
ಮಣಿಕೆರೆ ಗ್ರಾಮದಲ್ಲಿ ನೂತನ ರಥದಲ್ಲಿ ವಿರಾಜಮಾನರಾದ ಶ್ರೀಕರಿಯಮ್ಮದೇವಿ ಹಾಗೂ ಶ್ರೀ ಆಂಜನೇಯ ಸ್ವಾಮಿ
ತಿಪಟೂರು: ತಾಲ್ಲೂಕಿನ ಪ್ರಸಿದ್ದ ಯಾತ್ರ ಕ್ಷೇತ್ರ ಮಣಿಕೆರೆ ಗ್ರಾಮ ದೇವತೆ ಶ್ರೀ ಕರಿಯಮ್ಮದೇವಿ ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಮಣಕಿಕೆರೆ ಗ್ರಾಮದ ಶ್ರೀ ಆಂಜನೇಯಸ್ವಾಮಿ ಹಾಗು ಶ್ರೀ ಕರಿಯಮ್ಮದೇವಿಯವರ ನೂತನ ರಥದ ಪ್ರಾರಂಭೋತ್ಸವ ಹಾಗು ಶ್ರೀ ಚಿಕ್ಕಮ್ಮ ದೇವಿಗಳ ಶೀಲಾದೇಗುಲದ ಕಳಸ ಸ್ಥಾಪನೆ ಕೆರೆಗೋಡಿ ರಂಗಾಪುರದ ಗುರುಪರದೇಶಿಕೇಂದ್ರ ಶ್ರೀಗಳ ಹಾಗು ಶ್ರೀ ಮಂಕಮ್ಮದೇವಿ ಶ್ರೀ ದೂತರಾಯ ಸ್ವಾಮಿಯವರ ಸಾನಿಧ್ಯದಲ್ಲಿ ಸಾಂಘವಾಗಿ ನೆರವೇರಿತು. ಅಮ್ಮನವರಿಗೆ ಗಂಗಾಪೂಜೆ, ಅಭಿಷೇಕ,ಹೋಮ ಹವನ ಮಹಾಮಂಗಳಾರತಿ ನಡೆಯಿತು.ಗ್ರಾಮದ ಶ್ರೀ ಸೋಮೇಶ್ವರಸ್ವಾಮಿ, ಮೈಲಾರಲಿಂಗೇಶ್ವರಸ್ವಾಮಿ, ಅಂತರಘಟ್ಟೆ ಅಮ್ಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ದೇವರುಗಳಾದ ಕಲ್ಕೆರೆ ಆದಿನಾಯಕನಹಳ್ಳಿ ಶ್ರೀ ಕೆಂಪಮ್ಮ ಚಿಕ್ಕಮ್ಮ ದೇವಿ, ಸಾರ್ಥವಳ್ಳಿ ಶ್ರೀ ಹುಚ್ಚಮ್ಮ ಚಿಕ್ಕಮ್ಮ ದೇವಿ, ಹಾಲ್ಕುರಿಕೆ ಶ್ರೀ ಕೆಂಪಮ್ಮ ಚಿಕ್ಕಮ್ಮ ದೇವಿ, ಚೌಲಿಹಳ್ಳಿ ಶ್ರೀ ಕರಿಕಲ್ಲಮ್ಮ ದೇವಿ ದೊಡ್ಡಯ್ಯಸ್ವಾಮಿ, ಹಾಲೇನಹಳ್ಳಿ ಶ್ರೀ ಕರಿಯಮ್ಮದೇವಿ ದೂತರಾಯಸ್ವಾಮಿ, ವಡ್ಡರಹಟ್ಟಿ ಶ್ರೀ ಕೆಂಪಮ್ಮ ದೂತರಾಯಸ್ವಾಮಿ, ಲಕ್ಷ್ಮೀಪುರ ಗೊಲ್ಲರಹಟ್ಟಿ ಶ್ರೀ ಬೇವಿನಹಳ್ಳಿಅಮ್ಮ, ದೂತರಾಯಸ್ವಾಮಿ, ಜುಂಜಪ್ಪಸ್ವಾಮಿ, ಘಟಕಿನಕೆರೆ ಶ್ರೀ ಕರಿಯಮ್ಮದೇವಿ ದೂತರಾಯಸ್ವಾಮಿ, ಬೈರಾಪುರ ಶ್ರೀ ಕರಿಯಮ್ಮದೇವಿ, ಚಿಕ್ಕಮ್ಮದೇವಿ, ದೂತರಾಯಸ್ವಾಮಿ ದೇವರುಗಳು ಸೇರಿದಂತೆ ಸಾವಿರಾರು ಜನ ಭಕ್ತಾದಿಗಳು ಪಾಲ್ಗೊಂಡಿದ್ದರು.
ವರದಿ: ಮಂಜುನಾಥ್ ಹಾಲ್ಕುರಿಕೆ










Leave a Reply