ತಿಪಟೂರು: ನಗರದ ಜೈ ಮಾರುತಿ ಟೆಕ್ವಾಂಡೋ ಶಾಲೆಯ 14ಕ್ಕೂ ಹೆಚ್ಚು ವಿದ್ಯಾರ್ಥಿಗಳು ಥೈಲ್ಯಾಂಡ್ ದೇಶದ ಬ್ಯಾಂಕಾಕ್ ನಗರದ ಮೇ 31ಹಾಗೂ 01ರಂದು ನಡೆಯಲಿರುವ ಪ್ಯಾಷನ್ ಐಸ್ ಲ್ಯಾಂಡ್‌ನಲ್ಲಿ ನಡೆಯುತ್ತಿರುವ 12ನೇ ಥೈಲ್ಯಾಂಡ್ ಓಪನ್ ಇಂಟರ್‌ನ್ಯಾಷನಲ್ ಟೆಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ತೆರಳಿದ್ದಾರೆ.

ಜೈ ಮಾರುತಿ ಟೆಕ್ವಾಂಡೋ ಶಾಲೆಯ ವಿದ್ಯಾರ್ಥಿಗಳಾದ ಯೋಜಸ್ ಜಿ., ಶ್ರೇಯಸ್ ಕೆ.ಪಿ., ಜಸ್ಟಿನ್, ಕೃಷನ್, ಕೀರ್ತಿಭೂಷಣ್, ಭುವನ್ ವೈ.ಪಿ., ಲೋಚನ್ ಎಂ.ಎಸ್., ತನಿಷ್ಕಾ, ಸ್ವಯಂ, ಮದನ್ ಕುಮಾರ್, ಹರಿನಂದನ್, ತಮ್ಮಣ್ಣ, ಪರೀಕ್ಷಿತ್ ಹಾಗೂ ಪ್ರಣವ್ ಲೋಕೇಶ್ ಸೇರಿದಂತೆ ಕೋಚ್ ವಿನಯ್ ಕುಮಾರ್ ನೇತೃತ್ವದ ತಂಡ ಚಾಂಪಿಯನ್‌ಶಿಪ್‌ಗೆ ತೆರಳಿದೆ.
ಮೇ 31 ಮತ್ತು ಜೂನ್ 1ರಂದು ಎರಡು ದಿನಗಳ ಕಾಲ ನಡೆಯಲಿರುವ ಈ ಚಾಂಪಿಯನ್‌ಶಿಪ್‌ನಲ್ಲಿ ವಿವಿಧ ದೇಶಗಳ ಟೆಕ್ವಾಂಡೋ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಥೈಲ್ಯಾಂಡ್‌ಗೆ ತೆರಳಿದ ವಿದ್ಯಾರ್ಥಿಗಳನ್ನು ನಗರದ ಕೆ.ಆರ್. ಬಡಾವಣೆಯ ಜೈ ಮಾರುತಿ ಟೆಕ್ವಾಂಡೋ ಶಾಲಾ ಆವರಣದಲ್ಲಿ ಅದ್ದೂರಿಯಾಗಿ ಬೀಳ್ಕೊಡಲಾಯಿತು.
ವರದಿ :ಮಂಜುನಾಥ್ ಹಾಲ್ಕುರಿಕೆ





