ತಿಪಟೂರು ನಗರಸಭೆಗೆ ನೂತನವಾಗಿ ಐವರು ನಾಮನಿರ್ದೇಶಿತ ಸದಸ್ಯರನ್ನಾಗಿ ಸರ್ಕಾರ ಆದೇಶಹೊರಡಿಸಿದೆ.
ನೂತನ ನಾಮನಿರ್ದೇಶಿತ ಸದಸ್ಯರಾಗಿ ಲೋಕನಾಥ್ ಸಿಂಗ್,ಶಿವಪ್ರಸಾದ್,ಶ್ರೀಮತಿ ನಂದಿನಿ ತರಕಾರಿ ಕಿಟ್ಟಿ,ಗಾಂಧೀನಗರ ಇಮ್ರಾನ್,ಹಳೇಪಾಳ್ಯ ಧನಂಜಯ ಉರುಫ್ ರವಿ,ಇವರನ್ನು ಸರ್ಕಾರ ನಾಮನಿರ್ದೇಶಿತ ಸದಸ್ಯರನ್ನಾಗಿ ಆದೇಶಹೊರಡಿಸಿದೆ.
ಕಾಂಗ್ರೇಸ್ ಸರ್ಕಾರದ ಇರುವವರೆಗೆ ನಾಮನಿರ್ದೇಶಕ ಸದಸ್ಯರು ಮುಂದುವರೆಯಲಿದ್ದು, ನಾಮನಿರ್ದೇಶನಕ್ಕೆ ಸಹಕಾರ ನೀಡಿದ ಶಾಸಕ ಕೆ.ಷಡಕ್ಷರಿ ಮುಖಂಡರಾದ ನಿಖಿಲ್ ರಾಜಣ್ಣ ಸೇರಿದಂತೆ, ಬ್ಲಾಕ್ ಕಾಂಗ್ರೇಸ್,ನಗರಕಾಂಗ್ರೇಸ್ ಅಧ್ಯಕ್ಷರು ಸೇರಿದಂತೆ ಎಲ್ಲಾ ಮುಖಂಡರಿಗೂ ಅಭಿನಂದನೆ ಸಲ್ಲಿಸಿದ್ದಾರೆ
ಗುಬ್ಬಿ: ನಿಟ್ಟೂರು ಸಂಪಿಗೆ ಮಾರ್ಗದ ಗಂಗಾ ಕ್ಷೇತ್ರದ ಸಮೀಪ ನೆನ್ನೆ ತಡರಾತ್ರಿ ವೃದ್ಧೆಯೊಬ್ಬರು ರಸ್ತೆಯ ಮಧ್ಯದಲ್ಲಿ ಒಂಟಿಯಾಗಿ ಕುಳಿತು ಆತಂಕ ಮೂಡಿಸಿದ್ದರು. ಈ ಹಿನ್ನೆಲೆಯಲ್ಲಿ ಪತ್ರಕರ್ತ ಮತ್ತು ಸ್ಥಳೀಯ ಸಾರ್ವಜನಿಕರ ಸಹಕಾರದಿಂದ 112 ಪೋಲಿಸ್ ಸೇವೆಗೆ ಕರೆಮಾಡಿದ ಪರಿಣಾಮ ವೃದ್ಧೆಯು ಸಮೀಪದ ನಂದಿಹಳ್ಳಿ ಗ್ರಾಮಸ್ಥರಾಗಿದ್ದು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ವೃದ್ಧೆಯ ಮಗನು ತಿಳಿಸಿದ್ದಾರೆ ಅವರಿಗೆ ಪೋಲಿಸರಿಂದ ತಿಳುವಳಿಕೆ ನೀಡಿ ಅಂತಿಮವಾಗಿ ವೃದ್ಧೆಯನ್ನು ರಕ್ಷಿಸಿ ಮನೆಗೆ ಕಳಿಹಿಸಿ ಕೊಡಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ತಿಪಟೂರು ತಾಲ್ಲೋಕಿನ ಬಿದರೆಗುಡಿ ವಲಯದ ಗುಡಿಗೊಂಡನಹಳ್ಳಿ ಪ್ರೌಢ ಶಾಲೆಯ ಆವರಣದಲ್ಲಿ ಎಸ್ಎಸ್ಎಲ್ ಸಿ ಮಕ್ಕಳಿಗೆ ಮೂರು ತಿಂಗಳು ಮನೆಪಾಠ ಕಾರ್ಯಕ್ರಮಕ್ಕೆ ಯೋಜನಾಧಿಕಾರಿ ಉದಯ್ ಚಾಲನೆ ನೀಡಿದರು
ಗುಡಿಗೊಂಡನಹಳ್ಳಿ ಪ್ರೌಡಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಯೋಜನಾಧಿಕಾರಿ ಉದಯ್ ಯೋಜನೆಯ ಚಾಲನೆ ನೀಡಿದರು
ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಉದಯ್ ರವರು ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಜನಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನ ಹಮ್ಮಿಕೊಂಡಿದು, ಜನಮಂಗಳ, ಸುಜ್ಞಾನ ನಿಧಿ, ಜ್ಞಾನ ದೀಪ ಶಿಕ್ಷಕರ ಆಯ್ಕೆ, ಯೋಜನೆಯಿಂದ ಮಕ್ಕಳಿಗೆ ಪ್ರಯೋಜನವಾಗುತ್ತಿದೆ. ಪೋಷಕರು ತಮ್ಮ ಮಕ್ಕಳಿಗೆ,ಶಿಕ್ಷಣದ ಜೊತೆ ಸಂಸ್ಕೃತಿ, ಸಂಸ್ಕಾರ, ತಿಳಿಹೇಳಬೇಕು,ನಮ್ಮ ಯೋಜನೆಯ ತಂದೆ, ತಾಯಿಯರು ಪ್ರಗತಿ ನಿಧಿ ಪಡೆದು ಅತ್ತ್ಯುತ್ತಮ ಶಿಕ್ಷಣ ನೀಡುತ್ತಿದಾರೆ, ಯೋಜನೆಯಿಂದ ಎಸ್ಎಸ್ಎಲ್ ಸಿ ಮಕ್ಕಳು ಉತ್ತಮ ಫಲಿತಾಂಶ ಪಡೆಯಲು,ಮೂರು ತಿಂಗಳ ಮನೆಪಾಠ ಕಾರ್ಯಕ್ರಮ ಹಮ್ಮಿಕೊಂಡಿದು,ಎಲ್ಲಾ ಮಕ್ಕಳು ಉತ್ತಮ ಫಲಿತಾಂಶ ಪಡೆಯಿರಿ ಎಂದು ತಿಳಿಸಿದರು
.ಮುಖ್ಯೋಪಾಧ್ಯಾಯರಾದ ನಳಿನ ಮಕ್ಕಳು ಬೆಳಿಗ್ಗೆ ಬೇಗ ಎದ್ದು ಓದುವ ಬಗ್ಗೆ ತಿಳಿಸಿ ಮಕ್ಕಳಿಗೆ ಛಲ ಇರಬೇಕು. ಹಸಿವು ನಿದ್ರೆ ಬಿಟ್ಟು ಓದಿ ಉತ್ತಮ ಫಲಿತಾಂಶ ಬಂದರೆ ನಾವು ಧರ್ಮಸ್ಥಳಕ್ಕೆ ಮತ್ತು ಪೂಜ್ಯ ದಂಪತಿಗಳಿಗೆ ಅದೇ ನಮ್ಮ ಶಾಲೆಯ ಕೊಡುಗೆ ಆಗಬೇಕು ಎಂದು ತಿಳಿಸಿ
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಲ್ಲಿಕಾರ್ಜುನ, ಚರಣ್, ಚಿದಂಬರ , ಶಿವಪ್ರಸಾದ್ ಚಂದನ್ ಮೈಲಾರಪ್ಪ ಹಾಗೂ ಶಶಿಕಲಾ .ಸಮನ್ವಯಧಿಕಾರಿ ಪದ್ಮಾವತಿ ಎಂ.ಡಿ ಮೇಲ್ವಿಚಾರಕರಾದ ಅನಿತಾ ಸೇವಾಪ್ರತಿನಿಧಿ ವಿನೋದ .ಮುಂತ್ತಾದವರು ಉಪಸ್ಥಿತರಿದರು
