ತಿಪಟೂರು : ನಗರದ ಶ್ರೀ ಚಾಮುಂಡೇಶ್ವರಿ ಬಡಾವಣೆಯಲ್ಲಿ ಶ್ರೀ ಚಾಮುಂಡೇಶ್ವರಿ ಸೌಹಾರ್ದ ಪತ್ತಿನ ಸಹಕಾರ ಸಂಘದ ನೂತನ ನವೀಕೃತ ಕಟ್ಟಡ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಹಿಂದಿನ ಕಾಲದಲ್ಲಿ ಸಾಲ ಪಡೆಯಬೇಕಾದರೆ ಶ್ರೀಮಂತರ ಬಳಿ ಹೋಗಬೇಕಾಗಿತ್ತು, ಆದರೆ ಇಂದು ಸಹಕಾರ ಸಂಘಗಳು ರಾಷ್ಟ್ರದಲ್ಲಿ ಅತ್ಯುತ್ತಮವಾಗಿ ಆರ್ಥಿಕ ಕ್ಷೇತ್ರಗಳಲ್ಲಿಕಾರ್ಯ ನಿರ್ವಹಿಸುತ್ತಿವೆ, ಶ್ರೀ ಚಾಮುಂಡೇಶ್ವರಿ ಸಹಕಾರಿಯೂ ಕೂಡ ಶ್ರೀಮತಿ ವಿಶಾಲ ಸೋಮಶೇಖರ್ ರವರ ಮುಂದಾಳತ್ವದಲ್ಲಿ ನಗರದಲ್ಲಿ ಉತ್ತಮ ಸಹಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ, ಸಹಕಾರಿಗಳು ಬಲಗೊಳ್ಳಬೇಕಾದರೆ ಮರುಪಾವತಿ ಹಾಗೂ ಸೇವೆಗಳು ಕೂಡ ಅವಶ್ಯಕವಾಗಿದೆ,ನಗರದ ದೊಡ್ಡಯ್ಯನ ಪಾಳ್ಯದಲ್ಲಿರುವ ಶ್ರೀ ಚೌಡೇಶ್ವರಿ ಪತ್ತಿನ ಸಹಕಾರಿ ಕೂಡ ಸೋಮಣ್ಣನವರ ನೇತೃತ್ವದಲ್ಲಿ ಅತ್ಯುತ್ತಮವಾಗಿ ನಡೆಯುತ್ತಿದೆ,ಈ ಸಹಕಾರಿಗಳು ಕಲ್ಪತರು ನಾಡಿನಲ್ಲಿ ತನ್ನದೇ ಆದ ಉತ್ತಮ ಸೇವೆಯನ್ನು ಸಹಕಾರ ಕ್ಷೇತ್ರದಲ್ಲಿ ಮಾಡುತ್ತಿವೆ,ಸಹಕಾರ ತತ್ವದ ಅಡಿಯಲಿ ಕಾರ್ಯ ನಿರ್ವಹಿಸುತ್ತಿರುವ ಸಹಕಾರಿಗಳು ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಮತ್ತಷ್ಟು ಸೇವೆಗಳನ್ನು ನೀಡಲಿ ಎಂದು ಶ್ರೀಗಳು ಶುಭ ಹಾರೈಸಿದರು,

ಕಾರ್ಯಕ್ರಮದಲ್ಲಿ ಶ್ರೀ ಚಾಮುಂಡೇಶ್ವರಿ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಶ್ರೀಮತಿ ವಿಶಾಲ ಸೋಮಶೇಖರ್ ದಂಪತಿಗಳು ಶ್ರೀಗಳವರ ಪಾದಕ ಪೂಜೆ ನೆರವೇರಿಸಿದರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ತ್ರಿಯಂಬಕ, ಬೋರ್ವೆಲ್ ಮಧು, ಉದಯ ರವಿ ಪತ್ತಿನ ಸಹಕಾರಿಯ ಅಧ್ಯಕ್ಷ ರಾಜಣ್ಣ, ಶ್ರೀ ಚೌಡೇಶ್ವರಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಎಂ ಸಿ ಮಂಜುನಾಥ್, ಮರ್ಚೆಂಟ್ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಮಂಜುನಾಥ್, ಶ್ರೀ ಚಾಮುಂಡೇಶ್ವರಿ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷರಾದ ಮಹಮ್ಮದ್ ದಸ್ತಗಿರ್, ಪ್ರಸನ್ನ ಕುಮಾರ್, ದಿವಾಕರ್, ಶ್ರೀನಿವಾಸ್( ಮಾಜಿ ನಗರಸಭಾ ಸದಸ್ಯ) ಕೃಷ್ಣಕುಮಾರ್, ದತ್ತಾತ್ರೇಯ, ಸೋಮಶೇಖರ್, ಮಹೇಶ್, ಸುರೇಶ್, ಶ್ರೀಮತಿ ಲಕ್ಷ್ಮಿದೇವಮ್ಮ, ಶಂಕರ್ ಮೂರ್ತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಲ್ಲೇಶ್, ಆರ್ಕಿಟೆಕ್ ರಾಜೇಶ್, ಸುರೇಶ್ ಸೇರಿದಂತೆ ಸಹಕಾರಿಯ ಸದಸ್ಯರು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ವರದಿ :.ಮಂಜುನಾಥ್ ಹಾಲ್ಕುರಿಕೆ





