ರಾಷ್ಟ್ರೀಯ ಹೊನಲು ಬೆಳಕಿನ ವಾಲಿಬಾಲ್ ಕ್ರೀಡಾಕೂಟದ ಸನ್ಮಾನ ಸಮಾರಂಭ ಉದ್ಘಾಟಿಸಿ ರಾಜ್ಯ ಖೋಖೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ್

Spread the love

ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೊನಲು ಬೆಳಕಿನ ಪುರುಷರ ಹಾಗೂ ಮಹಿಳೆಯರ ವಾಲಿಬಾಲ್ ಕ್ರೀಡಾಕೂಟ ರೋಚಕವಾಗಿ ನಡೆಯುತ್ತಿದ್ದು,ನಡೆಯುತ್ತಿದ್ದು ಕ್ರೀಡಾಸಕ್ತರಿಗೆ ರಸದೌತಣ ನೀಡುತ್ತಿರುವ,ಕ್ರೀಡಾಕೂಟದ 2ನೇ ದಿನದ ಸನ್ಮಾನ ಕಾರ್ಯಕ್ರಮವನ್ನ ರಾಜ್ಯ ಖೋಖೋ ಫೆಡರೇಷನ್ ಅಧ್ಯಕ್ಷ ಬಿಜೆಪಿ ಮುಖಂಡ ಲೋಕೇಶ್ವರ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.


ಕಾರ್ಯಕ್ರಮದಲ್ಲಿ ಪುಲ್ವಾಮಾ ದಾಳಿ ಹುತಾತ್ಮ ಯೋಧರ ಸ್ಮರಣಾರ್ಥ ಮೌನಾಚರಣೆ ನಡೆಸಿ, ಇಂಡಿಯನ್ ಆರ್ಮಿ ವಾಲಿಬಾಲ್ ತಂಡದ ಸದಸ್ಯರನ್ನ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು,ನಂತರ ರಾಜ್ಯಮಟ್ಟದ ವಾಲಿಬಾಲ್ ಆಟಗಾರರನ್ನ ಸನ್ಮಾನಿಸಲಾಯಿತು.


ಕಾರ್ಯಕ್ರಮ ಉದ್ಘಾಟಿಸಿದ ಲೋಕೇಶ್ವರ್ ಮಾತನಾಡಿ ವಾಲಿಬಾಲ್ ಕ್ರೀಡೆ ಮನುಷ್ಯನ ಆರೋಗ್ಯಕ್ಕೆ ಸಹಕಾರಿಯಾಗಿದ್ದು,ತಿಪಟೂರಿನಲ್ಲಿ ವಾಲಿಬಾಲ್ ಗೆ ತನ್ನದೇ ಅದ ಇತಿಹಾಸವಿದ್ದು ಜಾಲಿವಾಲಿಬಾಲ್ ಸಂಸ್ಥೆ ಸ್ಥಾಪನೆ ಮಾಡಿ,ಹಲವಾರು ರಾಜ್ಯ ಹಾಗೂ ರಾಷ್ಟ್ರೀ ಮಟ್ಟದ ಆಟಗಾರರನ್ನ ತಯಾರು ಮಾಡುವ ಜೊತೆಗೆ ಕ್ರೀಡಾಕೂಟ ನಡೆಸುವ ಮೂಲಕ ಯುವಕರಿಗೆ ಪ್ರೋತ್ಸಾಹ ನೀಡಿದೆ, ತಿಪಟೂರು ಕ್ರೀಡೆಗೆ ಯಾವಾಗಲೂ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಯುವಕರಿಗೆ ಕ್ರೀಡೆಯಲಿ ಆಸಕ್ತಿ ಮೂಡುವಂತೆ ಮಾಡಬೇಕು ಎಂದು ತಿಳಿಸಿದರು.
ಕಾಂಗ್ರೇಸ್ ಮುಖಂಡ ಸಿ.ಬಿ ಶಶಿಧರ್ ಮಾತನಾಡಿ ಕ್ರೀಡೆಗೆ ರಾಜ್ಯ ಹಾಗೂ ದೇಶಗಳ ಗಡಿದಟಿ ಬೆಳೆಯುವ ತಾಕತ್ತು ಇದೆ, ಅಮೆರಿಕದಲ್ಲಿ ಹುಟ್ಟಿದೆ,ಕ್ರೀಡೆ ತಿಪಟೂರಿನ ಹಳ್ಳಿಗಾಡಿನ ಮಣ್ಣಿನಲ್ಲಿ ಪ್ರದರ್ಶನವಾಗುತ್ತಿರುವುದು,ಹೆಮ್ಮಯ ಸಂಗತಿಯಾಗಿದ್ದು, ತಿಪಟೂರಿನಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಮನವಿ ಮಾಡಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ತಾಲ್ಲೋಕು ಅಧ್ಯಕ್ಷ ಹೆಚ್.ಇ ರಮೇಶ್.ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಕರೀಕೆರೆ,ದೈಹಿಕ ಶಿಕ್ಷಣ ನಿರ್ದೇಶಕರಾದ ಶಮಂತ.ನಗರಸಭೆ ಸದಸ್ಯ ಸಂಗಮೇಶ್.ರೋಟರಿ ಅಧ್ಯಕ್ಷ ಗವಿಯಣ್ಣ ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

Leave a Reply

Your email address will not be published. Required fields are marked *

error: Content is protected !!