ನ್ಯಾಯ ಬೇಕು ಸ್ವಾಮಿ ನ್ಯಾಯಕೊಡಿ, ಕಾಣಿಯಾಗಿರುವ ನಮ್ಮ ಮಗಳನ್ನ ಹುಡಿಕಿಕೊಡಿ ಎಂದು ತಿಪಟೂರು ನಗರಪೋಲೀಸ್ ಠಾಣೆ ಮುಂದೆ ಅರೆಬೆತ್ತಲೆ ಪ್ರತಿಭಟನೆ .

Spread the love

ತಿಪಟೂರು ತಾಲ್ಲೋಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಗೆ ದಲಿತರಿಗೆ ನ್ಯಾಯ ದೊರೆಯುತ್ತಿಲ್ಲ ಎಂದು ತಿಪಟೂರಿನಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ// ಬಿ.ಆರ್ ಅಂಬೇಡ್ಕರ್ ಜಯಂತಿಯಂದು,ದಲಿತ ಸಂಘಟನೆ ಮುಖಂಡರು ಬಹಿರಂಗ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಾಸುವ ಮುನ್ನವೇ ಕಂಚಾಘಟ್ಟ ಗ್ರಾಮದ ದಲಿತರು ನ್ಯಾಯಕ್ಕಾಗಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಿರುವುದು, ತಾಲ್ಲೋಕಿನ ಕಾನೂನು ಸುವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ, ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿದ್ದಾರೆ.

ತಿಪಟೂರು ತಾಲ್ಲೋಕಿನ ಹಿರೇ ಬಿದಿರೆ ಗ್ರಾಮದ ರಕ್ಷಿತ್ ಎಂಬ ಹುಡುಗ ತಿಪಟೂರು ನಗರದ ಕಂಚಾಘಟ್ಟ ನಗರದವಾಸಿ ರಂಗಸ್ವಾಮಿ ಅವರ ಮಗಳು ಕವನ ಎಂಬ ಯುವತಿ ಪ್ರೇಮಿಸಿದ್ದು, ಕಳೆದ ನಾಲ್ಕೈದು ದಿನಗಳ ಹಿಂದೆ ಕಾಣಿಯಾಗಿರುತ್ತಾರೆ, ಏಪ್ರಿಲ್ 12 ರಂದು ಆಟೋದಲ್ಲಿ ಬಂದ ಯುವಕನ ತಾಯಿ ಹಾಗೂ ಆಕೆ ಸ್ನೇಹಿತರು, ಯುವತಿಯನ್ನ ಆಟೋಗೆ ಹತ್ತಿಸಿಕೊಂಡು ಯುವತಿ ಪೋಷಕರನ್ನ ಮನೆಯಲ್ಲಿ ಕೂಡಿಹಾಕಿ ಪಾರಾರಿಯಾಗಿರುತ್ತಾರೆ,ಈ ಬಗ್ಗೆ ಏಪ್ರಿಲ್ 14ರಂದು ತಿಪಟೂರು ನಗರಠಾಣೆ ದೂರು ನೀಡಲು ಹೋದಾಗ, ಸೂಕ್ತವಾಗಿ ಸ್ಪಂದಿಸದೆ,ನಾನು ಕರೆಸುತ್ತೇವೆ ಮನೆಗೆ ಹೋಗಿ ಎಂದು ಹಾರಿಕೆ ಉತ್ತರನೀಡಿ, ಯುವತಿ ಅಪಹರಣದ ಬಗ್ಗೆ ದೂರು ನೀಡಲು ಬಂದಿದ್ದ ಸಂತ್ರಸ್ಥರಿಂದ ದೂರು ಸಹ ಪಡೆಯದೆ ಮೌಖಿಕವಾಗಿ ಹುಡುಗಿ ಹುಡುಕಿ ಕೊಡುವುದಾಗಿ ಹೇಳಿ ಕಳಿಸಿದ್ದಾರೆ,,ದಲಿತ ಮುಖಂಡರು ಹಾಗೂ ನೊಂದ ಸಂತ್ರಸ್ಥರ ಪೋಟೊ ತೆಗೆಸಿ, ಪೊಲೀಸ್ ಠಾಣೆಯಲ್ಲಿ ಸಭೆ ನಡೆಸಲಾಗಿದೆ., ನಮ್ಮ ಯುವತಿ ಕಾಣಿಯಾಗಿದರೂ ಯಾವುದೇ ನ್ಯಾಯದೊರಕಿಸಿಕೊಟ್ಟಿಲ್ಲ ಅಂದು ಸಂತ್ರಸ್ಥರು ಆರೋಪಿಸಿದ್ದಾರೆ. ಸ್ವಾಮಿ ನಾವು ಅಮಾಯಕರು ನಮ್ಮ ಮಗಳು ಕಾಣಿಯಾಗಿ ನಾಲ್ಕೈದು ದಿನಗಳೆದರು ನಮಗೆ ನ್ಯಾಯದೊರಕಿಸಿಲ್ಲ,ಹುಡುಗನ ಕಡೆಯವರ ರಾಜಕೀಯ ಪ್ರಭಾವಕ್ಕೆ ಒಳಗಾಗಿ ನಮಗೆ ಅನ್ಯಾಯ ಮಾಡುತ್ತಿದ್ದಾರೆ, ಬಡವರಿಗೆ ನ್ಯಾಯವಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿ ತಿಪಟೂರು ನಗರಪೊಲೀಸ್ ಠಾಣೆ ಮುಂದೆ ಅರೆಬೆತ್ತಲೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

Leave a Reply

Your email address will not be published. Required fields are marked *

error: Content is protected !!