ಫೈನಾನ್ಸ್ ,ಬ್ಯಾಂಕ್, ಸೇರಿದಂತೆ ಹಲವುಕಡೆ ಕೈ ಸಾಲಮಾಡಿಕೊಂಡಿದ ಅಡವೀಶ್ ಫೈನಾನ್ಸ್ ಗಳ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದು. ಮೃತ ಅಡವೀಶ್ ಮದುವೆಯಾಗಿದ್ದು 3 ವರ್ಷದ ಮಗು ಸಹ ಇದೆ. ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ತಿಪಟೂರು ನಗರಸಭೆ ಅಧ್ಯಕ್ಷೆ ಯಮುನಾಧರಣೇಶ್ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆ 2025-2026ನೇ ಸಾಲಿನ ಅಯವ್ಯಯ ಅಂದಾಜುಪಟ್ಟಿ ಪೂರ್ವಭಾವಿ ಸಭೆ ನಡೆಸಲಾಯಿತು .ಸಭೆಯಲ್ಲಿ ಪೌರಾಯುಕ್ತ ವಿಶ್ವೇಶ್ವರ ಬದರಗಡೆ,ಸೇರಿದಂತೆ ನಗರಸಭೆ ಅಧಿಕಾರಿಗಳು ಗೈರುಹಾಜರಾಗುವ ಮೂಲಕ, ಅಧ್ಯಕ್ಷೆ ಯಮುನಾ ಧರಣೇಶ್,ಉಪಾಧ್ಯಕ್ಷೆ ಮೇಘನಾ ಭೂಷಣ್ ಉತ್ಸಾಹಕ್ಕೆ ತಣ್ಣೀರು ಎರಚಿದಂತ್ತಾಯಿತು,
ಬಜೆಟ್ ಪೂರ್ವ ಸಭೆಯಲ್ಲಿ ನಗರದ ಉದ್ಯಮಿಗಳು,ಹೋಟೆಲ್ ಮಾಲೀಕರು,ಅಂಗಡಿಮುಂಗಟ್ಟುಗಳ,ಮಾಲೀಕರು, ವ್ಯಾಪಾರಸ್ಥರು,ನರ್ಸೀಂಗ್ ಹೋಮ್ ಮಾಲೀಕರು,ವಕೀಲರು,ನಗರದ ಸಂಘಸಂಸ್ಥೆಗಳು, ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದರು, ಸಭೆಯಲ್ಲಿ ಅಧಿಕಾರಿಗಳು ವರ್ತನೆಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತು. ನಗರದಲ್ಲಿ ಇರುವಂತ ಸಾರ್ವಜನಿಕರಿಗೆ ಅಗತ್ಯವಿರುವ ಮೂಲಸೌಕರ್ಯಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆಯುವುದು,ಅಭಿವೃದ್ದಿಗೆ ಪೂರಕವಾಗಿ ಅಗತ್ಯ ಕಾರ್ಯಕ್ರಮ ರೂಪಿಸಲು ಬಜೆಟ್ ಪೂರ್ವದಲ್ಲಿ ಸಭೆ ನಡೆಸಿ ಮಾಹಿತಿ ಸಂಗ್ರಹಿಸುವುದು ಹಿಂದಿನಿಂದಲೂ ವಾಡಿಕೆಯಂತೆ ನಡೆಯುತ್ತಾ ಬಂದಿದೆ. ಆದರೆ ಅಧಿಕಾರಿಗಳು ಮಾತ್ರ ಜವಾಬ್ದಾರಿ ಮೆರೆತರೆ ಎಂದು ಸಾರ್ವಜನಿಕರು ಪ್ರಶ್ನೆಮಾಡಿದರು ಸಭೆಯಲ್ಲಿ ಉಪಸ್ಥಿತರಿದ ಸಾರ್ವಜನಿಕರು ತಿಪಟೂರು ನಗರದಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿರುವ ಪುಟ್ ಪಾತ್ ತೆರವು ಮಾಡಬೇಕು, ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು,ಯುಜಿಡಿ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಲಹೆ ನೀಡಿದರು, ಸಾರ್ವಜನಿಕರಿದ ಮಾಹಿತಿ ಪಡೆದ ಅಧ್ಯಕ್ಷರು ಅಧಿಕಾರಿಗಳೊಂದಿಗೆ ಚರ್ಚಿಸಿ,ಸೂಕ್ತಬರವಸೆ ನೀಡಿದರು. ಸಭೆಯಲ್ಲಿ ನಗರಸಭೆ ಸದಸ್ಯರು ಉಪಸ್ಥಿತರಿದರು
ತಿಪಟೂರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಕಚೇರಿಮೇಲೆ ಲೋಕಾಯುಕ್ತ ಚಿತ್ರದುರ್ಗ ಡಿವೈಎಸ್ಪಿ ಮೃತ್ಯಂಜಯ,ಇನ್ಪೆಕ್ಟರ್,ಗುರುಬವರಾಜು.ತುಮಕೂರು ಇನ್ಪೆಕ್ಟರ್ ಸಲೀಂ, ಸಿಬ್ಬಂದಿಗಳಾದ ,ತಿಪ್ಪೆಸ್ವಾಮಿ. ಮಾರುತಿ ಲೋಕಾಯುಕ್ತ ತಂಡ ಎಆರ್ ಟಿಓ ಅಧಿಕಾರಿಗಳ ಡ್ರಿಲ್ ನಡೆಸಿದ್ದಾರೆ.
ಬೆಳಗ್ಗೆಯಿಂದಲೇ ಕಾರ್ಯಚರಣೆಗಿಳಿದ ಲೋಕಾಯುಕ್ತ ತಂಡಕ್ಕೆ ಹಲವಾರು ಮಹತ್ವದ ದಾಖಲೆಗಳು ಲಭ್ಯವಾಗಿವೆ
ತಿಪಟೂರು ಎಆರ್ ಟಿಒ ಕಚೇರಿಯಲ್ಲಿ ಭಾರೀ ಪ್ರಮಾಣದ ಭ್ರಷ್ಠಚಾರದ ದೂರುಗಳಿದ್ದು ಸಾರ್ವಜನಿಕರ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿನಡೆಸಿದ್ದಾರೆ.
ತಿಪಟೂರು ಎಆರ್ ಟಿಒ ಭಗವಾನ್ ದಾಸ್ ಹಾಗೂ ಎಆರ್ ಟಿಒ ಇನ್ಪೆಕ್ಟರ್ ನಂದೀಶ್ ರವರಿಗೆ ಲೋಕಾಯುಕ್ತರು ಪ್ರಶ್ನೆಗಳ ಸುರಿಮಳೆಗೈದಿದ್ದು ಹಲವಾರು ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ
ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿಯ ಮಣಕೀಕೆರೆ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ರವೀಶ್ ಅವಿರೋಧ ಆಯ್ಕೆಯಾದರು.
ಮಾಜಿ ತಾಪಂ ಸದಸ್ಯ ಎಂ.ಡಿ ರವಿಕುಮಾರ್,ಗ್ರಾಪಂ ಮಾಜಿ ಅಧ್ಯಕ್ಷ ಎಂ.ಡಿ ಮಂಜುನಾಥ್ ಅಧ್ಯಕ್ಷೆ ಗಂಗಮ್ಮ,ಸದಸ್ಯ ಎಂ.ಡಿ. ಮಂಜುನಾಥ್,ನಿಕಟಪೂರ್ವ ಉಪಾಧ್ಯಕ್ಷೆ ಮೀನಾಕ್ಷಮ್ಮ,ಪಿಡಿಓ ಗೋಪಾಲ್,ಕಾರ್ಯದರ್ಶಿ ಪ್ರಕಾಶ್ ಮತ್ತು ಬಿಲ್ ಕಲೆಕ್ಟರ್ ಜಯಣ್ಣ ಸೇರಿದಂತೆ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಹಾಜರಿದರು.
