಲವನ್ನ, ಸಾಮಾನ್ಯ,ಅನುಭವಿಸುವಂತ್ತಾಗಿದೆ,ಚುನಾವಣಾ ಬಂಡ್ ಮೂಲಕ ಹಣಪಡೆದ ಕೇಂದ್ರ ಸರ್ಕಾರ ಕಳಪೆ ಔಷಧಿ ಕಂಪನಿಗಳಿಗೆ ತಮ್ಮ ಬಳಿ ಇರುವ ಕಳಪೆ ಔಷದಿ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟ, ಪರಿಣಾಮ ಬಳ್ಳಾರಿ ಬಾಣಂತಿಯರ ಹಾಗೂ ಸೇರಿದಂತೆ ಅನೇಕ ಔಷಧಿಗಳು ಆಸ್ಪತ್ರೆಗಳ ಮೂಲಕ ಜನರ ಜೀವ ಹಿಂಡುತ್ತಿದೆ, ಅದೇ ರೀತಿ ಪಿಎಂ ಕೇರ್ ಫಂಡ್ ಸೇರಿದಂತೆ ಹಲವಾರು ಭ್ರಷ್ಟಚಾರಮಾಡುತ್ತಿದ್ದಾರೆ,ದೇಶದಲ್ಲಿ ಇಟ್ಟಿರುವ ಕಪ್ಪುಹಣ ವಾಪಾಸ್ ತರುವುದಾಗಿ ಹೇಳಿದ ಸರ್ಕಾರ, ನಯಾಫೈಸೆ ಕಪ್ಪುಹಣ ತಂದಿಲ್ಲ,ನಮ್ಮ ದೇಶದ ರಾಜಕಾರಣಿಗಳು,ಉದ್ಯಮಿಗಳ ಕಪ್ಪುಗಳ ಹೊರತಂದರೆ.ನಮ್ಮ ದೇಶ ಅಮೇರಿಕಾದ ನಾಲ್ಕುಪಟ್ಟು ಶ್ರೀಮಂತ ದೇಶವಾಗುತ್ತದೆ.ಬಿಜೆಪಿ ಕೋಮುವಾದಿ ಭ್ರಷ್ಟಚಾರ ಕಂಡು ಸಮಾಜವಾದಿ ಹಿನ್ನೆಲೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ,ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು, ಎಲ್ಲಾ ಸಮಾನಮನಸ್ಕರು ಹೋರಾಟ ಮಾಡಿದೆವು, ಆದರೆ ರಾಜ್ಯದಲ್ಲಿಯೋ ಸಹ ನೈತಿಕ ರಾಜಕಾರಣ ನಾಶವಾಗಿದ್ದು,ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ಗೋವಿಂದ ಮಾಡಿದ್ದಾರೆ,ಗ್ಯಾರಂಟಿ ಹೆಸರಿನಲ್ಲಿ ದಲಿತ ಹಿಂದುಳಿದವರ ಅಭಿವೃದ್ದಿಗೆ ಮೀಸಲಿಟ್ಟಿದ ಸಾವಿರಾರು ಕೋಟಿ ಹಣ ಬೇರೆ ಬೇರೆ ಅಭಿವೃದ್ದಿಗಳಿಗೆ ಬಳಸಿಕೊಂಡು,ದಲಿತರು ಹಿಂದುಳಿದವರನ್ನ ಬೀದಿಗೆ ತಳಿದ್ದಾರೆ.ಎಸ್ಸಿಪಿ,ಟಿಎಸ್ಪಿ ಹಣ ರಾಜ್ಯಸರ್ಕಾರ ಗುಳಂ ಮಾಡಿದೆ,ರಾಜ್ಯದಲ್ಲಿ ಬಿಜೆಪಿ ಕೋಮುವಾದಿ, ಕಾಂಗ್ರೇಸ್ ಮೃದುಕೋಮುವಾದಿ ,ಜೆಡಿಎಸ್ ಜಾತಿವಾದಿ ಇವುಗಳಿಗೆ ಪರ್ಯಾಯ ರಾಜಕೀಯಪಕ್ಷ ಅನಿವಾರ್ಯವಾಗಿದ್ದು ಹೊಸ ಪಕ್ಷ ಸ್ಥಾಪನೆ ಮಾಡುತ್ತೇವೆ ಎಂದ ಅವರು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದಂತೆ ಒಳಮೀಸಲಾತಿ ಜಾರಿಗೊಳಿಸುವ ನಾಟಕವಾದಿ ನ್ಯಾಯಮೂರ್ತಿ ನಾಗಮೋಹನ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ,2 ತಿಂಗಳಲ್ಲಿ ವರದಿಪಡೆದು ಒಳಮೀಸಲಾತಿ ಜಾರಿಮಾಡುವುದ್ದಾಗಿ ಹೇಳಿತ್ತು, ಆದರೆ,ಈಗ ಜಾತಿಗಣತಿ ದತ್ತಾಂಶ ಲಭ್ಯವಿಲ್ಲ ಎನ್ನುವ ಸಭೂಬುಹೇಳುತ್ತಿದೆ, ಸರ್ಕಾರ ಕೂಡಲೇ ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗದ ವರದಿ ಪಡೆದು, ಆಯೋಗದ ವರದಿಯಲ್ಲಿರುವ ದತ್ತಾಂಶವನ್ನ ನಾಗಮೋಹನ್ ದಾಸ್ ಆಯೋಗಕ್ಕೆ ನೀಡಿ, ನಾಗಮೋಹನ್ ದಾಸ್ ಆಯೋಗ ಪರಿಶೀಲನೆ ಮಾಡಿದ ನಂತರ ಶೀಘ್ರವಾಗಿ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು
ಪತ್ರಿಕಾಘೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಪಿ.ಎನ್ ರಾಮಯ್ಯ,ಜಿಲ್ಲಾ ಸಂಘಟನಾ ಸಂಚಾಲಕ ನಾಗ್ತಿಹಳ್ಳಿ ಕೃಷ್ಣಮೂರ್ತಿ,ಲಾಯರ್ ವೆಂಕಟೇಶ್,ಡಿಎಸ್ಎಸ್ ತಾಲ್ಲೋಕು ಅಧ್ಯಕ್ಷ ರಾಜು ಬೆಣ್ಣೆನಹಳ್ಳಿ, ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಕೊಪ್ಪ ಶಾಂತಪ್ಪ, ಡಿಎಸ್ಎಸ್ ಮುಖಂಡರಾದ ಕುಪ್ಪಾಳು ರಂಗಸ್ವಾಮಿ.ಚಿಗ್ಗಾವಿ ಪುಟ್ಟಸ್ವಾಮಿ,ಅಟ್ಟಯ್ಯ,ಮುಂತ್ತಾದವರು ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

ತುಮಕೂರು ಜಿಲ್ಲೆ ತುರುವೇಕೆರೆ ನಗರದಲ್ಲಿ ಆದಿಜಾಂಬವ ಮಹಾಸಭಾ ,ನೂತನ ಶಾಖೆಯನ್ನ ಉದ್ಘಾಟಿಸಲಾಯಿತು.ನಂತರ ಪ್ರಾಥಮಿಕ ಸಹಕಾರ ಸಂಘ ಮುನಿಯೂರು, ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾದ ರಂಗಸ್ವಾಮಿ ಮುನಿಯೂರು ಹಾಗೂ ಪ್ರಾಥಮಿಕ ಸಹಕಾರ ಸಂಘ ಮಾವಿನಹಳ್ಳಿ ಕ್ಷೇತ್ರದಿಂದ ಸದಸ್ಯರಾಗಿ ಆಯ್ಕೆಯಾದ ವಿಜಯ್ ಕುಮಾರ್ ರವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಆದಿ ಜಾಂಬವ ಮಹಾಸಭಾ ಅಧ್ಯಕ್ಷರಾದ ವಿ ಟಿ ವೆಂಕಟರಾಮಯ್ಯ ಉಪಾಧ್ಯಕ್ಷರಾದ ನಿವೃತ್ತ ಸಬ್ ಇನ್ಸ್ಪೆಕ್ಟರ್ ನಾಗರಾಜ, ಗೌರವಾಧ್ಯಕ್ಷರಾದ ರಾಮಕೃಷ್ಣಯ್ಯ ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಲಿ ಸದಸ್ಯ ಚಿದಾನಂದ್ ,ಬೋರಪ್ಪ ನಿವೃತ್ತ ಶಿಕ್ಷಕರು, ಡಾಕ್ಟರ್ ಚಂದ್ರು ಉಪನ್ಯಾಸಕರು ತೊರಮಾವಿನಹಳ್ಳಿ, ದ ಸಂ ಸ ಸಂಚಾಲಕರಾದ ಕುಮಾರ್ ಎಮ್, ಗುರುದತ್ತ, ಖಜಾಂಚಿ ಶಿವನಂಜಪ್ಪ ಮೇಲನಹಳ್ಳಿ ಮಂಜಣ್ಣ , ದ ಸಂ ಸ ರಾಮಚಂದ್ರ ಹೆಗ್ಗೆರೆ , ದ ಸಂಸ ಲಕ್ಷ್ಮಿಶ ದಂಡನ ಶಿವರ, ಪುಟ್ಟ ಯಲ್ಲಯ್ಯ, ರಂಗಸ್ವಾಮಿ, ಹರೀಶ್ ಮೇಲನಹಳ್ಳಿ, ತಮ್ಮಯ್ಯ ಬಿ ಪುರ, ಮುತ್ತುಗದಹಳ್ಳಿ ಶಿವಣ್ಣ, ಶಿವಣ್ಣ ನಿವೃತ್ತ ಉಪನ್ಯಾಸಕರು ಕೊಲ್ ಘಟ್ಟ, ರವಿಕುಮಾರ್ ತೋರಮಾವಿನಹಳ್ಳಿ, ಮತ್ತಿತರು ಉಪಸ್ಥಿತಿಯಲ್ಲಿದ್ದರು,

error: Content is protected !!