ತುಮಕೂರಿನಲ್ಲಿ ಭರ್ಜರಿಯಾಗಿ ನಡೆದ ಜಿಲ್ಲಾ ಮಟ್ಟದ ಪತ್ರಕರ್ತರ ಕ್ರೀಡಾಕೂಟ

Spread the love

ತುಮಕೂರಿನಲ್ಲಿ ನವಂಬರ್ 24 ರಂದು ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಮಹೋತ್ಸವ ಕ್ರೀಡಾಕೂಟದ ಅಂಗವಾಗಿ ತುಮಕೂರು ನಗರದ ಮಹತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ ನಡೆಸಿ,ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಕ್ರೀಡಾಪಟುಗಳನ್ನ ಆಯ್ಕೆ ಮಾಡಲಾಯಿತು.

ಮಹತ್ಮಗಾಂಧೀ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ . ಚಾಲನೆ ನೀಡಿದರು

ಕ್ರೀಡಾಪಟುಗಳನ್ನ ಉದೇಶಿಸಿ ಮಾತನಾಡಿದ ಅವರು ಸದಾ ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರು ಆರೋಗ್ಯದ ಕಡೆ ಗಮನಹರಿಸಬೇಕು.
ಕ್ರೀಡೆ ಮನುಷ್ಯನ ಆರೋಗ್ಯವನ್ನ ಉತ್ತಮವಾಗಿ ಇಡುತ್ತದೆ, ಪೊಲೀಸ್ ಕ್ರೀಡಾ ಕೂಟಗಳಲ್ಲಿ ಪತ್ರಕರ್ತರು ನಮ್ಮ ಜೊತೆಗಿರುತ್ತೀರಿ, ಪತ್ರಕರ್ತರ ಕ್ರೀಡಾಕೂಟದಲ್ಲಿ ಪೊಲೀಸರು ನಿಮ್ಮ ಜೊತೆಗಿದ್ದೇವೆ,ಸಮಾಜದಲ್ಲಿ ಉತ್ತಮ ಕೆಲಸಗಳಿಗೆ, ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ತಿಳಿಸಿದರು
ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ನಾಗಣ್ಣ ಮಾತನಾಡಿ ಸದಾ ಬ್ರೇಕಿಂಗ್ ಬ್ರೇಕಿಂಗ್ ಒತ್ತಡದ ನಡುವೆ ಪತ್ರಕರ್ತರು ಕ್ರೀಡಾಕೂಟ ನಡೆಸುತ್ತಿರುವುದು,ಸಂತೋಷದಾಯಕ ಬೆಳವಣಿಗೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ//ತಿಪ್ಪೆರುದ್ರಪ್ಪ.ಪ್ರಜಾಪ್ರಗತಿ ಸಂಪಾದಕರಾದ ಎಸ್ ನಾಗಣ್ಣ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ ಪುರುಷೋತ್ತಮ್ . ರಾಷ್ಟ್ರೀಯ ಸಮಿತಿ ಸದಸ್ಯರಾದ ಶಾಂತರಾಜು.ಕಾರ್ಯದರ್ಶಿ ಸತೀಶ್.ಟಿ.ಇ ರಘುರಾಮ್ ಮುಂತ್ತಾದವರು ಉಪಸ್ಥಿತರಿದರು

ವರದಿ: ಮಂಜುನಾಥ್ ಹಾಲ್ಕುರಿಕೆ

Leave a Reply

Your email address will not be published. Required fields are marked *

error: Content is protected !!