ಅರಸೀಕೆರೆ : ತಾಲೂಕಿನ, ದೊಡ್ಡಮೇಟಿಕುರ್ಕೆ ಬೂದಿಹಾಳು ವಿರಕ್ತ ಮಠದಲ್ಲಿ ಜರುಗಿದ ಶ್ರೀ ಸಿದ್ಧಬಸವ ಶಿವಯೋಗಿಗಳವರ 68ನೇ ವರ್ಷದ, ಶ್ರೀ ಶಾಂತವೀರ ಮಹಾಸ್ವಾಮಿಗಳವರ 28ನೇ ವರ್ಷದ ಹಾಗೂ ಶ್ರೀ ರಾಜಶೇಖರ ಮಹಾಸ್ವಾಮಿಗಳವರ 11ನೇ ವರ್ಷದ ಪುಣ್ಯಸ್ಮರಣೋತ್ಸವ ಹಾಗೂ ಗುರುರಕ್ಷೆ ಕಾರ್ಯಕ್ರಮದಲ್ಲಿ , ಸಮಾಜದ ಅಭಿವೃದ್ಧಿ ಮತ್ತು ಜನಕಲ್ಯಾಣದ ಉದ್ದೇಶದಿಂದ ಕೈಗೊಂಡ ಸೇವೆಯನ್ನು ಗುರುತಿಸಿ ಕೆಪಿಸಿಸಿ ಸದಸ್ಯ ವಿ.ಯೋಗೇಶ್ ರವರಿಗೆ ಶ್ರೀ ಮಠದಿಂದ ನೀಡುವ “ಜನಸೇವಾ ಶಿರೋಮಣಿ” ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾಡಾಳು ವಿರಕ್ತ ಮಠದ ಶ್ರೀರುದ್ರಮುನಿ ಮಹಾಸ್ವಾಮೀಜಿ . ಬೂದಾಳು ವಿರಕ್ತ ಮಠದ ಶ್ರೀ ಶಶಿಶೇಖರ ಸಿದ್ದಬಸವ ಮಹಾಸ್ವಾಮೀಜಿ. ತಿಪಟೂರು ಷಡಕ್ಷರ ಮಠದ ಶ್ರೀ ರುದ್ರಮುನಿ ಮಹಾಸ್ವಾಮೀಜಿ.ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದರು.
ವರದಿ :ಮಂಜುನಾಥ್ ಹಾಲ್ಕುರಿಕೆ