ತಿಪಟೂರು: ಪ್ರತಿಯೊಂದು ಕಾನೂನನ್ನು ಪಾಲಿಸುವದರ ಜೊತೆಗೆ ಗೌರವಿಸಬೇಕು ಕೊನೆಯವರೆಗೂ ಕೋಟು ಧರಿಸಿವ ಏಕೈಕ ವೃತ್ತಿ ವಕೀಲ ವೃತ್ತಿ ಈ ವೃತ್ತಿಯಲ್ಲಿ ಹೆಸರುಮಾಡಿದಾಗ ಹಣವೂ ತಾನಾಗಿಯೇ ಬರುತ್ತದೆ ಎಂದು ತಿಪಟೂರು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಬಿ ಎಸ್ ಅಜಯ್ ರವರು ತಾಲ್ಲೂಕಿನ ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜುವತಿಯಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣ ವಹಿಸಿ ಮಾತನಾಡಿದರು. ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಶ್ರೀ ಬಿ. ಮಲ್ಲಿಕಾರ್ಜುನಯ್ಯ ಮಾತನಾಡಿ ಶಿಕ್ಷಣವನ್ನು ನಾವು ಕಲಿಯುತ್ತಿದ್ದೇವೆ ಆದರೆ ಸಾಮಾಜಿಕ ಸಮಸ್ಯೆಗಳು ಎದುರಾದಾಗ ಮರೆಮಾಚುತಿದ್ದೇವೆ ನಮ್ಮ ಸಮಾಜವನ್ನು ನಾವು ಗಮನಿಸಬೇಕು ಆಗ ನಮಗೆ ಸಂವಿಧಾನದ ಅನ್ವಯ ಅರಿವಾಗುತ್ತದೆ ಸಂವಿಧಾನದ ಪಿಠೀಕೆಯಂತೆ ಬದುಕೋಣ ಎಂದರು, ಮತ್ತೊರ್ವ ಪ್ಯಾನೆಲ್ ವಕೀಲರಾದ ಬಿ. ಪಿ ರಾಜೇಂದ್ರ ಪ್ರಸಾದ್ ಮಾತನಾಡಿ ದೇಶದ ಯಾವುದೇ ಉನ್ನತ ಮಟ್ಟದ ಹುದ್ದೆ ಏರಲು ಸಂವಿಧಾನ ಅವಕಾಶ ಕಲ್ಪಿಸಿದೆ ಸಂವಿಧಾನ ಮಾರ್ಪಾಡು ಮಾಡಲಷ್ಟೇ ಅವಕಾಶವಿದೆ ಆದರೆ ಮೂಲ ಸಂರಚನೆ ಬದಲಸಿಲು ಅವಕಾಶವಿಲ್ಲ ಅಂದಿನಿಂದ ಇಂದಿನವರೆಗೂ ತನ್ನ ಬಾಹುಗಳಿಂದ ನಮ್ಮನ್ನು ಕಾಪಾಡುತ್ತಿದೆ ಸಂವಿಧಾನದ ಕಾರ್ಯ ವೈಖರಿ ನಿಂತ ನೀರಲ್ಲ ಸದಾ ಹರಿಯುವ ನೀರು ಎಂದರು. ಮತ್ತೋರ್ವ ಪ್ಯಾನಲ್ ವಕೀಲರಾದ ಎಂ .ಸಿ. ನಟರಾಜ್ ಮಾತನಾಡಿ ಡಾ. ಬಿ. ಆರ್. ಅಂಬೇಡ್ಕರ್ ಅವರ ದೂರದೃಷ್ಟಿಗಳನ್ನು ಇಂದು ಮತದಾರರು ಅನರ್ಹರಿಗೆ ಕಾನೂನು ತಿದ್ದುಪಡಿ ಮಾಡುವ ಅವಕಾಶ ಕಲ್ಪಿಸುತ್ತಿರುವುದು ದುರದೃಷ್ಟಕರ ಮಹಿಳಾ ಶೋಷಣೆಗಳು ಎಂದು ಹೇಳಿ ಹೇಳಿ ಶೋಷಣೆಗಳು ಹೆಚ್ಚಾಗುತ್ತಿದೆ ಶೋಷಣೆಯನ್ನು ಕುರಿತು ಆಚರಿಸುವ ಬದಲು ನಿರ್ಮೂಲನೆ ಮಾಡಬೇಕು ಇಲ್ಲದಿದ್ದರೆ ಪರೋಕ್ಷವಾಗಿ ಪ್ರೇರಣೆ ನೀಡಿದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು, ಇಂದು ವಕೀಲ ವೃತ್ತಿಗೆ ಬೇಡಿಕೆ ಹೆಚ್ಚುತ್ತಿದೆ ಸಾಮಾಜಿಕವಾಗಿ ಮತ್ತು ನೈತಿಕವಾಗಿ ಬದಲಾವಣೆ ಮಾಡುವ ಪ್ರೇರಣೆಯಿಂದ ಇಂದಿನ ಯುವ ಪೀಳಿಗೆ ಕಾನೂನು ಪದವಿಯನ್ನು ಆಯ್ಕೆ ಮಾಡುತ್ತಿದ್ದಾರೆ ಅದಕ್ಕೆ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಮುಕ್ತವಾದ ಅವಕಾಶಗಳು ಇವೆ, ಕಾನೂನು ಪದವಿಯನ್ನು ಪಡೆದ ಬಳಿಕ ಕಾಯುವ ಅಗತ್ಯವಿಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಮೂಲಕ ತ್ವರಿತವಾಗಿ ನ್ಯಾಯಾಧೀಶರಾಗುವ ಅವಕಾಶವಿದೆ ಹಾಗೂ ಖಾಸಗಿ ಕಂಪನಿಗಳಲ್ಲಿ ಕಾನೂನು ಪದವಿಯ ಉದ್ಯೋಗಕ್ಕೆ ವಿಫುಲವಾದ ಬೇಡಿಕೆ ಇದೆ ಎಂದು ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯದ ಬಗ್ಗೆ ಮಾಹಿತಿ ನೀಡಿದರು. ಸಂವಿಧಾನದ ಪ್ರಸ್ತಾವನೆಯನ್ನು ಸಂಕಲ್ಪ ಮಾಡುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ತಿಪಟೂರು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಬಿ ಎಸ್ ಅಜಯ್, ಕಾರ್ಯದರ್ಶಿಗಳಾದ ಶ್ರೀ ಬಿ ಮಲ್ಲಿಕಾರ್ಜುನಯ್ಯ, ಪ್ಯಾನಲ್ ವಕೀಲರಾದ ಬಿ ಪಿ ರಾಜೇಂದ್ರ ಪ್ರಸಾದ್, ಪ್ಯಾನಲ್ ವಕೀಲರಾದ ಎಂ ಸಿ ನಟರಾಜ್, ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜಿನ ಪ್ರಾಂಶುಪಾಲರಾದ ವಿನಿತಾ ಪಿ ಕೆ , ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು ಮತ್ತು ಕಾಲೇಜು ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತಿಪಟೂರು ನಗರದ ಆಡಳಿತ ಸೌಧದದ ಸಭಾಂಗಣದಲ್ಲಿ ತಾಲ್ಲೋಕು ಆಡಳಿತ ಮತ್ತು ಸಮಾಜಕಲ್ಯಾಣ ಇಲಾಖೆ ಯಿಂದ ಸಂವಿಧಾನ ದಿನ ಆಚರಿಸಲಾಯಿತು
ತಿಪಟೂರ್ ಉಪವಿಭಾಗಧಿಕಾರಿ ಶ್ರೀಮತಿ ಸಪ್ತಶ್ರೀ. ಜ್ಯೋತಿ ಬೆಳಗಿಸಿ,ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪವಿಭಾಗಾಧಿಕಾರಿಗಳು,ನಮ್ಮ ಸಂವಿಧಾನ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಆಶಯಹೊಂದಿಗೆ, ನಮ್ಮದು ಪ್ರಪಂಚದಲ್ಲಿಯೇ ಲಿಖಿತಸಂವಿಧಾನ, ಶ್ರೇಷ್ಠ ಶ್ರೇಷ್ಠ ಸಂವಿಧಾನವಾಗಿದೆ, ನಾವೇಲರೂ ದೇಶದ ಸಂವಿಧಾನ ಕಾನೂನು ಗೌರವಿಸಬೇಕು,ಸಂವಿಧಾನಕ್ಕೆ ತಕ್ಕಂತೆ ನಡೆಯಬೇಕು,ಕಾನೂನಿಗೆ ನಾವು ಗೌರವಿಸಿದರೆ ಕಾನೂನು ನಮ್ಮನು ಗೌರವಿಸುತ್ತದೆ ಎಂದು ತಿಳಿಸಿದರು.
