ತುಮಕೂರು ರೈಲು ನಿಲ್ದಾಣದ 4ನೇ ಪ್ಲಾಟ್ಫಾರ್ಮ್ನಲ್ಲಿ ಈ
ದುರ್ಘಟನೆ ಸಂಭವಿಸಿದ್ದು, ಬೆಂಗಳೂರಿನಿಂದ ತುಮಕೂರಿಗೆ
ಪ್ರಯಾಣಿಸುತ್ತಿದ್ದ ಯುವಕ ಅಪಘಾತಕ್ಕೊಳಗಾಗಿದ್ದಾರೆ. ಪುಷ್ಪಕ್
ಎಕ್ಸ್ಪ್ರೆಸ್ ರೈಲಿನಿಂದ ಇಳಿಯುವಾಗ ಅವಾಂತರ ಸಂಭವಿಸಿದೆ.

ಆಯತಪ್ಪಿ ರೈಲ್ವೆ ಟ್ರ್ಯಾಕ್ ಬಿದ್ದ ಯುವಕನ ದೇಹದ ಕಾಲು ತುಂಡಾಗಿದ್ದು ಸಾರ್ವಜನಿಕರ ನೆರವಿನಿಂದ ಮೇಲೆತ್ತಲು ಪ್ರಯತ್ನಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಯುವಕನ ಗುರುತು:
ಮೃತ ಯುವಕನು ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ
ಅಮ್ಮಸಂದ್ರ ಗ್ರಾಮದ ಛಾಯಾಂಕ್ (24) ಎಂದು
ಗುರುತಿಸಲಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ
ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಛಾಯಾಂಕ್, ತನ್ನ
ಊರಿಗೆ ಆಗಮಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ರಕ್ಷಣೆ ಪ್ರಯತ್ನ ವಿಫಲ:
ಅಪಘಾತದ ತಕ್ಷಣವೇ ಯುವಕನನ್ನು ಆಸ್ಪತ್ರೆಗೆ
ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ
ಕೊನೆಯುಸಿರೆಳೆದಿದ್ದಾರೆ. ದುರ್ಘಟನೆಯ ಸ್ಥಳದಲ್ಲಿ
ಹಾದುಹೋಗುತ್ತಿದ್ದ ಜನರು ತಕ್ಷಣವೇ ಯುವಕನ ಕುಟುಂಬಸ್ಥರ
ಸಂಪರ್ಕವನ್ನು ಮಾಡಿಕೊಂಡು ಮಾಹಿತಿ ನೀಡಿದ್ದಾರೆ.
ಪೊಲೀಸರ ತನಿಖೆ:
ಘಟನೆಯ ಕುರಿತು ತುಮಕೂರು ರೈಲ್ವೆ ಠಾಣೆಯ ಪೊಲೀಸರು
ತನಿಖೆ ಆರಂಭಿಸಿದ್ದು, ಈ ದುರ್ಘಟನೆ ಕುರಿತು ಹೆಚ್ಚಿನ ಮಾಹಿತಿ
ಸಂಗ್ರಹಿಸುತ್ತಿದ್ದಾರೆ.
ವರದಿ :ಮಂಜುನಾಥ್ ಹಾಲ್ಕುರಿಕೆ










Leave a Reply