ತಿಪಟೂರು ತಾಲ್ಲೋಕು ಆಡಳಿತದಿಂದ ಶ್ರೀಗುರುಸಿದ್ದರಾಮೇಶ್ವರರ852 ಜಯಂತಿ ಆಚರಣೆ

Spread the love

ತಿಪಟೂರು ನಗರದ ತಾಲ್ಲೊಕು ಆಡಳಿತ ಸೌಧದ ಆವರಣದಲ್ಲಿ ಶ್ರೀಶ್ರೀಗುರುಸಿದ್ದರಾಮೇಶ್ವರರ 852ನೇ ಜಯಂತಿಯನ್ನ ತಾಲ್ಲೋಕು ಆಡಳಿತದಿಂದ ಆಚರಿಸಲಾಯಿತು

ತಹಸೀಲ್ದಾರ್ ಪವನ್ ಕುಮಾರ್ ಶ್ರೀಶ್ರೀ ಗುರು ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಚಾಲನೆ ನೀಡಿದರು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು ಶ್ರೀಸಿದ್ದರಾಮೇಶ್ವರರು ತಮ್ಮ ಕಾಯಕದ ಮೂಲಕ ಕಾಯಕ ಯೋಗಿಯಾಗಿ ಭಕ್ತರ ಮನಸ್ಸಿನಲ್ಲಿ ನೆಲೆಸಿರುವ ನಿಜ ಶರಣರು,ನಾಡಿನಾದ್ಯಂತ ಸಂಚರಿಸಿ ಕೆರೆಕಟ್ಟೆ ಕಲ್ಯಾಣಿಗಳ ನಿರ್ಮಾಣ ಜಲಮೂಲಗಳ ರಕ್ಷಣೆ, ಮರಗಿಡಗಳ ಬೆಳೆಸಿ, ಗುಡಿಗುಂಡಾರ ಗುಂಡುತೋಪುಗಳ ನಿರ್ಮಾಣ ಮಾಡಿ ಕಾಯಕದ ಮೂಲಕ ದೇವರನ್ನ ಕಾಣಬೇಕು,ಎನ್ನುವ ತತ್ವ ಸಾರಿದ್ದಾರೆ,ಮಹಾರಾಷ್ಟ್ರದ ಸೊನ್ನಲಿಗೆಯಲ್ಲಿ ಜನಿಸಿ,ಅಲ್ಲಮಪ್ರಭುಗಳಿಂದ ಲಿಂಗದೀಕ್ಷೆಪಡೆದರು.ಭಕ್ತರ ಉದ್ದಾರಕ್ಕಾಗಿ ರಾಜ್ಯದಾದ್ಯಂತ ಸಂಚಾರಮಾಡಿ,ಭಕ್ತಕೋಟಿ ಉದ್ದಾರ ಮಾಡಿದ್ದಾರೆ,ಶ್ರೀಸಿದ್ದರಾಮೇಶ್ವರರ ಕಾಯಕ ನಿಷ್ಠೆಯನ್ನ ಎಲ್ಲರೂ ಅನುಸರಿಸಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಗ್ರೇಡ್ 2ತಹಸೀಲ್ದಾರ್ ಜಗನ್ನಾಥ್ ಸಿರಸ್ತೇದಾರ್ ರವಿಕುಮಾರ್,ರಂಗಪ್ಪ

ವರದಿ :ಮಂಜುನಾಥ್ ಹಾಲ್ಕುರಿಕೆ

Leave a Reply

Your email address will not be published. Required fields are marked *

error: Content is protected !!