ತಾಲ್ಲೋಕು ಪಂಚಾಯತ್ ಇ .ಓ ಸುದರ್ಶನ್. ತಹಸೀಲ್ದಾರ್ ಪವನಕುಮಾರ್. ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ತ್ರಿವೇಣಿ,ಮುಖಂಡರಾದ ಬಜಗೂರು ಮಂಜುನಾಥ್,ನಾಗ್ತೀಹಳ್ಳಿ ಕೃಷ್ಣಮೂರ್ತಿ, ಕುಪ್ಪಾಳು ರಂಗಸ್ವಾಮಿ.ಟಿ.ಕೆ ಕುಮಾರ್.ಬಿಳಿಗೆರೆ ಚಂದ್ರಶೇಖರ್ ಈಚನೂರು ಸೋಮಶೇಖರ್,ಕಂಚಾಘಟ್ಟ ಸುರೇಶ್ ಶಿವಕುಮಾರ್ , ಉಪನ್ಯಾಸಕ ಪ್ರಕಾಶ್ ಮುಂತ್ತಾದವರು ಉಪಸ್ಥಿತರಿದರು
ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು, ಜಿಲ್ಲಾಪಂಚಾಯ್ತಿ ತುಮಕೂರು, ಜಿಲ್ಲಾಡಳಿತ ತುಮಕೂರು ಮಹಾನಗರಪಾಲಿಕೆ ತುಮಕೂರು ಸಹಯೋಗದಲ್ಲಿ ನಗರದ ಮಹತ್ಮ ಗಾಂಧಿ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ ಅದ್ದೂರಿಯಾಗಿ ನಡೆಯಿತು.
ಗೃಹಸಚಿವ ಜಿ.ಪರಮೇಶ್ವರ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ಕಬ್ಬಡಿ ಪಂದ್ಯಾವಳಿಗೆ ಚಾಲನೆ ನೀಡಿದರು
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಾನಗರಪಾಲಿಕೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಸಹಯೋಗದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಪತ್ರಕರ್ತರ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಕ್ರೀಡೆ ಮನುಷ್ಯನ ಆರೋಗ್ಯಕ್ಕೆ ಉತ್ತಮ ಸಾಧನ. ಹಾಗಾಗಿ ಸದಾ ಒತ್ತಡದ ಕಾರ್ಯನಿರ್ವಹಿಸುವ ಪತ್ರಕರ್ತರು ದೈಹಿಕ ಮತ್ತು ಮಾನಸಿಕ ನೆಮ್ಮದಿಗಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅವಶ್ಯಕ ಎಂದರು.
ಲೇಖನಿ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿರುವ ಪತ್ರಕರ್ತರು ಉತ್ತಮ ಬರವಣಿಗೆ ಮುಖೇನ ಸಮಾಜದ ಮೇಲೆ ಪರಿಣಾಮ ಬೀರುವ ಅವಲೋಕನದಲ್ಲಿರಬೇಕು ಎಂದು ಸಲಹೆ ಮಾಡಿದರು.
