ತಿಪಟೂರಿನಲ್ಲಿ ಅದ್ದೂರಿಯಾಗಿ ನಡೆದ ತಾಲೂಕು ಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ

Spread the love

ತಿಪಟೂರು ನಗರದ ಕಲ್ಪತರು ಕಾಲೇಜು ಆಡಿಟೋರಿಯಂ ನಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಯಿತು

ಶಾಸಕ ಕೆ. ಷಡಕ್ಷರಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಶಾಸಕ ಕೆ. ಷಡಕ್ಷರಿ ರವರು ಕನ್ನಡ ಭಾಷೆಯನ್ನ ಉಳಿಸಿ ಬೆಳೆಸಬೇಕಾಗಿರುವುದು ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿ, ಕನ್ನಡ ಉಳಿಯಬೇಕೆಂದರೆ ನಮ್ಮ ಮನೆಗಳಲ್ಲಿ ಹೆಚ್ಚು ಹೆಚ್ಚಾಗಿ ಕನ್ನಡವನ್ನ ಬಳಸುವಂತಾಗಬೇಕು .ವ್ಯವಹಾರಿಕವಾಗಿ ಬೇರೆ ಭಾಷೆಗಳನ್ನ ಕಲಿಯುವುದು ತಪ್ಪಲ್ಲ ಆದರೆ ನಮ್ಮ ಭಾಷೆಯ ಬಗ್ಗೆ ಯಾವತ್ತೂ ಕೇಳಿರಿಮೆ ಹೊಂದಬಾರದು,ನಮ್ಮ ಭಾಷೆ ನಮಗೆ ತಾಯಿ ಇದ್ದ ಹಾಗೆ ನಮ್ಮ ತಾಯಿಯನ್ನು ನಾವೇ ಕೀಳಾಗಿ ಕಂಡರೆ ,ಆತ್ಮ ವಂಚನೆ ಮಾಡಿಕೊಂಡಂತೆ, ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುತ್ತಿರುವುದು ಉತ್ತಮ ಬೆಳವಣಿಗೆ, ಮಕ್ಕಳಲ್ಲಿ ಕನ್ನಡ ಕಲಿಕೆಯಲ್ಲಿನ ಉತ್ಸಾಹವನ್ನ ಪ್ರೋತ್ಸಾಹಿಸುವ ಕೆಲಸ ಮಾಡಬೇಕು .ನಾವು ಕನ್ನಡಿಗರಾಗಿ ನಮ್ಮ ಭಾಷೆಯ ಬಗ್ಗೆ ಹೆಮ್ಮೆಪಡುವಂತಿರಬೇಕು ನಮ್ಮ ಭಾಷೆಯನ್ನ ಪ್ರೀತಿಸೋಣ ಬೇರೆ ಭಾಷೆಗಳನ್ನ ಗೌರವಿಸೋಣ ,ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ತಿಪ್ಪೇಸ್ವಾಮಿ ಮಾತನಾಡಿ ಕನ್ನಡ ಭಾಷೆ ಎಲ್ಲಾ ಭಾಷೆಗಳಿಗೂ ಮಿಗಿಲಾದ ಮಾತೃ ಶಕ್ತಿಯನ್ನು ಹೊಂದಿದೆ, ನಾವು ಯಾವುದೇ ಕಾರಣಕ್ಕೂ ಕನ್ನಡದ ಬಗ್ಗೆ ಕೇಳಿಮೆಯನ್ನ ಹೊಂದಬಾರದು, ಕನ್ನಡದಲ್ಲಿ ಅಭ್ಯಾಸ ಮಾಡಿದರೆ ವಿದ್ಯಾರ್ಥಿಗಳು ಪಾಠ ಪ್ರವಚನಗಳ ಬಗ್ಗೆ ಉತ್ತಮವಾಗಿ ಮನನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷರಾದ ಶ್ರೀಮತಿ ಯಮುನಾ ಧರಣೇಶ್. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಸವರಾಜು, ತಹಶೀಲ್ದಾರ್ ಪವನ್ ಕುಮಾರ್ ,ಇಓ ಸುದರ್ಶನ್, ಉಪನ್ಯಾಸಕರಾದ ಶಿವಕುಮಾರ್,ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ,ಪ್ರಚಾರ್ಯರಾದ ಚನ್ನೆಗೌಡ. ಮುಂತಾದವರು ಉಪಸ್ಥಿತರಿದ್ದರು

ವರದಿ:ಮಂಜುನಾಥ್ ಹಾಲ್ಕುರಿಕೆ

Leave a Reply

Your email address will not be published. Required fields are marked *

error: Content is protected !!