ನಮ್ಮ ಜಿಲ್ಲೆಗೆ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜನೆಯ ಜವಾಬ್ದಾರಿಯನ್ನು ಕೊಟ್ಟಿದ್ದು, ಈ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಪತ್ರಕರ್ತರು ಆಗಮಿಸಿ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ತುಮಕೂರಿನಲ್ಲಿ 58 ಕೋಟಿ ರೂ.ಖರ್ಚು ಮಾಡಿ ಸುಸಜ್ಜಿತವಾಗಿ ಕ್ರೀಡಾಂಗಣ ನಿರ್ಮಿಸಲಾಗಿದೆ. ಅಥ್ಲೆಟಿಕ್, ಕಬ್ಬಡ್ಡಿ, ಖೋಖೋ ಸೇರಿದಂತೆ ಮುಂತಾದ ಕ್ರೀಡೆಗಳನ್ನು ಜಿಲ್ಲೆಯ ಕ್ರೀಡಾಪಟುಗಳು ಪ್ರತಿನಿಧಿಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಕ್ರೀಡೆಗೆ ಪೆÇ್ರೀತ್ಸಾಹ ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಕ್ರೀಡೆಗಳನ್ನು ಪೆÇ್ರೀತ್ಸಾಹಿಸುವ ಕೆಲಸ ಆಗಬೇಕಾಗಿದೆ ಎಂದರು.
ರಾಜ್ಯಮಟ್ಟದಲ್ಲಿ ಕ್ರೀಡಾಕೂಟ ಯಶಸ್ವಿಯಾಗಲಿ ನಡೆಯಲಿ ಎಂದು ಆಶಿಸಿದ ಅವರು, ಜನವರಿಯಲ್ಲಿ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಆಯೋಜಿಸಲಾಗುತ್ತಿದೆ. ಎಲ್ಲರೂ ಒಗ್ಗೂಡಿ ಸಮ್ಮೇಳನವನ್ನು ಯಶಸ್ವಿಗೊಳಿಸಲು ಶ್ರಮ ವಹಿಸೋಣ ಎಂದರು.
.
ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ಮಾತನಾಡಿ ಪತ್ರಕರ್ತರ ಆರೋಗ್ಯ ರಕ್ಷಣೆ ಕಡೆ ಹೆಚ್ವು ಗಮನಕೊಡಬೇಕು, ಸದಾ ಒತ್ತಡದಲ್ಲಿ ಕೆಲಸ ಮಾಡುವ ನೀವೂ ದೈಹಿಕ ಮಾನಸಿಕ ಆರೋಗ್ಯಕ್ಕೆ ಒತ್ತುನೀಡಿ, ಕ್ರೀಡೆಗಳು ದೈಹಿಕ ಆರೋಗ್ಯ ರಕ್ಷಣೆ ಜೋತೆ ಮಾನಸಿಕ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ತುಮಕೂರಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಹಾಗೂ ರಾಜ್ಯಪತ್ರಕರ್ತರ ಸಮ್ಮೇಳನ ನಡೆಯುತ್ತಿರುವುದು ಸಂತೋಷದ ವಿಚಾರ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಪ್ರಭಾಕರ್, ತುಮಕೂರು ಶಾಸಕ ಬಿ.ಜಿ ಜ್ಯೋತಿಗಣೇಶ್, ಚಿದನಂದಗೌಡ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು.ತುಮಕೂರು ಜಿಲ್ಲಾಧಿಕಾರಿ ಶುಭಾಕಲ್ಯಾಣ್. ಆಯುಕ್ತರಾದ ಶ್ರೀಮತಿ ಅಶ್ವೀಜ,ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ ಪುರುಷೋತ್ತಮ್ ,ಹಿರಿಯ ಪತ್ರಕರ್ತ ಪ್ರಜಾಪ್ರಗತಿ ನಾಗಣ್ಣ, ಗೃಹಸಚಿವರ ಕರ್ತವ್ಯಧಿಕಾರಿ ನಾಗಣ್ಣ ಮುಂತ್ತಾದವರು ಉಪಸ್ಥಿತರಿದರು